ಸಾಲಬಾಧೆಯಿಂದ ನೊಂದು ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆ

Update: 2016-12-26 08:24 GMT

ಕಡೂರು, ಡಿ.26: ಸಾಲಬಾಧೆಗೆ ಸಿಲುಕಿದ ರೈತನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಚಗೊಂಡನಹಳ್ಳಿ ಎಂಬಲ್ಲಿ ನಡೆದಿದೆ.

ಕಡೂರು ತಾಲೂಕಿನ ಮಾಚನಗೊಂಡನಹಳ್ಳಿಯ ಈರಪ್ಪ68) ಮೃತಪಟ್ಟವರು. ಇವರು ತನ್ನ ಪುತ್ರ ಎಂ.ಇ.ಈಶ್ವರಪ್ಪರೊಂದಿಗೆ ಸೇರಿಕೊಂಡು ಡಿ.ಕಾರೇಹಳ್ಳಿ ಗ್ರಾಮದ ಸ.ನಂ.101ರಲ್ಲಿ ಹಾಗೂ ಇತರೆ ಜಮೀನಿನಲ್ಲಿ ಐದು ಕೊಳವೆಬಾವಿಗಳನ್ನು ಕೊರೆಸಲು ಸೇರಿದಂತೆ ಕೃಷಿ ಚಟುವಟಿಕೆಗಾಗಿ ವಿ.ಎಸ್.ಎಸ್.ಎನ್. ಸೂಸೈಟಿಯಲ್ಲಿ ರೂ.45,000, ಆಂಧ್ರ ಬ್ಯಾಂಕ್‌ನಿಂದ ರೂ. 45,000, ದೇವನೂರು ವಿಜಯ ಬ್ಯಾಂಕ್‌ನಿಂದ ಬಂಗಾರ ಅಡವಿಟ್ಟು ರೂ. 35,000 ಹಾಗೂ ಪ್ರತ್ಯೇಕವಾಗಿ ರೂ. 1,80,000 ಸಾಲ ಮಾಡಿದ್ದರು.

ಆದರೆ ಕೇವಲ ಒಂದು ಕೊಳವೆಬಾವಿಯಲ್ಲಿ ನೀರು ದೊರೆತಿದ್ದು, ಉಳಿದ ನಾಲ್ಕರಲ್ಲಿ ನೀರು ಸಿಕ್ಕಿರಲಿಲ್ಲ. ನೀರಿಲ್ಲದೆ ಜಮೀನನಲ್ಲಿ ಬೆಳೆದಿದ್ದ ಕಲ್ಲಂಗಡಿ ಹಾಗೂ ಟಮೊಟೋ ಬೆಳೆ ಕರಟಿ ಹೋಗಿತ್ತು. ಇದರಿಂದ ಮನನೊಂದಿದ್ದ ಈರಪ್ಪತನ್ನ ಗುಡಿಸಲಿನ ಸಮೀಪವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
 ಈ ಬಗ್ಗೆ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News