ಅಬ್ದುಲ್ ಅಝೀಝ್

Update: 2017-02-18 18:36 GMT

ಬಂಟ್ವಾಳ, ಫೆ.18: ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ (ಅದ್ದ ಟಿಎಚ್‌ಎಂಎ) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. 

ಕರಿಕಲ್ಲು ಕೋರೆ, ಲಾರಿ, ದಿನಸಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಅವರು ವಿಟ್ಲ ಗ್ರಾ ಪಂ ಸದಸ್ಯರಾಗಿ, ಉಕ್ಕುಡ ಪಬ್ಲಿಕ್ ಸ್ಕೂಲ್ ಸ್ಥಾಪಕಾಧ್ಯಕ್ಷರಾಗಿ, ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಕಾರ್ಯಾಧ್ಯಕ್ಷರಾಗಿ, ಬಂಟ್ವಾಳ ಜಂ ಇಯ್ಯತುಲ್ ಫಲಾಹ್ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ