ಫ್ಯಾಶನ್ ಟೆಕ್ನಾಲಜಿ ಉಚಿತ ತರಬೇತಿ

Update: 2017-01-05 12:57 GMT

ಮಂಗಳೂರು, ಜ.5: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ, ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ನಿರುದ್ಯೋಗಿ ಮಹಿಳಾ/ಪುರುಷ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಫ್ಯಾಶನ್ ಟೆಕ್ನಾಲಜಿಯ ಉಚಿತ ತರಬೇತಿಯನ್ನು ತರಬೇತಿ ಭತ್ಯೆಯೊಂದಿಗೆ ನೀಡಲಾಗುವುದು.

 ಆಸಕ್ತ ಹಿಂದುಳಿದ ವರ್ಗಗಳ ಪ್ರವರ್ಗ -1, 2ಎ, 3ಎ ಮತ್ತು 3ಬಿ ಗಳಿಗೆ ಸೇರಿದ, ಅರ್ಹ ನಿರುದ್ಯೋಗಿ ಮಹಿಳಾ/ಪುರುಷ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜ.17ರೊಳಗೆ ಅದೇ ಕಚೇರಿಗೆ ಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾತಿಗಾಗಿ ಇಲಾಖಾ ವೆಬ್‌ಸೈಟ್ www.backwardclasses.kar.nic.in ಗೆ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News