ಎಲ್ಲ ಹಗರಣಗಳಲ್ಲೂ ಅತ್ಯುತ್ತಮವಾಗಿ ತಮ್ಮನ್ನು ರಕ್ಷಿಸಿಕೊಂಡಿರುವ ಜೇಟ್ಲಿ ರಕ್ಷಣಾ ಸಚಿವ ಹುದ್ದೆಗೆ ಅತ್ಯಂತ ಅರ್ಹರು !

Update: 2017-03-13 18:10 GMT

ನಮ್ಮ ಮುಂದಿನ ರಕ್ಷಣಾ ಸಚಿವರಾಗಿ ನೇಮಕಗೊಂಡಿರುವುದಕ್ಕೆ ಅರುಣ್ ಜೇಟ್ಲಿ ಯವರಿಗೆ ಅಭಿನಂದನೆಗಳು.
ರಕ್ಷಣೆಯಲ್ಲಿ ಭರ್ಜರಿ ಅನುಭವ ಹೊಂದಿರುವುದಕ್ಕಾಗಿಯೇ ಜೇಟ್ಲಿಯವರಿಗೆ ವಿತ್ತ ಸಚಿವ ಮತ್ತು ರಕ್ಷಣಾ ಸಚಿವರ ದ್ವಿಪಾತ್ರಗಳನ್ನು ನೀಡಲಾಗಿದೆ ಎನ್ನುವುದು ನನಗೆ ಖಚಿತವಿದೆ. ಭಾರತೀಯ ಆರ್ಥಿಕತೆಗೆ ಅವರ ವೌಲ್ಯವರ್ಧಿತ ಪ್ರಯತ್ನಗಳನ್ನು ನಾವು ಈಗಾಗಲೇ ನೋಡಿದ್ದೇವೆ.

 ಜೇಟ್ಲಿ ಡಿಡಿಸಿಎ ಹಗರಣ ಆರೋಪಗಳಲ್ಲಿ ತನ್ನನ್ನು ಯಶಸ್ವಿಯಾಗಿ ರಕ್ಷಿಸಿಕೊಂಡಿದ್ದಾರೆ ಮತ್ತು ಈ ಪ್ರಕರಣ ಮಾಧ್ಯಮಗಳಲ್ಲಿಯ ಮುಖ್ಯಶೀರ್ಷಿಕೆಗಳಿಂದ ಮಾಯವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನೋಟು ಅಮಾನ್ಯವನ್ನು ಬೃಹತ್ ‘ಯಶಸ್ಸು ’ಎಂದು ಬಣ್ಣಿಸುವ ಮೂಲಕ ಅದನ್ನೂ ಅವರು ಯಶಸ್ವಿಯಾಗಿ ಸಮರ್ಥಿಸಿಕೊಂಡಿದ್ದಾರೆ. ವಿತ್ತ ಸಚಿವರಂತಹ ಮಹತ್ವದ ಸ್ಥಾನದಲ್ಲಿರುವ ಅವರಿಗೆ ನಿಖರವಾಗಿ ಎಷ್ಟು ಕಪ್ಪುಹಣ ಮಾಯವಾಗಿದೆ ಎನ್ನುವುದು ಗೊತ್ತಿದೆ ಎಂದು ನಾನು ಗಟ್ಟಿಯಾಗಿ ನಂಬಿದ್ದೇನೆ. ಹಣದ ಕೊರತೆಯಿಂದಾಗಿ ಲಂಚ ನಿಂತುಹೋಯಿತು, ಭಯೋತ್ಪಾದನೆ ಸತ್ತೇ ಹೋಯಿತು ಮತ್ತು ಭಾರತವು ಇತರ ಎಲ್ಲರಿಗಿಂತ ಅತ್ಯುತ್ತಮವಾಗಿ ಕ್ಯಾಷ್‌ಲೆಸ್ ಆಯಿತು. ಇಷ್ಟೊಂದು ಯಶಸ್ಸು ದೊರೆತಿರುವಾಗ 100ಕ್ಕೂ ಅಧಿಕ ಸಾವುಗಳು ದೊಡ್ಡ ವಿಷಯವೇನಲ್ಲ ಬಿಡಿ!

ಲೋಕಸಭಾ ಚುನಾವಣೆಯಲ್ಲಿ ಮಣ್ಣು ಮುಕ್ಕಿದರೂ ತನ್ನ ರಾಜಕೀಯ ವೃತ್ತಿಜೀವನವನ್ನು ರಕ್ಷಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿರುವುದಂತೂ ಕಣ್ಣಿಗೆ ರಾಚುತ್ತದೆ.

ನನ್ನ ಅಭಿಪ್ರಾಯದಲ್ಲಿ ಅವರು ಪರಿಪೂರ್ಣ ‘ರಕ್ಷಣಾ ’ ಸಚಿವರಾಗುತ್ತಾರೆ.

ನೋಟು ಅಮಾನ್ಯ ಮಾದರಿಯಲ್ಲಿಯೇ ಸಶಸ್ತ್ರ ಪಡೆಗಳಲ್ಲಿರಬಹುದಾದ ಬೇಹುಗಾರರರನ್ನು ನಿರ್ಮೂಲಿಸಲು ಜೇಟ್ಲಿಯವರು ಇಡೀ ಸೇನೆಯನ್ನು ವಿಸರ್ಜಿಸಿ,ಬಳಿಕ ಅವರನ್ನೆಲ್ಲ ಚೆನ್ನಾಗಿ ಪರೀಕ್ಷಿಸಿಯೇ ಮತ್ತೊಮ್ಮೆ ಹುದ್ದೆಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಮಾತ್ರ ಕೈಹಾಕದಿರಲಿ ಎನ್ನುವುದನ್ನೇ ನಾನೀಗ ಆಶಿಸುತ್ತಿದ್ದೇನೆ.

ಅಂದ ಹಾಗೆ ಯಾರಾದರೂ ಭಾರತದ ಮುಂದಿನ ವಿತ್ತಸಚಿವರಾಗಿ ಸುಬ್ರಮಣಿಯನ್ ಸ್ವಾಮಿಯವರನ್ನು ನೇಮಕ ಮಾಡುತ್ತಾರಾ ? 2019ಕ್ಕೆ ಮುನ್ನ ಅಮೆರಿಕದ ಒಂದು ಡಾಲರ್ ಭಾರತದ ಒಂದು ರೂಪಾಯಿಗೆ ಸರಿಸಮವಾಗುವುದನ್ನು ನೋಡಲು ನಾನು ಬಯಸಿದ್ದೇನೆ.

https://www.facebook.com/darshan.mondkar?fref=nf

Writer - ದರ್ಶನ್ ಮೊಂಡ್ಕರ್

contributor

Editor - ದರ್ಶನ್ ಮೊಂಡ್ಕರ್

contributor

Similar News