ಕೊಳವೆ ಬಾವಿಗೆ ಬಿದ್ದ ಬಾಲಕಿಯನ್ನು ಹೊರತೆಗೆಯಲು ಮುಂದುವರಿದ ಕಾರ್ಯಾಚರಣೆ

Update: 2017-04-23 05:02 GMT

ಬೆಳಗಾವಿ, ಎ.23:  ಅಥಣಿ ತಾಲೂಕಿನ  ಝಂಜರವಾಡ ಗ್ರಾಮದ ಹೊರವಲಯದಲ್ಲಿ ತೆರೆದ ಕೊಳವೆ ಬಾವಿಗೆ ಶನಿವಾರ ಸಂಜೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಆರು ವರ್ಷದ ಪುಟಾಣಿ ಕಾವೇರಿ ಮಾದರ ಎಂಬಾಕೆಯನ್ನು ಹೊರ ತೆಗೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿದಿದೆ
 ಶಂಕರ್ ಹಿಪ್ಪರಗಿ ಅವರ ಹೊಲದಲ್ಲಿ ಕೊರೆಯಲಾಗಿದ್ದ ಸುಮಾರು 400 ಅಡಿ  ಆಳದ ಕೊಳವೆ ಬಾವಿಗೆ ಪುಟಾಣಿ ಕಾವೇರಿ ಸಂಜೆ 5 ಗಂಟೆ  ಬಿದ್ದಿದ್ದಾಳೆ. ಈ ಘಟನೆ ನಡೆದು ಹದಿನಾರು ಗಂಟೆ ಕಳೆದರೂ ಆಕೆಯನ್ನು ಮೇಲೆಕ್ಕೆತ್ತಲು ಸಾಧ್ಯವಾಗಲಿಲ್ಲ. ಆಕೆಗೆ ಈಗಾಗಲೇ  ಅಮ್ಲಜನಕವನ್ನು ಪೂರೈಸಲಾಗುತ್ತಿದೆ 
 ಈಗಾಗಲೇ 130 ಅಡಿ ಆಳದವರೆಗೆ ಗುಂಡಿ ತೆಗೆಯಲಾಗಿದೆ.ಸುರಂಗ ಕೊರೆಯುವ ಕಾರ್ಯಾಚರಣೆಗೆ ಬಂಡೆ ಅಡ್ಡಿಯಾಗಿದ್ದು, ಇದೀಗ ಬಾಲಕಿಯ ಕೈ ಕಾಣಲಾರಂಭಿಸಿದೆ. ಹುಕ್ ಹಾಕಿ ಬಾಲಕಿಯನ್ನು ಮೇಲೆಕ್ಕೆತ್ತಲು ಎನ್ ಡಿಆರ‍್ಎಫ್‌ ತಂಡ ಸತತ ಪ್ರಯತ್ನ ಮುಂದುವರಿಸಿದೆ.

ತಾಯಿ ಅಸ್ವಸ್ಥ: ಕಾವೇರಿ ಕೊಳವೆ ಬಾವಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಆಘಾತಗೊಂಡಿರುವ  ಆಕೆಯ ತಾಯಿ ಗೀತಾ ಅಸ್ವಸ್ಥಗೊಂಡಿದ್ದಾರೆ. ಮೂರು ಬಾರಿ ಪ್ರಜ್ಞೆ ತಪ್ಪಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News