ವಿದ್ಯಾದಾನ್‌ಗೆ ಅರ್ಜಿ ಆಹ್ವಾನ

Update: 2017-05-09 15:51 GMT

ಬೆಂಗಳೂರು, ಮೇ 9: ದೀಕ್ಷಾ ಸಂಸ್ಥೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನೂತನ ಸ್ಕಾಲರ್‌ಶಿಪ್ ವಿದ್ಯಾದಾನ್ ಆರಂಭಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಶ್ರೀಧರ್ ತಿಳಿಸಿದ್ದಾರೆ.

 ಸಮರ್ಥ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಸಂಸ್ಥೆಯಿಂದ ಈ ಯೋಜನೆ ಪ್ರಾರಂಭಿಸಿದ್ದೇವೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವೆಡೆಯಲ್ಲಿನ 28 ಕ್ಯಾಂಪಸ್‌ಗಳನ್ನು ಪೂರೈಸಿರುವ ಸಂಸ್ಥೆ ಹೈದಾರಾಬಾದ್‌ನಲ್ಲಿ ಈಗ ತನ್ನ ಕಾರ್ಯಚಟವಟಿಕೆ ಆರಂಭಿಸಿ ಕಳೆದ 18 ವರ್ಷಗಳಲ್ಲಿ 43 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

10ನೆ ತರಗತಿಯನ್ನು ಯಶಸ್ವಿಯಾಗಿ ಪೂರೈಸಿ ಆರ್ಥಿಕ ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವ ಹಾಗೂ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ಸಂಸ್ಥೆ ಭರವಸೆ ನೀಡಿದ್ದು, ಜೀವನವನ್ನು ಬದಲಿಸುವುದು ವಿದ್ಯಾದಾನ್‌ನ ತತ್ವವಾಗಿದೆ ಎಂದ ಅವರು, ಸಂಸ್ಥೆಯು ಜೆಇಇ, ನೀಟ್, ಸಿಇಟಿ ಮತ್ತು ಪಿಯು ಪರೀಕ್ಷೆಗಳಲ್ಲಿ ಹಲವಾರು ಟಾಪರ್‌ಗಳನ್ನು ಗುರುತಿಸಿ, ಅವರನ್ನು ಸದಾ ಪ್ರೋತ್ಸಾಹಿಸುತ್ತಿದೆ ಎಂದರು.

 ನಾಮನಿರ್ದೇಶಿತ ವಿದ್ಯಾರ್ಥಿಗಳು ದೀಕ್ಷಾ ಕ್ಯಾಂಪಸ್‌ನಲ್ಲಿ ಪಿಯು, ಇಂಟರ್ ಮೀಡೀಯಾ ಶಿಕ್ಷಣವನ್ನು ವಿಜ್ಞಾನ ಅಥವಾ ವಾಣಿಜ್ಯ ವಿಷಯದಲ್ಲಿ ಪಡೆಯಬಹುದಾಗಿದೆ. ಇದು ನೂತನ ಸ್ಕಾಲರ್‌ಶಿಪ್ ಯೋಜನೆಯಾಗಿದ್ದು, ಚೆನ್ನಾಗಿ ಕಲಿಯುವ ಮತ್ತು ಕಠಿಣ ಪರಿಶ್ರಮದಿಂದ ಹತ್ತನೆ ತರಗತಿ ಪೂರೈಸಿರುವ ವಿದ್ಯಾರ್ಥಿಗಳು ನಾಮನಿರ್ದೇಶನ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಸಂಸ್ಥೆಯ ವೆಬ್‌ಸೈಟ್vidyadaan.deekshalearning.com ಅನ್ನು ಭೇಟಿ ಮಾಡಬಹುದು ಅಥವಾ 7760995098 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News