ಅಭ್ಯಾಸ ಆರಂಭಿಸಿದ ಕೊಹ್ಲಿ

Update: 2017-04-12 18:43 GMT

ಬೆಂಗಳೂರು, ಎ.12: ಈವರ್ಷದ ಐಪಿಎಲ್‌ನಲ್ಲಿ ಇನ್ನಷ್ಟೇ ಆರ್‌ಸಿಬಿ ತಂಡದಲ್ಲಿ ಮೊದಲ ಪಂದ್ಯ ಆಡಬೇಕಾಗಿರುವ ವಿರಾಟ್ ಕೊಹ್ಲಿ ತಂಡದ ನೆಟ್ ಅಭ್ಯಾಸದ ವೇಳೆ ಫೀಲ್ಡಿಂಗ್ ಡ್ರಿಲ್ಸ್‌ನಲ್ಲಿ ಪಾಲ್ಗೊಂಡರು.

ಪೆವಿಲಿಯನ್‌ನಲ್ಲಿ ಸ್ವಲ್ಪ ಸಮಯ ಕಳೆದ ಕೊಹ್ಲಿ ಕಿಟ್‌ನ್ನು ಹೊತ್ತುಕೊಂಡು ಮೈದಾನಕ್ಕೆ ಇಳಿದರು. ಲಘು ವ್ಯಾಯಾಮ ನಡೆಸಿದ ಕೊಹ್ಲಿ ಕುರ್ಚಿಯಲ್ಲಿ ಕುಳಿತುಕೊಂಡು ಸಚಿನ್ ಬೇಬಿ ಹಾಗೂ ಕ್ರಿಸ್ ಗೇಲ್‌ರ ಬ್ಯಾಟಿಂಗ್ ಅಭ್ಯಾಸವನ್ನು ವೀಕ್ಷಿಸಿದರು. ಅರ್ಧಗಂಟೆಯ ಬಳಿಕ ಸಹ ಆಟಗಾರರೊಂದಿಗೆ ಫೀಲ್ಡಿಂಗ್ ಹಾಗೂ ಕ್ಯಾಚ್ ಅಭ್ಯಾಸ ನಡೆಸಿದರು. ಫೀಲ್ಡಿಂಗ್ ಕೋಚ್ ಟ್ರೆಂಟ್ ವುಡ್‌ಹಿಲ್ ಹದ್ದಿನ ಕಣ್ಣಿನಡಿ ಎತ್ತರದ ಹಾಗೂ ಕೆಳಗಿನ ಕ್ಯಾಚ್‌ಗಳನ್ನು ಪಡೆದರು.

ಕೊಹ್ಲಿ ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದು ನಾಲ್ಕನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ವಾಪಸಾಗುವೆ ಎಂದು ಮಂಗಳವಾರ ಕೊಹ್ಲಿ ಸುಳಿವು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News