ಜೆಎನ್‌ಯುನಲ್ಲಿ ಕನ್ನಡ ಎಂ.ಫಿಲ್/ಪಿ.ಎಚ್.ಡಿ. ಅಧ್ಯಯನಕ್ಕೆ ಅವಕಾಶ

Update: 2017-03-22 06:31 GMT

ಹೊಸದಿಲ್ಲಿ, ಮಾ.22: ದಿಲ್ಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾನಿಲಯದಲ್ಲಿ 2017-18ನೆ ಸಾಲಿಗೆ ಕನ್ನಡದಲ್ಲಿ ಎಂ.ಫಿಲ್/ಪಿ.ಎಚ್.ಡಿ. ಪದವಿಗೆ ಅಧ್ಯಯನ ನಡೆಸಲು ಅವಕಾಶ ನೀಡಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಎಪ್ರಿಲ್ 5 ಕೊನೆಯ ದಿನವಾಗಿದೆ.

ಕನ್ನಡದಲ್ಲಿ ಎಂ.ಎ. ಪದವಿ ಇದ್ದು ಕನಿಷ್ಠ 55 ಶೇಕಡ ಅಂಕ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಮೇ ಮಧ್ಯಭಾಗದಲ್ಲಿ ಬೆಂಗಳೂರಿನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.ಆರಂಭದಲ್ಲಿ ಎರಡು ವರ್ಷ ಎಂ.ಫಿಲ್ ಪದವಿಗೆ ಅಭ್ಯಾಸ ನಡೆಸಿ ಯಶಸ್ವಿಯಾದವರು ನೇರವಾಗಿ ಪಿ.ಎಚ್.ಡಿ. ಅಧ್ಯಯನಕ್ಕೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಜೆ.ಎನ್.ಯು. ವೆಬ್ಸೈಟ್‌ಗೆ ಭೇಟಿ ನೀಡಬಹುದು ಎಂದು ಜೆಎನ್‌ಯು ಕನ್ನಡ ಭಾಷಾ ಪೀಠದ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News