×
Ad

ನ್ಯೂಝಿಲ್ಯಾಂಡ್ ಟಿ20 ತಂಡ ಪ್ರಕಟಿಸಿದ ಇಬ್ಬರು ಪುಟಾಣಿಗಳು; ವಿಡಿಯೊ ವೈರಲ್

Update: 2024-04-30 13:23 IST

PC : X\  BLACKCAPS

ಹೊಸದಿಲ್ಲಿ: ಮುಂಬರುವ ಟಿ20 ವಿಶ್ವಕಪ್‍ಗೆ 15 ಮಂದಿಯ ನ್ಯೂಝಿಲ್ಯಾಂಡ್ ತಂಡವನ್ನು ಪುಟಾಣಿಗಳಿಂದ ಪ್ರಕಟಿಸುವ ಮೂಲಕ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿದೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜೂನ್‍ನಲ್ಲಿ ಜಂಟಿಯಾಗಿ ಈ ಕೂಟ ಆಯೋಜಿಸಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಶೇರ್ ಮಾಡಿರುವ ಬ್ಲ್ಯಾಕ್‍ಕ್ಯಾಪ್ಸ್, ದ್ವೈವಾರ್ಷಿಕ ಟೂರ್ನಿಗ ಸಂಭಾವ್ಯ 15 ಮಂದಿಯ ತಂಡವನ್ನು ಪ್ರಕಟಿಸಲು ಮಟಿಲ್ಡಾ ಎಂಬ ಬಾಲಕಿ ಮತ್ತು ಆಗ್ನೂಸ್ ಎಂಬ ಬಾಲಕನನ್ನು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಕಳುಹಿಸಿದೆ ಎಂದು ಹೇಳಿದ್ದಾರೆ.

ಈ ಮಕ್ಕಳು ವಿಹಂಗಮವಾಗಿ ಆಟಗಾರರ ಹೆಸರನ್ನು ಪ್ರಕಟಿಸುವ ಜತೆಗೆ ಕೊನೆಯಲ್ಲಿ ಅವರನ್ನು ಅಭಿನಂದಿಸಿದ್ದರು. ಹಿರಿಯ ಬ್ಯಾಟರ್ ಕೇನ್ ವಿಲಿಯಮ್ಸ್ ಅವರು 2021ರ ರನ್ನರ್ ಅಪ್ ತಂಡವನ್ನು ನಾಲ್ಕನೇ ಬಾರಿಗೆ ಮುನ್ನಡೆಸಲಿದ್ದಾರೆ. ವೇಗದ ಬೌಲರ್ ಟಿಮ್ ಸೌಥಿ ಸತತ ಏಳನೇ ಬಾರಿಗೆ ಚುಟುಕು ಕ್ರಿಕೆಟ್‍ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೆಂಟ್ ಬೋಲ್ಟ್ ಐದನೇ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಾರ್ಕ್ ಚಾಪ್‍ಮನ್, ಜಿಮ್ಮಿ ನೀಶಮ್ ಮತ್ತು ಮೈಕೆಲ್ ಬ್ರೇಸ್‍ವೆಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News