ಎಸ್‌ಸಿ/ಎಸ್‌ಟಿ ವರ್ಗದವರಿಗೆ ಪ್ರವಾಸಿ ಟ್ಯಾಕ್ಸಿ: ಅರ್ಜಿ ಆಹ್ವಾನ

Update: 2017-01-12 15:26 GMT

ಮಂಗಳೂರು, ಜ.12: ಪ್ರವಾಸೋದ್ಯಮ ಇಲಾಖೆಯಿಂದ 2016-17ನೆ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಲಘುವಾಹನ ಚಾಲನಾ ಪರವಾನಗಿ ಹಾಗೂ ಚಾಲಕರ ಬ್ಯಾಡ್ಜ್ ಹೊಂದಿದ್ದು, 20ರಿಂದ 40 ವರ್ಷ ವಯೋಮಿತಿಯೊಳಗಿರುವ ಪರಿಶಿಷ್ಟ ಜಾತಿಯ 16 ಮತ್ತು ಪರಿಶಿಷ್ಟ ಪಂಗಡದ 4 ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಪ್ರವಾಸಿ ವಾಹನಗಳನ್ನು ಖರೀದಿಸಿ ವಿತರಿಸುವ ಸಲುವಾಗಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ದ್ವಿ-ಪ್ರತಿಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

     ಪ್ರವಾಸಿ ಟ್ಯಾಕ್ಸಿಗಳಿಗೆ ತಗುಲುವ ವೆಚ್ಚಕ್ಕೆ ಗರಿಷ್ಠ 2 ರೂ.ಗಳನ್ನು ಇಲಾಖೆಯಿಂದ ಸಹಾಯ ಧನ ರೂಪದಲ್ಲಿ ನೀಡಲಾಗುವುದು. ಟ್ಯಾಕ್ಸಿ ಮೊತ್ತದ ಶೇ.5ರಷ್ಟು ಅಥವಾ ಆಯ್ಕೆಯ ವಾಹನಕ್ಕೆ ಹೆಚ್ಚುವರಿ ಡೌನ್ ಪೇಮೆಂಟ್ ಹಣವನ್ನು ಫಲಾನುಭವಿಯಿಂದ ಭರಿಸಿಕೊಂಡು ಉಳಿದ ಮೊತ್ತವನ್ನು ರಾಷ್ಟ್ರೀಕೃತ/ವಾಣಿಜ್ಯ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಿ ಖರೀದಿಸಿ ವಿತರಿಸಲಾಗುವುದು. ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾಗಿದ್ದು, 20 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಖುದ್ದಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ಲಾಲ್‌ಬಾಗ್, ಮಂಗಳೂರು ಇವರಿಂದ ಪಡೆದು, ದ್ವಿ-ಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸೀಲು ಮಾಡಿದ ಲಕೋಟೆಯೊಂದಿಗೆ ಫೆಬ್ರವರಿ 10ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ:0824-2453926 ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News