ಬಸವ ಜಯಂತಿ ಪ್ರಭಾತ ಪೇರಿ ಶತಮಾನೋತ್ಸವ

Update: 2017-04-23 07:01 GMT

ದಾವಣಗೆರೆ, ಎ.23: ಸಂವಿಧಾನ, ಕಾನೂನು ಇದ್ದರೂ ಇಂದಿಗೂ ಅಸಮಾನತೆ ಹೋಗಿಲ್ಲ. ಮೇಲು-ಕೀಳು ಎಂಬ ಭಾವನೆ ತೊಲಗಿಲ್ಲ. ಭ್ರೂಣಹತ್ಯೆ, ಮಹಿಳೆಯರ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಭಯೋತ್ಪಾದನೆ ಕೃತ್ಯಗಳು ಸೇರಿದಂತೆ ಮೊದಲಾದ ಸಮಸ್ಯೆಗಳು ತಾಂಡವವಾಡುತ್ತಿವೆ. ಬಸವ ತತ್ವಗಳನ್ನು ಮರೆತಿರುವುದು ಇದಕ್ಕೆ ಕಾರಣ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ವಿರಕ್ತಮಠದಲ್ಲಿ ಬಸವ ಜಯಂತಿ ಪ್ರಭಾತ ಪೇರಿ ಶತಮಾನೋತ್ಸವದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಬಸವಣ್ಣನ ತತ್ವಗಳು ಎಂದರೆ ಕೇವಲ ಒಂದು ಸಮಾಜದ, ರಾಜ್ಯದ, ದೇಶದ ಉದ್ಧಾರಕ್ಕಾಗಿ ಅಲ್ಲ. ಅವು ವಿಶ್ವದ ಉದ್ಧಾರಕ್ಕೆ ಸಂಬಂಧಿಸಿದ್ದರಿಂದ ಈ ಬಗ್ಗೆ ಸರಕಾರ ಪ್ರಮುಖವಾದ ಹೆಜ್ಜೆಯನ್ನಿಟ್ಟು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ಜಯಂತಿ ಆಚರಣೆಗೆ ಕೇಂದ್ರ ಸರಕಾರ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರವೂ ಒತ್ತಡ ತರಬೇಕೆಂದರು.

ಈ ಸಂದರ್ಭ ಪಾದಯಾತ್ರೆಯು ವಿರಕ್ತಮಠದಿಂದ ಮದಕರಿನಾಯಕ ವೃತ್ತ, ಸ್ವಾಗೇರಪೇಟೆ, ಒಕ್ಕಲಿಗರಪೇಟೆ, ಕಾಯಿಪೇಟೆ ಮೂಲಕ ನಡೆಯಿತು. ಬಸವ ಕಲಾ ಲೋಕದವರಿಂದ ಶರಣರ ವಚನ ಗಾಯನ, ಜನೆ ನಡೆಯಿತು. ಇದರಿಂದ ಕ್ತರ ಮನಃಪರಿವರ್ತನೆಗೆ ಕಾರಣವಾಯಿತು

ಪಾದಯಾತ್ರೆಯಲ್ಲಿ ಚಿತ್ರದುರ್ಗ ಮೇದಾರ ಕೇತೇಶ್ವರ ಮಠದ ಶ್ರೀ ಬಸವ ಕೇತೇಶ್ವರ ಹಣಮಂತಯ್ಯ ಸ್ವಾಮೀಜಿ, ಮುಖಂಡರಾದ ಕಣಕುಪ್ಪಿ ಮುರುಗೇಶಪ್ಪ, ಬೂಸನೂರು ಗುರುಬಸಪ್ಪ, ಚಿತ್ರನಟ ಜ್ಯೂನಿಯರ್ ನರಸಿಂಹರಾಜ್, ಎಂ.ಜಯಕುಮಾರ್, ಪಲ್ಲಾಗಟ್ಟಿ ಕೊಟ್ರೇಶಪ್ಪ, ಬಾಳೆಕಾಯಿ ಮುರಿಗೇಶ, ಬಾವಿಕಟ್ಟಿ ಜಗದೀಶ, ಶಾಂತಕುಮಾರ ಸೋಗಿ, ಬಿ.ಎಸ್.ಹಿರೇಮಠ, ಮೈಸೂರು ಮಠದ ಮುಪ್ಪಯ್ಯ, ಎಂ.ಕೆ.ಬಕ್ಕಪ್ಪ, ತಿಪ್ಪಣ್ಣ, ವೀರೇಶ್, ಟಿಂಕರ್ ಮಂಜಣ್ಣ, ಜ್ಞಾನೇಶ್ವರ ಜವಳಿ, ಎಚ್.ಕೆ.ಹೇಮಣ್ಣ ಜವಳಿ, ಶಿವಕುಮಾರ್ ಬಿಳೆಬಾಳ್, ಬೆಳ್ಳೂಡಿ ಮಂಜುನಾಥ್, ಬಿ.ಜಿ.ಶಿವಕುಮಾರ್, ವಿರಕ್ತಮಠ ಧರ್ಮದರ್ಶಿ ಸಮಿತಿ, ಎಸ್‌ಜೆಎಂ ಶಿವಯೋಗಾಶ್ರಮ ಟ್ರಸ್ಟ್, ವೀರಶೈವ ವಿದ್ಯಾವರ್ಧಕ ಸಂಘ, ಯುವ ಬಸವ ಕೇಂದ್ರ, ಜಿಲ್ಲಾ ಶಿವಶಿಂಪಿ ಸಮಾಜ, ಮಹಿಳಾ ಬಸವ ಕೇಂದ್ರದ ಸದಸ್ಯರು ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News