ಎಲ್ಲ ರಾಜ್ಯಗಳಲ್ಲಿ ಗೋಧಾಮ: ಬಿಜೆಪಿ ಹೊಸ ವರಸೆ

Update: 2017-04-21 04:04 GMT

ಹೊಸದಿಲ್ಲಿ, ಎ.21: 'ಪ್ರಾಜೆಕ್ಟ್' ಟೈಗರ್ ಯೋಜನೆಯ ಮಾದರಿಯಲ್ಲಿ ಎಲ್ಲ ರಾಜ್ಯಗಳಲ್ಲಿ 'ಪ್ರಾಜೆಕ್ಟ್ ಕೌ' ಎಂಬ ವಿಶಿಷ್ಟ ಯೋಜನೆ ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಜಿ.ಆಹಿರ್ ಪ್ರಕಟಿಸಿದ್ದಾರೆ.

ದೇಶದಲ್ಲಿ ಕಸಾಯಿಖಾನೆ ನಿಷೇಧ ಹಾಗೂ ಗೋರಕ್ಷಕರ ಹಿಂಸೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಸಚಿವರ ಈ ಹೇಳಿಕೆ ವಿವಾದ ಉಲ್ಬಣಕ್ಕೆ ಕಾರಣವಾಗಿದೆ. ಎಲ್ಲ ರಾಜ್ಯಗಳಲ್ಲಿ ಗೋಧಾಮಗಳನ್ನು ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಚಿವರು ಹೇಳಿದ್ದಾರೆ.

"ಗೋಹತ್ಯೆ ನಿಲ್ಲಿಸುವುದು ಅಗತ್ಯ. ಆದರೆ ಇದಕ್ಕೆ ತಡೆಯಾಗಿರುವುದು ಈ ಗೋವುಗಳ ಪಾಲನೆ ಮಾಡುವವರು ಯಾರು ಎಂಬ ಅಂಶ. ಇದಕ್ಕಾಗಿ ಗೋಧಾಮ ಅಗತ್ಯ. ಅಲ್ಲಿ ಮೇವಿಗೂ ವ್ಯವಸ್ಥೆ ಮಾಡಬೇಕು. ಪ್ರತಿ ರಾಜ್ಯವೂ ಗೋಧಾಮಗಳನ್ನು ಹೊಂದಿದ್ದರೆ ನಾವು ಗೋಹತ್ಯೆ ತಡೆಯುವುದು ಸಾಧ್ಯವಾಗಬಹುದು" ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News