ವಿಕಲಚೇತನರಿಂದ ಅರ್ಜಿ ಆಹ್ವಾನ

Update: 2017-01-16 14:21 GMT

ಉಡುಪಿ, ಜ.16: ವಿದ್ಯಾವಂತ ನಿರುದ್ಯೋಗಿ ಅಂಗವಿಕಲರಿಗೆ ಗುಣಾತ್ಮಕ ತರಬೇತಿಯನ್ನು ನೀಡಿ ಅವರಿಗೆ ಜನಸಾಮಾನ್ಯರಂತೆ ಉನ್ನತ ಹುದ್ದೆಗಳನ್ನು ಪಡೆಯಲು ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿದ್ಯಾವಂತ ನಿರುದ್ಯೋಗಿ ಅಂಗವಿಕಲರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸಹಾಯಧನ ನೀಡುವ ‘ಸ್ಪರ್ಧಾ ಚೇತನ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದಿಂದ ನಡೆಸುವ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಪರೀಕ್ಷೆಗಳಿಗೆ, ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದಿಂದ ನಡೆಸುವ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಪರೀಕ್ಷೆಗಳಿಗೆ, ಬ್ಯಾಂಕ್/ಜೀವವಿಮಾ ನಿಗಮ/ ಸರಕಾರಿ ಸ್ವಾಮ್ಯದ ಉದ್ದಿಮೆ ಗಳು ಮತ್ತು ಇತರೆ ಸಂಸ್ಥೆಗಳು ನಡೆಸುವ ಅಧಿಕಾರಿ/ಪ್ರಥಮ ದರ್ಜೆ, ದ್ವಿತೀಯ ದರ್ಜೆ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸಹಾಯ ಧನ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

 ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ 18ವರ್ಷಕ್ಕಿಂತ ಹೆಚ್ಚು ಹಾಗೂ ನೇಮಕಾತಿ ಪ್ರಾಧಿಕಾರಗಳು ಹೊರಡಿಸುವ ಅಧಿಸೂಚನೆಯಲ್ಲಿ ನಿಗದಿ ಗೊಳಿಸಿರುವ ಗರಿಷ್ಠ ವಯೋಮಿತಿಯೊಳಗಿರುವ ಪಿಯುಸಿ ನಂತರದ ವ್ಯಾಸಂಗ ಹೊಂದಿರುವ ಹಾಗೂ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ/ಸಲ್ಲಿಸುವ ಆಸಕ್ತಿಯಿರುವ ವಿಕಲಚೇತನ ವ್ಯಕ್ತಿಗಳು ಸ್ಪರ್ಧಾಚೇತನ ಯೋಜನೆಗೆ ಜ.20ರೊಳಗೆ ಅರ್ಜಿ ಸಲ್ಲಿಸಬಹುದು. ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ 18ವರ್ಷಕ್ಕಿಂತ ಹೆಚ್ಚು ಹಾಗೂ ನೇಮಕಾತಿ ಪ್ರಾಧಿಕಾರಗಳು ಹೊರಡಿಸುವ ಅಧಿಸೂಚನೆಯಲ್ಲಿ ನಿಗದಿ ಗೊಳಿಸಿರುವ ಗರಿಷ್ಠ ವಯೋಮಿತಿಯೊಳಗಿರುವ ಪಿಯುಸಿ ನಂತರದ ವ್ಯಾಸಂಗ ಹೊಂದಿರುವ ಹಾಗೂ ಯಾವುದಾದರೂ ರ್ಸ್ಪಾತ್ಮಕಪರೀಕ್ಷೆಗಳಿಗೆಈಗಾಗಲೇಅರ್ಜಿಸಲ್ಲಿಸಿರುವ/ಸಲ್ಲಿಸುವಆಸಕ್ತಿಯಿರುವವಿಕಲಚೇತನವ್ಯಕ್ತಿಗಳುರ್ಸ್ಪಾಚೇತನ ಯೋಜನೆಗೆ ಜ.20ರೊಳಗೆ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಛೇರಿ, ಜಿಲ್ಲಾ ಆಡಳಿತ ಕಛೇರಿಗಳ ಸಂಕೀರ್ಣ, ‘ಸಿ’ ಬ್ಲಾಕ್, ತಳ ಅಂತಸ್ತು, ರಜತಾದ್ರಿ, ಮಣಿಪಾಲ, ಉಡುಪಿ ಜಿಲ್ಲೆ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News