ದಿಲ್ಲಿ ಫರ್ನಿಚರ್ ಇಂಟೀರಿಯರ್ ಡಿಸೈನ್ ಅವಾರ್ಡ್ಸ್-2016 ಅರ್ಜಿ ಆಹ್ವಾನ

Update: 2017-01-10 11:51 GMT

ಮಂಗಳೂರು,ಜ.10: ಎಕೆ ಗ್ರೂಪ್ ಅಂಡ್ ಆ್ಯಪಲ್ ಪ್ಲೈವುಡ್, ಆರ್ಕಿಟೆಕ್ಟ್ ಗಿಲ್ಡ್ ಸಹಯೋಗದಲ್ಲಿ ದಿಲ್ಲಿ ಫರ್ನಿಚರ್ ಇಂಟೀರಿಯರ್ ಡಿಸೈನ್ ಪ್ರಶಸ್ತಿ-2016ನ್ನು ಘೋಷಿಸಿದೆ. ಇದು ನಗರದಲ್ಲಿ ಮೊಟ್ಟಮೊದಲ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ವಾಸ್ತುಶಿಲ್ಪಿಗಳಿಗೆ, ಒಳಾಂಗಣ ವಿನ್ಯಾಸಗಾರರಿಗೆ ಹಾಗೂ ವಿನ್ಯಾಸ ತಂಡಗಳಿಗೆ ಉತ್ತಮ ವೇದಿಕೆ ಒದಗಿಸಿಕೊಡಲಿದೆ. ತಮ್ಮ ಸೃಜನಶೀಲ ಬುದ್ಧಿಮತ್ತೆಯನ್ನು ಪ್ರದರ್ಶಿಸಲು ಅವಕಾಶ. ಈ ಸ್ಪರ್ಧೆಯು ಉಡುಪಿ ಹಾಗೂ ಮಂಗಳೂರಿನ ವಿದ್ಯಾರ್ಥಿಗಳಿಗೆ ಹಾಗೂ ವೃತ್ತಿನಿರತರಿಗೆ ಮುಕ್ತವಾಗಿದೆ.

ಸೃಜನಶೀಲತೆಯ ತುಡಿತ ಹಾಗೂ ಜಾಣ್ಮೆ ಭಾಷೆಯ ತಡೆಗಳನ್ನು ಮೀರುವ ಹಾಗೂ ಪ್ರತಿಯೊಬ್ಬರೊಂದಿಗೂ ಮಾತನಾಡುವಂಥದ್ದು. ಈ ಪ್ರಶಸ್ತಿಯು ಹೊಸ ವೃತ್ತಿ ಅವಕಾಶಗಳಿಗೆ ಸ್ಪಿಂಗ್‌ಬೋರ್ಡ್ ಆಗಲಿದೆ. ಕಟ್ಟಡಗಳಿಗೆ ಸೀಮಿತವಾದ ಪ್ರಾಯೋಗಿಕ ಉದ್ದೇಶವನ್ನು ಮೀರಿದ ಈ ಪ್ರಶಸ್ತಿಯು, ತಲೆಮಾರುಗಳ ಕಾಲ ನೆನಪಿನಲ್ಲಿ ಉಳಿಯುವ, ಜನರಿಗೆ ಸ್ಫೂರ್ತಿದಾಯಕ ಎನಿಸಿದ ಹಾಗೂ ಬದುಕನ್ನು ಸಮೃದ್ಧಗೊಳಿಸುವ ವಿನ್ಯಾಸಗಳನ್ನು ನಿರೀಕ್ಷಿಸುತ್ತದೆ. ಅಪೂರ್ವ ಪ್ರತಿಭೆಗಳತ್ತ ನಮ್ಮ ನೋಟ.

ಪ್ರಶಸ್ತಿಯಲ್ಲಿ ಭಾಗವಹಿಸಲು ಇರುವ ಮಾರ್ಗಸೂಚಿಗಳು ಈ ಕೆಳಗಿನಂತಿವೆ:

ಪ್ರಶಸ್ತಿಗೆ ಪ್ರವೇಶಗಳನ್ನು ಆನ್‌ಲೈನ್ ಅಥವಾ ಹಾರ್ಡ್‌ಕಾಪಿ ಅರ್ಜಿಗಳ ಮೂಲಕ ಸಲ್ಲಿಸಬಹುದು.

ನಿಯಮ ಹಾಗೂ ನಿಬಂಧನೆಗಳಿಗೆ ಒಳಪಟ್ಟ ಅರ್ಜಿಗಳಷ್ಟೇ ಪ್ರವೇಶಕ್ಕೆ ಅರ್ಹವಾಗಿರುತ್ತವೆ.

ಒಳಾಂಗಣ ವಿನ್ಯಾಸ ಪ್ರಶಸ್ತಿಯು ಎರಡು ವಿಭಿನ್ನ ವರ್ಗವನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಹಾಗೂ ವೃತ್ತಿಪರರು.

2017ರ ಜನವರಿ 14ರ ಬಳಿಕ ಬಂದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

ವಿದ್ಯಾರ್ಥಿಗಳ ಅರ್ಜಿಗಳು ವಿನೂತನ ಒಳಾಂಗಣ ವಿನ್ಯಾಸ  ಪ್ರಶಸ್ತಿಗೆ ಅರ್ಹವಾಗಿರುತ್ತವೆ.

ವೃತ್ತಿಪರರ ಪ್ರವೇಶಗಳು ಎರಡು ವಿಭಿನ್ನ ಪ್ರಶಸ್ತಿಗಳಿಗೆ ಅರ್ಹವಾಗಿರುತ್ತವೆ. ಒಂದು; ವಿಲ್ಲಾ ಅಥವಾ ಫ್ಲಾಟ್‌ಗಳನ್ನು ಒಳಗೊಂಡ ವಸತಿ ಯೋಜನೆಗಳ ಒಳಾಂಗಣ ವಿನ್ಯಾಸ ಪ್ರಶಸ್ತಿ ಹಾಗೂ ಇನ್ನೊಂದು, ವಾಣಿಜ್ಯ ಯೋಜನೆ ಪ್ರಶಸ್ತಿ.

ವಿದ್ಯಾರ್ಥಿಗಳು

ಅರ್ಹತೆ

ಒಳಾಂಗಣ ವಿನ್ಯಾಸದಲ್ಲಿ ಬ್ಯಾಚುಲರ್ ಡಿಗ್ರಿ ವ್ಯಾಸಂಗ ಮಾಡುತ್ತಿರುವ ಅಥವಾ ಬಿ ಆರ್ಚ್ ಅಥವಾ ಬಿಆರ್ಚ್ (ಐಡಿ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಗುಂಪು ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಒಂದು ಗುಂಪು ಕೇವಲ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಹೊಂದಿರಬಹುದಾಗಿದೆ.

ಅಗತ್ಯತೆಗಳು

ಎರಡು ಬಿಎಚ್‌ಕೆ ಮನೆಯ ಅಥವಾ ಫ್ಲಾಟ್‌ನ ಒಳಾಂಗಣ ವಿನ್ಯಾಸದಲ್ಲಿ ಒಂದು ಫೋಯರ್, ಲಿವಿಂಗ್ ರೂಂ, ಡೈನಿಂಗ್ ರೂಮ್, ಕಿಚನ್ ಹಾಗೂ ಬೆಡ್‌ರೂಂಗಳು ಇರಬೇಕು.

ಎಲ್ಲ ಸಲ್ಲಿಕೆಗಳು ಎ2 ಗಾತ್ರದ ಶೀಟ್‌ಗಳಲ್ಲಿದ್ದು, ಪೋಟ್ರೈಟ್ ಅಥವಾ ಲ್ಯಾಂಡ್‌ಸ್ಕೇಪ್ ರೂಪದಲ್ಲಿ ಇರಬಹುದು.

ಪ್ರತಿ ಪ್ರವೇಶಕ್ಕೆ ಕೇವಲ 2 ಶೀಟುಗಳ ನಿರ್ಬಂಧ ಇದೆ.

ಮಾನದಂಡ

ಪ್ರತಿ ಪ್ರವೇಶವನ್ನು ಪೀಠಿಕೆ, ಪರಿಕಲ್ಪನೆ ಹಾಗೂ ಸಮರ್ಥನೆ, ನಿವಾಸದ ಯೋಜನೆ, ವಿನ್ಯಾಸ ಅಥವಾ ವಸ್ತುಗಳಲ್ಲಿನ ವಿನೂತನ ಗುಣಲಕ್ಷಣಗಳು ಹಾಗೂ 3ಡಿ ವ್ಯೆ, ಫೋಟೊಗ್ರಾಫ್‌ಮ ಮಾಡೆಲ್ ಅಥವಾ ಸ್ಕೆಚ್ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುವುದು

ಲೈವ್ ಪ್ರಾಜೆಕ್ಟ್‌ಗಾಗಿ ಯೋಜನೆಯ 3ಡಿ ಇಮೇಜ್ ಹಾಗೂ 2ಡಿ ಡ್ರಾಯಿಂಗ್, ವಿಭಾಗ ಅಥವಾ ವಿಭಾಗವಾರು ಎಲಿವೇಶನ್ ನೀಡಿ. ಸಮಾರಂಭದ ವೇಳೆ ಪ್ರದರ್ಶಿಸಲು ಹಾರ್ಡ್‌ಕಾಪಿಯ ಜತೆಗೆ ಡಿಜಿಟಲ್ ಫೋಟೊಗಳ ಸಿ.ಡಿ ನೀಡಿ.

ಲೈವ್ ಪ್ರಾಜೆಕ್ಟ್ ವೀಕ್ಷಣೆಗಾಗಿ ಛಾಯಾಚಿತ್ರಗಳು, ಮಾಡಲ್ ಹಾಗೂ ಸ್ಕೆಚ್‌ಗಳನ್ನು ನೀಡಿ. ಲಭ್ಯವಿದ್ದರೆ ವೀಡಿಯೊಗಳನ್ನು ಸಿಡಿಗಳಲ್ಲಿ ಎಂಪೆಗ್ ಫೈಲ್ ರೂಪದಲ್ಲಿ ನೀಡಿ. ಡಿವಿಡಿ ರೂಪದ ಹಾಗೂ ಹೌಸ್‌ವೇರಿಂಗ್ ವೀಡಿಯೊಗಳು ಬೇಡ.

ಹೆಚ್ಚಿನ ಮಾಹಿತಿಗೆ ದಯವಿಟ್ಟು ಕೊನೆಯಲ್ಲಿ ನೀಡಲಾದ ಸಂಬಂಧಿತ ಅಧಿಕಾರಿಯನ್ನು ಸಂಪರ್ಕಿಸಿ.

ವೃತ್ತಿಪರರು

ವೃತ್ತಿಪರ ಅರ್ಜಿಗಳನ್ನು ಪರಿಕಲ್ಪನೆ ಹಾಗೂ ಯೋಜನೆಯ ಅನುಷ್ಠಾನ ಆಧಾರದಲ್ಲಿ ತೀರ್ಮಾನಿಸಲಾಗುವುದು.

ಅಧಿಕೃತ ಒಳಾಂಗಣ ವಿನ್ಯಾಸ ಪ್ರಶಸ್ತಿ ಪ್ರವೇಶಕ್ಕೆ ದಯವಿಟ್ಟು ಡಿಜಿಟಲ್ ಛಾಯಾಚಿತ್ರಗಳು, ಮಾಡಲ್ ಹಾಗೂ ಸ್ಕೆಚ್‌ಗಳನ್ನು ನೀಡಿ. ಲಭ್ಯವಿದ್ದರೆ ವೀಡಿಯೊಗಳನ್ನು ಸಿಡಿಗಳಲ್ಲಿ ಎಂಪೆಗ್ ಫೈಲ್ ರೂಪದಲ್ಲಿ ನೀಡಿ. ಡಿವಿಡಿ ರೂಪದ ಹಾಗೂ ಹೌಸ್‌ವೇರಿಂಗ್ ವೀಡಿಯೊಗಳು ಬೇಡ.

ಹೆಚ್ಚಿನ ಮಾಹಿತಿಗೆ ದಯವಿಟ್ಟು ಕೊನೆಯಲ್ಲಿ ನೀಡಲಾದ ಸಂಬಂಧಿತ ಅಧಿಕಾರಿಯನ್ನು ಸಂಪರ್ಕಿಸಿ.

ಆ್ಯಪಲ್ ಪ್ಲೈ ಬಗ್ಗೆ

ಭಾರತದಾದ್ಯಂತ ಪ್ರಮುಖ ಪ್ಲೈವುಡ್ ಉತ್ಪಾದಕರಲ್ಲಿ ಅಗ್ರಗಣ್ಯ ಸಂಸ್ಥೆಗಳಲ್ಲೊಂದಾದ ಆ್ಯಪಲ್ ಪ್ಲೈನ ಉತ್ಪನ್ನಗಳು ಎಲ್ಲ ಗಣ್ಯ ವಾಸ್ತುಶಿಲ್ಪಿಗಳು ಹಾಗೂ ಒಳಾಂಗಣ ವಿನ್ಯಾಸಗಾರರ ಆಯ್ಕೆ. ಉತ್ಪನ್ನಗಳ ಬಹು ಉಪಯೋಗಿ ಗುಣಗಳು, ನಿರ್ಮಾಣ ವ್ಯವಹಾರದ ಸೌಂದರ್ಯಾತ್ಮಕ, ಕ್ರಿಯಾಶೀಲ ಮನಸ್ಸುಗಳನ್ನು ಹೊಸ ದಿಗಂತದತ್ತ ಒಯ್ಯಲಿವೆ. ಆ್ಯಪಲ್ ಪ್ಲೈ ವಿಶೇಷ ಗ್ರಾಹಕರಿಗೆ ಸೀಮಿತವಾದ ಅನ್ವಯಿಕೆಗೆ ಒಳಾಂಗಣ ಆಯ್ಕೆಯನ್ನು ಹೊಂದಿವೆ.

ದಿಲ್ಲಿ ಫರ್ನಿಚರ್ಸ್‌ ಬಗ್ಗೆ

ಗ್ರಾಹಕರಿಗೆ ನಿರಂತರ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಸಂಪೂರ್ಣ ತೃಪ್ತಿ ನೀಡುವ ನಿಟ್ಟಿನಲ್ಲಿ ಡಿಲ್ಲಿ ಫರ್ನಿಚರ್ಸ್‌ ಬದ್ಧವಾಗಿದೆ. ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳಾದ, ಪೂರ್ಣಗೊಂಡ ಉತ್ಪನ್ನಗಳನ್ನು ಸಕಾಲಕ್ಕೆ ವಿತರಣೆ ಮಾಡುವುದು, ಕಾಲಕಾಲಕ್ಕೆ ಅಗತ್ಯವಾದಂತೆ ಪ್ರಮುಖ ಅಗತ್ಯ ಬದಲಾವಣೆಗಳನ್ನು ಮಾಡುವುದು ಕೂಡಾ ಇದರಲ್ಲಿ ಸೇರಿದೆ. ಉತ್ಪಾದಕತೆಯಲ್ಲಿ ಸುಧಾರಣೆ ಖಾತ್ರಿಪಡಿಸುವ ಸಲುವಾಗಿ, ಎಲ್ಲ ವೃತ್ತಿಪರ ಸಿಬ್ಬಂದಿಗೆ ಸೂಕ್ತವಾದ ತರಬೇತಿಯನ್ನು ಕೆಲಸದ ವೇಳೆಯಲ್ಲಿ ನೀಡಲಾಗುತ್ತದೆ. ಹೊಸ ತಂತ್ರಜ್ಞಾನ ಹಾಗೂ ವಿಧಾನವನ್ನು ಅನ್ವಯಿಸುವ ಮೂಲಕ ಗುಣಮಟ್ಟ ಸುಧಾರಣೆ ಯೋಜನೆಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಬ್ರಿಜೇಶ್ ಶರ್ಮಾ

+919148946156

ಡೆಲ್ಲಿ ಫರ್ನಿಚರ್

ಪ್ಲಾಟ್ ನಂ. 409 & 410, ಕೈಗಾರಿಕಾ ಪ್ರದೇಶ, ಬೈಕಂಪಾಡಿ, ಮಂಗಳೂರು- 575011

ಫರ್ಹಾನ್ ಸುಹೈಬ್

+91 7204638394

ಡಿಲ್ಲಿ ಫರ್ನಿಚರ್

ಎಕ್ಸ್‌ವೆಂಟ್ಸ್, 3ನೇ ಮಹಡಿ, ಫಾರ್ಚ್ಯೂನ್ ಬಿಲ್ಡಿಂಗ್, ಅತ್ತಾವರ, ಮಂಗಳೂರು- 575001

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News