ತೋಡಾರು ಅರೆಬಿಕ್ ಕಾಲೇಜಿನ ವಾರ್ಷಿಕೋತ್ಸವದ ಪ್ರಚಾರಾರ್ಥ ಜಾಥಾ

Update: 2017-04-23 11:02 GMT

ಮೂಡಿಗೆರೆ, ಎ.23: ದಕ್ಷಿಣ ಕನ್ನಡ ಜಿಲ್ಲೆಯ ತೋಡಾರು ಅರೆಬಿಕ್ ಕಾಲೇಜಿನ 7ನೇ ವಾಷಿಕೋತ್ಸವದ ಹಿನ್ನೆಲೆಯಲ್ಲಿ ಕಾಲೇಜು ವಾರ್ಷಿಕೋತ್ಸವದ ಪ್ರಚಾರಾರ್ಥ ಜಾಥಾಕ್ಕೆ ಕೊಟ್ಟಿಗೆಹಾರದಲ್ಲಿ ರವಿವಾರ ಚಾಲನೆ ನೀಡಲಾಯಿತು.

ಬಿಳಗುಳ ಮಸೀದಿ ಖತೀಬ್ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮಾತನಾಡಿ, ಅರೆಬಿಕ್ ಶಾಲೆಗಳು ಕಡಿಮೆ ಸಂಖ್ಯೆಯಲ್ಲಿದ್ದು, ತೋಡಾರು ಅರೆಬಿಕ್ ಶಾಲೆ ಪ್ರಾರಂಭವಾಗಿ ಏಳನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಪ್ರಾಥಮಿಕ ಹಂತದಿಂದ ಪದವಿವರೆಗೂ ಉತ್ತಮ ಶಿಕ್ಷಣ ನೀಡುತ್ತಾ ಬಂದಿದ್ದು, ಮುಸ್ಲಿಂ ಮಕ್ಕಳು ಇದರ ಪ್ರಯೋಜನ ಪಡೆಯಲು ಬೆಳ್ತಂಗಡಿ ತಾಲೂಕಿನಿಂದ ಮೂಡಿಗೆರೆ ತಾಲೂಕಿನಾದ್ಯಂತ ಪ್ರಚಾರದ ಜಾಥಾ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಪೀಸ್ ಆ್ಯಂಡ್ ಅವೇರ್ ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ ಮಾತನಾಡಿ, ತೋಡಾರಿನ ಶಂಸುಲ್ ಉಲಮಾ ಅರೆಬಿಕ್ ಸಂಸ್ಥೆಯು ಇದೇ ತಿಂಗಳ 29 ಮತ್ತು 30 ರಂದು ಏಳನೇ ಯಶಸ್ವಿ ವಾರ್ಷಿಕೋತ್ಸವ ನಡೆಸುತ್ತಿದ್ದು, ಮುಸ್ಲಿಂ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಹಾಗೂ ಧಾರ್ಮಿಕ ಶಿಕ್ಷಣ ಕಲಿಯಲು ಸಾಧ್ಯವಾಗಿದೆ. ವಿವಿಧ ಕೋರ್ಸ್‌ಗಳು ಈ ಶಾಲೆಯಲ್ಲಿ ಇದ್ದು, ಸಮುದಾಯದ ಎಲ್ಲಾ ಮಕ್ಕಳಿಗೆ ಆಶ್ರಯವಾಗುವ ನಿಟ್ಟಿನಲ್ಲಿ ನಾವು ಪ್ರಚಾರದ ಜಾಥಾ ಆರಂಭಿಸಿದ್ದೇವೆ ಎಂದು ನುಡಿದರು.

ದ.ಕ. ಜಿಲ್ಲೆಯಿಂದ ಕಾಲೇಜಿನ ಒಟ್ಟು 25 ವಿದ್ಯಾರ್ಥಿಗಳು ಪ್ರಚಾರ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಚಾರ ಜಾಥಾದಲ್ಲಿ ಕೊಟ್ಟಿಗೆಹಾರ ಮಸೀದಿಯ ಗುರು ಅಬ್ದುಲ್‌ಖಾದರ್ ಹನೀಫಿ, ಕೊಟ್ಟಿಗೆಹಾರ ಮಸೀದಿಯ ಅಧ್ಯಕ್ಷ ಅಬೂಬಕರ್ ಸಿದ್ದೀಕ್, ಎ.ಎಂ.ಮೊಹ್ದೀನ್, ಹುಸೈನ್, ಸನಾವುಲ್ಲಾ, ಮೊಹ್ದೀನ್‌ಸೇಟ್, ಇಬ್ರಾಹೀಂ, ಸೈಪುಲ್ಲಾ, ಖಲಂದರ್, ಜಲೀಲ್, ಟಿ.ಎ.ಖಾದರ್, ಹಸನಬ್ಬ ಬಿಳುಗುಳ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News