ಪಿ.ಎಚ್.ಡಿ., ಎಂ.ಫಿಲ್ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಫೆಲೋಶಿಪ್ ಗೆ ಅರ್ಜಿ ಆಹ್ವಾನ

Update: 2017-02-06 10:46 GMT

ಮಂಗಳೂರು, ಫೆ.6: 2016-17ನೆ ಸಾಲಿಗೆ "ಅಲ್ಪಸಂಖ್ಯಾತರ ವಿಷಯಗಳ ಬಗ್ಗೆ" ವಿಶ್ವವಿದ್ಯಾನಿಲಯಗಳಲ್ಲಿ ಪಿ.ಎಚ್.ಡಿ ಮತ್ತು ಎಂ.ಫಿಲ್ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಫೆಲೋಶಿಪ್ ಪಡೆಯಲು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.

ಈ ಯೋಜನೆಯು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಜೆ.ಆರ್.ಎಫ್ ಮಾದರಿಯಲ್ಲಿ ಫೆಲೋಶಿಪ್ ನೀಡಲು ಅಲ್ಪಸಂಖ್ಯಾತರ ಇಲಾಖೆ ನಿರ್ಧರಿಸಿದೆ. ಈ ಯೋಜನೆಯಡಿ ಫೆಲೋಶಿಫ್ ಪಡೆಯಲು ಆಸಕ್ತಿ ಇರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವೆಬ್ ಸೈಟ್ www.gokdom.kar.nic.inನಿಂದ ಅರ್ಜಿ ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಫೆಬ್ರವರಿ 25 ಕೊನೆಯ ದಿನವಾಗಿದೆ. ಮೂರು ವರ್ಷಗಳ ಪಿ.ಎಚ್.ಡಿ ಹಾಗೂ ಎರಡು ವರ್ಷಗಳ ಎಂ.ಫಿಲ್ ಗೆ ಪ್ರತೀ ಮಾಹೆಯಾನ 25 ಸಾವಿರ ರೂ. ಹಾಗೂ ವರ್ಷಕ್ಕೆ 10 ಸಾವಿರ ರೂ. ಒಂದು ಬಾರಿ ನಿರ್ವಹಣಾ ವೆಚ್ಚ ಸಿಗಲಿದೆ.

ವಿದ್ಯಾರ್ಥಿಯು ಕರ್ನಾಟಕ ನಿವಾಸಿಯಾಗಿದ್ದು, 35 ವರ್ಷಕ್ಕಿಂತ ಕೆಳಗಿರಬೇಕು. ಸರಕಾರಿ ಉದ್ಯೋಗಿಯಾಗಿರಬಾರದು ಹಾಗೂ ಕುಟುಂಬದ ವಾರ್ಷಿಕ ಆದಾಯ ಮಿತಿ 6 ಲಕ್ಷ ರೂ. ಮೀರಿರಬಾರದು.

ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ವಿಷಯವು ಅಲ್ಪಸಂಖ್ಯಾತ ಸಂಬಂಧಿತ ವಿಷಯವೆಂದು ಇಲಾಖಾ ಅಡಿಯಲ್ಲಿ ನಡೆಸಲಾಗುತ್ತಿರುವ ಅಲ್ಪಸಂಖ್ಯಾತರ ಅಧ್ಯಯನ ಪೀಠವು ತೀರ್ಮಾನಿಸಲಿದೆ.

ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಾಗಿ ವೆಬ್ ಸೈಟ್ www.gokdom.kar.nic.in ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಚೇರಿಯನ್ನು ಸಂಪರ್ಕಿಸಬಹುದು.

ಮಾಹಿತಿಗಾಗಿ ಸಂಪರ್ಕ ಮಾಡಿ:

ಇರ್ಷಾದ್ ವೇಣೂರ್,

ಸಮಾಜ ಸೇವಾ ಘಟಕ,

ಜಮಾಅತೆ ಇಸ್ಲಾಮೀ ಹಿಂದ್,

ಹಿದಾಯತ್ ಸೆಂಟರ್,

ಬೀಬಿ ಅಲಾಬಿ ರಸ್ತೆ, ಬಂದರ್,

ಮಂಗಳೂರು-575001

Mob:

9844963059

8618008745

7676413059

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News