ಇಸ್ರೇಲ್ ಜೈಲುಗಳಲ್ಲಿರುವ ಫೆಲೆಸ್ತೀನ್ ಕೈದಿಗಳಿಂದ ಉಪವಾಸ ಬೆದರಿಕೆ

Update: 2017-04-04 15:25 GMT

ಜೆರುಸಲೇಂ, ಎ. 4: ಇಸ್ರೇಲ್‌ನ ಜೈಲುಗಳಲ್ಲಿ ಬಂಧಿತರಾಗಿರುವ ಸಾವಿರಾರು ಫೆಲೆಸ್ತೀನ್ ಕೈದಿಗಳು, ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಫತಾಹ್ ಮತ್ತು ಹಮಾಸ್‌ಗೆ ಸೇರಿದ ಕೈದಿಗಳು ಮುಷ್ಕರದಲ್ಲಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ.

ಫೆಲೆಸ್ತೀನಿಯನ್ ಕೈದಿಗಳ ದಿನವಾಗಿ ಆಚರಿಸುವ ಎಪ್ರಿಲ್ 17ರಂದು ಉಪವಾಸ ಸತ್ಯಾಗ್ರಹ ಆರಂಭಗೊಳ್ಳಲಿದೆ. ಆ ದಿನ, ಇಸ್ರೇಲ್‌ನಲ್ಲಿ ಬಂಧನದಲ್ಲಿರುವ ರಾಜಕೀಯ ಕೈದಿಗಳಿಗೆ ಬೆಂಬಲ ಸೂಚಿಸಲು ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ಪ್ರತಿಭಟನಾ ರ್ಯಾಲಿಗಳು ಮತ್ತು ಪ್ರದರ್ಶನಗಳನ್ನು ವಿವಿಧ ಸಂಘಟನೆಗಳು ಹಮ್ಮಿಕೊಂಡಿವೆ.

ಅದೇ ವೇಳೆ, ಸತ್ಯಾಗ್ರಹ ಆರಂಭಗೊಳ್ಳುವುದಕ್ಕೂ ಮುನ್ನ ಕೊನೆಗೊಳಿಸುವ ಪ್ರಯತ್ನವಾಗಿ ಇಸ್ರೇಲ್‌ನ ಭದ್ರತಾ ಅಧಿಕಾರಿಗಳು ಕೈದಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಕೈದಿಗಳು ತಮ್ಮ 13 ಬೇಡಿಕೆಗಳ ಪಟ್ಟಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಗುವಂತೆ ಬ್ಲಾಕ್‌ಗಳಲ್ಲಿ ಸಾರ್ವಜನಿಕ ಟೆಲಿಫೋನ್‌ಗಳನ್ನು ಸ್ಥಾಪಿಸಬೇಕು ಎನ್ನುವುದು ಕೈದಿಗಳ ಪ್ರಮುಖ ಬೇಡಿಕೆಯಾಗಿದೆ.

ಕೈದಿಗಳನ್ನು ಭೇಟಿಯಾಗಲು ರೆಡ್‌ಕ್ರಾಸ್ ಸದಸ್ಯರು ಮತ್ತು ಕುಟುಂಬ ಸದಸ್ಯರಿಗೆ ಅನುಮತಿ ನೀಡಬೇಕು ಎನ್ನುವುದು ಎರಡನೆ ಮಹತ್ವದ ಬೇಡಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News