ಉಕ್ಕುಡ ಟಿಎಚ್‌ಎಂಎ ಅದ್ದ

Update: 2017-02-17 06:08 GMT

ವಿಟ್ಲ, ಫೆ.17: ಉಕ್ಕುಡ ಟಿ.ಎಚ್.ಎಂ.ಎ.ಅಬ್ಬಾಸ್ ಅವರ ಪುತ್ರ ಉದ್ಯಮಿ, ಸಮಾಜಸೇವಕ, ವಿಟ್ಲ ಸಮೀಪದ ಉಕ್ಕುಡ ನಿವಾಸಿ ಅಬ್ದುಲ್ ಅಝೀಝ್(ಅದ್ದ) ಟಿ.ಎಚ್.ಎಂ.ಎ.(50) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ 9:30ಕ್ಕೆ ಉಕ್ಕುಡದ ಸ್ವಗೃಹದಲ್ಲಿ ನಿಧನರಾದರು.

‘ಅದ್ದ’ ಎಂದೇ ಪರಿಚಿತರಾಗಿದ್ದ ಅಬ್ದುಲ್ ಅಝೀಝ್ ಕರಿಕಲ್ಲು ಕೋರೆ, ಲಾರಿ, ದಿನಸಿ ಅಂಗಡಿ ವ್ಯಾಪಾಯಾಗಿದ್ದರು. ವಿಟ್ಲ ಗ್ರಾಪಂ ಸದಸ್ಯರಾಗಿ, ಉಕ್ಕುಡ ಪಬ್ಲಿಕ್ ಸ್ಕೂಲ್ ಸ್ಥಾಪಕಾಧ್ಯಕ್ಷರಾಗಿ, ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಕಾರ್ಯಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಜಂಇಯ್ಯತುಲ್ ಫಲಾಹ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಉಕ್ಕುಡ ಎಸ್.ವೈ.ಎಸ್.ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಕೊಡುಗೈ ದಾನಿಯಾಗಿದ್ದ ಅಬ್ದುಲ್ ಅಝೀಝ್ ಅವರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರವು ಇಂದು ಜುಮಾ ನಮಾಝ್ ಬಳಿಕ ಅಸರ್ ನಮಾಝ್‌ಗಿಂತ ಮೊದಲು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ