ನಾಗರಿಕ ವಿಮಾನಯಾನ ಇಲಾಖೆಯ ಅಗ್ನಿಶಾಮಕ ವಿಭಾಗದಲ್ಲಿ ಉದ್ಯೋಗಾವಕಾಶ

Update: 2017-03-02 07:47 GMT

ಮಂಗಳೂರು, ಮಾ.2: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ನಾಗರಿಕ ವಿಮಾನಯಾನ ಇಲಾಖೆ)  ದಕ್ಷಿಣ ವಲಯವು ಅಗ್ನಿಶಾಮಕ ವಿಭಾಗದಲ್ಲಿ Junior Assistant (Fire Services) ಹುದ್ದೆಗೆ ಅರ್ಜಿ ಅಹ್ವಾನಿಸಿದೆ.  ದಕ್ಷಿಣ ವಲಯವು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪಾಂಡಿಚೇರಿ ಮತ್ತು ಲಕ್ಷದೀಪ ಪ್ರದೇಶಗಳನ್ನು ಒಳಗೊಂಡಿರುತ್ತದೆ.

ವಿದ್ಯಾರ್ಹತೆ: 

1) ಪಿಯುಸಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣ. ಅಥವಾ  10ನೆ ತರಗತಿ + ಮೆಕ್ಯಾನಿಕಲ್ ಅಥವಾ ಅಟೋಮೊಬೈಲ್ ಅಥವಾ ಫ಼ೈರ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ

2)ಮೋಟಾರು ವಾಹನ (ಘನ ವಾಹನವಾದರೆ ಉತ್ತಮ) ಚಾಲನಾ ಲೈಸನ್ಸ್. (ಲಘು ವಾಹನವಾದರೆ ಲೈಸನ್ಸ್ ಹೊಂದಿ ಎರಡು ವರ್ಷಗಳಾಗಿರಬೇಕು).

ವಯಸ್ಸು:

18 ವರ್ಷಕ್ಕಿಂತ ಮೇಲ್ಪಟ್ಟು 30 ವರ್ಷದೊಳಗಿನವರಾಗಿರಬೇಕು.

ಒಬಿಸಿಗೆ  33 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 35 ವರ್ಷದವರೆಗೆ ವಿನಾಯಿತಿ ಇರುತ್ತದೆ.

ದೈಹಿಕ ಕ್ಷಮತೆ:

ಎತ್ತರ: ಕನಿಷ್ಠ 167 ಸೆ.ಮೀ., 

ಎದೆಯ ಸುತ್ತಳತೆ: 81 ಸೆ.ಮೀ., ಸಾಮಾನ್ಯ, ವಿಸ್ತರಿಸಿದಾಗ 5 ಸೆ.ಮೀ. ಹೆಚ್ಚಬೇಕು.

ತೂಕ: 55 ಕೆ.ಜಿ.ಗಿಂತ ಕಡಿಮೆ ಇರಬಾರದು.

ವೇತನ: ಮೂಲವೇತನ (basic pay) ರೂ.12,500. ಒಟ್ಟು ವೇತನ ರೂ.40,000ಕ್ಕಿಂತಲೂ ಅಧಿಕ.
 ಈ ಸಲದ ಪರೀಕ್ಷಾ ಕೇಂದ್ರ ಮಂಗಳೂರಿನಲ್ಲಿಯೂ ಇರಲಿದೆ. 

ಅರ್ಜಿ ಫಾರ್ಮ್ ಅನ್ನು http://www.aai.aero/employment_news/ADVERTISMENTs 2017_em.pdf ಲಿಂಕ್ ಮೂಲಕ ಡೌನ್ ಲೋಡ್ ಮಾಡಿ, ಪ್ರಿಂಟ್ ತೆಗೆದು ಭರ್ತಿ ಮಾಡಿ ಸೂಕ್ತ ದಾಖಲೆಗಳ  ಪ್ರತಿಗಳನ್ನು ಲಗತ್ತಿಸಿ (ದೃಡೀಕೃತ ಸಹಿ(self attested)ಯೊಂದಿಗೆ) ರೂ.100ರ ಡಿ.ಡಿ. ಜತೆಗೆ THE REGIONAL EXECUTIVE DIRECTOR, Airports Authority of India, Southern Region, Chennai – 600 027 ಈ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮಾರ್ಚ್ 2017 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News