×
Ad

ಪರಿಚಯಾತ್ಮಕ ಪುಸ್ತಕ ಪ್ರಕಟಣೆಗೆ ಅರ್ಜಿ ಆಹ್ವಾನ

Update: 2017-03-22 19:17 IST

ಉಡುಪಿ, ಮಾ.22: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾ ಕೀರ್ತನ ಮತ್ತು ಗಮಕ ಕಲಾಪ್ರಕಾರಗಳಲ್ಲಿ ಯುವ ಹಾಗೂ ಹಿರಿಯ ಕಲಾವಿದರ ಪುಸ್ತಕಗಳನ್ನು ಹೊರತರಲು ಅಕಾಡೆಮಿ ನಿರ್ಧರಿಸಿದ್ದು, ಇದಕ್ಕಾಗಿ ವಿವಿಧ ಕಲಾಪ್ರಕಾರಗಳಿಂದ ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನಿಸ ಲಾಗುತ್ತಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಜಿದಾರರನ್ನು ಹೊರತುಪಡಿಸಿ ಉಳಿದವರು ಅರ್ಜಿ ನಮೂನೆಯಲ್ಲಿ ತಿಳಿಸಿದ ನಿಯಮಗಳಂತೆ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ರಿಜಿಸ್ಟ್ರಾರ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ ರಸ್ತೆ ಬೆಂಗಳೂರು -560 002 ಹಾಗೂ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಬಹುದು.

ಕರ್ನಾಟಕ ಸಂಗೀತ: ಎಂ.ದ್ವಾರಕೀಶ್ ಬಿನ್ ಗೋಪಾಲಾಚಾರ್ ಎಂ, ಹಳೇ ಮಾರ್ಕೆಟ್ ರಸ್ತೆ, ಇ.ಪಿ.ಬ್ರದರ್ಸ್ ಹತ್ತಿರ ಚಿತ್ರದುರ್ಗ -577501. ಮೊಬೈಲ್: 9448872944/9483938565.

ಹಿಂದೂಸ್ತಾನಿ ಸಂಗೀತ: ಪ್ರೊ.ಸಿದ್ಧರಾಮಯ್ಯ ಮಠಪತಿ, ಸಂಗೀತ ಅಧ್ಯಾಪಕರು, ಬಸವೇಶ್ವರ ಮಹಾವಿದ್ಯಾಲಯ, ಬಾಗಲಕೋಟೆ. ಮೊಬೈಲ್: 9448923500.

ಸುಗಮ ಸಂಗೀತ: ಎಚ್.ಆರ್. ಲೀಲಾವತಿ, ಜಯಲತ 76, ಮಾರುತಿ ಟೆಂಪಲ್ ರಸ್ತೆ, 4ನೇ ಮುಖ್ಯ ರಸ್ತೆ ಸರಸ್ವತಿಪುರಂ, ಮೈಸೂರು-576009, ಮೊಬೈಲ್:9379252241.

ನೃತ್ಯ: ಕೆ.ರಾಮಮೂರ್ತಿ ರಾವ್, ನೂಪುರ, 327, 4ನೇ ಮುಖ್ಯ ಸ್ತೆ, 2ನೇ ಹಂತ, ಜೆ.ಪಿ.ನಗರ ಮೈಸೂರು-570008 ಮೊ:9886379314.

ಕಥಾ ಕೀರ್ತನ: ಗೀತಾ ಬಿ.ಮಾಲತೇಶ್, ರಾಮಕೃಷ್ಣ ಮೆದಿಕಲ್, 757/35, 8ನೇ ಮೇನ್ ಪಿ.ಜೆ.ಬಡಾವಣೆ ದಾವಣಗೆರೆ ಮೊ: 9449374410.

 ಗಮಕ:ಹಾ.ವೀ. ಮಂಜುಳಾ ಶಿವಾನಂದ, 36, 2ನೇ ಮುಖ್ಯ ರಸ್ತೆ ಶೇಷಾದ್ರಿಪುರ, ಬೆಂಗಳೂರು-560020. ಮೊ:9480511714. ಈ ವಿಳಾಸಗಳಿಗೆ ಕಳುಹಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News