ಅಮೇರಿಕಾದ ಸಿಐಎ ಭಾರತದ ಮೇಲೆ ಕಣ್ಣಿಟ್ಟಿದ್ದು ಹೇಗೆ ?

Update: 2017-01-23 07:47 GMT

ಹೊಸದಿಲ್ಲಿ,ಜ.23 : ಅಮೆರಿಕಾದ ಬೇಹುಗಾರಿಕಾ ಸಂಸ್ಥೆ ಸಿಐಎ ಭಾರತದ ಹಲವು ವಿಚಾರಗಳ ಮೇಲೆ ಹೇಗೆ ಕಣ್ಣಿಟ್ಟಿತ್ತೆಂಬುದರ ಬಗ್ಗೆಏಜನ್ಸಿಯು ಇದೀಗ ಬಹಿರಂಗಗೊಳಿಸಿರುವ ಹಾಗೂ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿರುವ 1.2 ಕೋಟಿಗೂ ಹೆಚ್ಚು ಪುಟಗಳಿರುವ 9.3 ಲಕ್ಷದಾಖಲೆಗಳು ಬೆಳಕು ಚೆಲ್ಲುತ್ತವೆ.

ಪತ್ರಕರ್ತ ಮೈಖೇಲ್ ಬೆಸ್ಟ್ ಅವರ ಹೋರಾಟದ ಫಲವಾಗಿ ಈ ದಾಖಲೆಗಳನ್ನು ಸಿಐಎ ಆನ್ ಲೈನ್ ನಲ್ಲಿ ಲಭ್ಯಗೊಳಿಸಿದೆ. 1940ರ ದಶಕದಿಂದ ಹಿಡಿದ ಐದು ದಶಕಗಳ ತನಕ ಸಿಐಎ ಭಾರತದ ಪ್ರಮುಖ ಘಟ್ಟಗಳು ಹಾಗೂ ಪ್ರಮುಖ ವ್ಯಕ್ತಿಗಳ ಬಗ್ಗೆ ಹೇಗೆ ಮಾಹಿತಿ ಸಂಗ್ರಹಿಸಿತ್ತೆಂಬ ಬಗ್ಗೆ ಈ ದಾಖಲೆಗಳು ತಿಳಿಸುತ್ತವೆ.

ಇಲ್ಲಿವೆ ಈ ದಾಖಲೆಗಳಲ್ಲಿನ ಕೆಲ ಕುತೂಹಲಕಾರಿ ಸಂಗತಿಗಳು.

►ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ಸೆಪ್ಟಂಬರ್ 1948ರಲ್ಲಿಯೇ ನಿಧನರಾಗಿದ್ದಾರೆಂದು ಸಿಐಎ ನಂಬಿತ್ತು.ಹಲವಾರು ದಾಖಲೆಗಳು ಬೋಸ್ ಅವರ ‘ನಿಧನ’ವನ್ನು ಉಲ್ಲೇಖಿಸುತ್ತವೆ.

► ಬಾಂಗ್ಲಾದೇಶದ ರಚನೆಗೆ ಕಾರಣವಾದ ಪಾಕಿಸ್ತಾನದೊಂದಿಗೆ 1971ರಲ್ಲಿ ನಡೆದ ಯುದ್ಧದ ನಂತರದಲ್ಲಿ ಭಾರತದ ಕ್ರಮಗಳಲ್ಲಿ ಇರದೇ ಇದ್ದ ಜಾಣತನದಿಂದಾಗಿ ಆಗಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಹಾಗೂ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಗರ್ ಅವರಿಗೆ ಲಭ್ಯವಿದ್ದ ರಾಜತಾಂತ್ರಿಕ ಆಯ್ಕೆಗಳನ್ನು ಸೀಮಿತಗೊಳಿಸಿತ್ತು.

► 1975ರ ತುರ್ತುಪರಿಸ್ಥಿತಿಯ ಮುಂಚಿನ ದಿನಗಳಲ್ಲಿ ಅಲಾಹಾಬಾದ್  ಹೈಕೋರ್ಟ್ ಪ್ರಚಾರ ಸಮಯದಲ್ಲಿ ನಡೆದ ಉಲ್ಲಂಘನೆಗಳಿಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯನ್ನು ದೋಷಿಯೆಂದು ಘೋಷಿಸಿದ ನಂತರ ಸರ್ವಾಧಿಕಾರಿ ರೀತಿಯ ಆಡಳಿತ ನಡೆಸುವ ಆಕೆಯ ಉದ್ದೇಶಗಳ ಬಗ್ಗೆ ಸಿಐಎಗೆ ಯಾವುದೇ ಮಾಹಿತಿಯಿರಲಿಲ್ಲ.

► 1980ರಲ್ಲಿ ಭಾರತ ಹಾಗೂ ಪಾಕಿಸ್ತಾನಗಳ ಅಣು ಕಾರ್ಯಕ್ರಮಗಳ ಬಗ್ಗೆ ಅಮೆರಿಕಾಗೆ ಅದೆಷ್ಟು ಕಳವಳವುಂಟಾಗಿತ್ತೆಂದರೆ ಅದು ಎರಡೂ ದೇಶಗಳಿಗೆ ಅಣು ರಾಜತಾಂತ್ರಿಕರನ್ನು ಕಳುಹಿಸುವ ಬಗ್ಗೆಯೂ ಚಿಂತಿಸಿತ್ತು.

► 1990ರಲ್ಲಿ ಸಿಐಎ ಸತ್ಯಸಾಯಿಬಾಬಾ ಬಗ್ಗೆ ರಹಸ್ಯ ವರದಿಯೊಂದನ್ನು ತಯಾರಿಸಿತ್ತಲ್ಲದೆ ಅವರ ಸಂಘಟಿತ ಆಂದೋಲನ ‘ಇನ್ನೊಂದು ಧರ್ಮ’ ಸ್ಥಾಪನೆಗೆ ಕಾರಣವಾಗಬಹುದೆಂದೂ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News