IPL | ಜಾಕ್ಸ್ ಸ್ಪೋಟಕ ಶೈಲಿಯ ಬ್ಯಾಟಿಂಗ್

Update: 2024-04-28 16:17 GMT

ಹೊಸದಿಲ್ಲಿ :ಆರ್‌ಸಿಬಿ ಬ್ಯಾಟಿಂಗ್ ಸರದಿಗೆ ಹೊಸ ಸೇರ್ಪಡೆಯಾಗಿರುವ ಇಂಗ್ಲೆಂಡ್ ಬ್ಯಾಟರ್ ವಿಲ್ ಜಾಕ್ಸ್ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಬೌಲರ್‌ಗಳಿಗೆ ದುಸ್ವಪ್ನರಾಗಿದ್ದಾರೆ.

ಗುಜರಾತ್ ವಿರುದ್ಧ 41 ಎಸೆತಗಳಲ್ಲಿ ಶತಕ ಗಳಿಸಿದ್ದ ಜಾಕ್ಸ್ ಆರ್‌ಸಿಬಿಗೆ ಗೆಲುವು ತಂದಿದ್ದಾರೆ. 17 ಎಸೆತಗಳಲ್ಲಿ 17 ರನ್ ಗಳಿಸಿದ್ದ ಜಾಕ್ಸ್ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಇದು ಅವರ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.

ಮೋಹಿತ್ ಶರ್ಮಾ ಎಸೆದ 15ನೇ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಗಳಿಸಿದ್ದ ಜಾಕ್ಸ್ ಅವರು ರಶೀದ್ ಖಾನ್ ಎಸೆದ 16ನೇ ಓವರ್‌ನಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ ಶತಕ ಪೂರೈಸಿದರು.

14ನೇ ಓವರ್‌ನಲ್ಲಿ ಅರ್ಧಶತಕ ಗಳಿಸಿದ್ದ ಜಾಕ್ಸ್ 16ನೇ ಓವರ್‌ನ ಕೊನೆಯ ಎಸೆತದಲ್ಲಿ ಶತಕ ಪೂರ್ಣಗೊಳಿಸಿದರು. ಅರ್ಧಶತಕ ಗಳಿಸಿದ ನಂತರ ಶತಕ ಪೂರೈಸಲು ಜಾಕ್ಸ್ ಕೇವಲ 10 ಎಸೆತಗಳನ್ನು ಎದುರಿಸಿದ್ದರು. ಜಾಕ್ಸ್ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಸಿಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News