ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ

Update: 2017-01-12 15:25 GMT

ಮಂಗಳೂರು, ಜ.12: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು (ನಗರ) ವ್ಯಾಪ್ತಿಯ ವಿವಿಧ ಅಂಗನವಾಡಿಗಳಿಗೆ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

     ಅತ್ತಾವರ ಶಾಲೆ (2) ಯೂತ್ ಸ್ಪೋರ್ಟ್ಸ್ ಕ್ಲಬ್ ತಣ್ಣೀರುಬಾವಿ (3) 8ನೇ ವಿಭಾಗ ಚೊಕ್ಕಬೆಟ್ಟು (4) ಕುದ್ರೋಳಿ ಬೆಂಗ್ರೆ, ಒಟ್ಟು 4 ಅಂಗನವಾಡಿಗಳ ಕಾರ್ಯಕರ್ತೆಯರ ಹುದ್ದೆಗೆ ಎಸೆಸೆಲ್ಸಿ ಉತ್ತೀರ್ಣರಾಗಿರುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

      ಅಂಗನವಾಡಿ ಸಹಾಯಕಿಯರ ಹುದ್ದೆಗೆ (1) ಶಾಂತಿನಗರ -ಬಜಾಲ್, (2) ಅರ್ಸುಲ (ಪೋರ್ಟ್ ವಾರ್ಡ್), (3) ಜೋಡುಕಟ್ಟೆ -ಮರೋಳಿ (4) ಕುಂಜತ್‌ಬೈಲ್ ಬಾವಿ (5) ಉರುಂದಾಡಿ - ಕಾವೂರು ಗ್ರಾಮ, (6)ಅಂಬನಗರ-ಹೊಗೆ ಬಜಾರ್ (7) ಮೇರಿಹಿಲ್ (8) ಪರಾರಿ -ತಿರುವೈಲು (9) ವ್ಶೆದ್ಯಾನಾಥ ನಗರ ಪಚ್ಚನಾಡಿ (10) ಬದ್ರಿಯಾ ಶಾಲೆ ಬಂದರು ಒಟ್ಟು 10 ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ನೆ ತರಗತಿಯಿಂದ 9ನೆ ತರಗತಿ ಉತ್ತೀರ್ಣ ವಿದ್ಯಾಭ್ಯಾಸವುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

   ಈ ಎಲ್ಲಾ ಹುದ್ದೆಗಳು ಸಾಮಾನ್ಯ ವರ್ಗವಾಗಿದ್ದು ಅರ್ಜಿ ಸಲ್ಲಿಸಲು ಫೆ. 4 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಲ್ವರ್ ಕ್ರಾಸ್ ರೋಡ್ ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು 0824-2432809 ಇಲ್ಲಿಗೆ ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News