ತೌಸೀಫ್ ಹುಸೇನ್-ಕೆ.ಎಚ್.ನಾಝ್

Update: 2017-02-14 05:47 GMT

ಕಿನ್ನಿಗೋಳಿಯ ಮುಹಮ್ಮದ್ ಹಾಗೂ ಮರಿಯಂ ದಂಪತಿಯ ಮೊದಲ ಪುತ್ರ ತೌಸೀಫ್ ಹುಸೇನ್ ಮತ್ತು ಮಂಗಳೂರಿನ ಮರ್‌ಹೂಮ್ ಅಡ್ವಕೇಟ್ ಮುಹಮ್ಮದ್ ಉಸ್ಮಾನ್ ಹಾಗೂ ಆಯಿಶಾ ದಂಪತಿಯ ಪುತ್ರಿ ಕೆ.ಎಚ್.ನಾಝ್ ಮುಫೀದಾ ಇವರ ವಿವಾಹವು ಫೆ.12ರಂದು ಕಲ್ಲಾಪುವಿನ ಯುನಿಟಿ ಸಭಾಭವನದಲ್ಲಿ ನಡೆಯಿತು. ಶಾಸಕ ಮೊಯ್ದಿನ್ ಬಾವಾ, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಅಶ್ರಫ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಶಶಿಧರ್ ಹೆಗ್ಡೆ, ಪುರುಷೋತ್ತಮ ಚಿತ್ರಾಪುರ, ನವೀನ್ ಡಿಸೋಜಾ, ಪ್ರತಿಭಾ ಕುಳಾಯಿ ಮೊದಲಾದವರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News