ಉದ್ಯಮಿಗೆ 59ಲಕ್ಷರೂ. ಮೋಸ ಮಾಡಿದ ನೈಜೀರಿಯನ್ ವ್ಯಕ್ತಿ ಸೆರೆ

Update: 2017-05-10 05:45 GMT

 ಮುಂಬೈ,ಮೇ 10: ಕೇರಳದ ಉದ್ಯಮಿಯೊಬ್ಬರಿಗೆ 59 ಲಕ್ಷ ರೂಪಾಯಿ ವಂಚಿಸಿದ ನೈಜೀರಿಯದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಲ್ಬೊ ಎಂದು ಗುರುತಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಗೆಳೆತನ ಬೆಳೆಸಿದ್ದ ಈತ ಉದ್ಯಮಿಯಿಂದ ಹಣವನ್ನು ಉಪಾಯವಾಗಿ ಪೀಕಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 ಇಲ್ಬೊನನ್ನು ನವಿ ಮುಂಬೈಯ ಪನವೇಲ್‌ನಲ್ಲಿ ಬಂಧಿಸಲಾಗಿದ್ದು, ಜಾನ್‌ಕ್ರಾಕ್ಲಿನ್ ಎನ್ನುವ ನಕಲಿ ಫೇಸ್‌ಖಾತೆಯನ್ನು ಹೊಂದಿದ್ದ ಎಂದು ಪೊಲೀಸರು ಹೇಳಿದರು.

 ಅಮೆರಿಕದ ಭೂಸೇನೆಯ ಅಧಿಕಾರಿಯೆಂದು ತನ್ನನ್ನು ಉದ್ಯಮಿಗೆ ಆತ ಪರಿಚಯಿಸಿಕೊಂಡಿದ್ದ. ಕಳೆದ ಜನವರಿಯಲ್ಲಿ ಘಟನೆ ನಡಿದಿತ್ತು. ತನಗೆ ಕೆಮಿಕಲ್ ಲ್ಯಾಬ್ ಇದೆ. ಅದನ್ನು ಅಮೆರಿಕಕ್ಕೆ ಸ್ಥಾಳಾಂತರಿಸಲು ಬಯಸುತ್ತಿದ್ದೇನೆ. ಭೇಟಿಯಾದಾಗ ತಾವು ಕಂಪೆನಿಯ ಮ್ಯಾನೇಜರ್ ಆಗಬೇಕೆಂದು ಉದ್ಯಮಿಯನ್ನು ಓಲೈಸಿದ್ದ. ಹೀಗೆ ವಿಶ್ವಾಸ ಗಳಿಸಿಕೊಂಡ ಆತ ಹಲವು ಬಾರಿ ಒಟ್ಟು 59 ಲಕ್ಷರೂಪಾಯಿಯನ್ನು ಉದ್ಯಮಿಯಿಂದ ಪೀಕಿಸಿದ್ದಾನೆ.

ಎಪ್ರಿಲ್ 29ಕ್ಕೆ ಕೇರಳಕ್ಕೆ ಬರುತ್ತೇನೆ, ತಿರುವನಂತಪುರಂ ವಿಮಾನನಿಲ್ದಾಣದಲ್ಲಿ ಕಾದು ನಿಲ್ಲಬೇಕೆಂದು ಹೇಳಿದ್ದ. ಆನಂತರ ಮೂರುದಿನ ಈತ ಫೋನ್ ಮಾಡಲಿಲ್ಲ. ನಾಲ್ಕನೆ ದಿವಸ ಫೋನ್ ಎತ್ತಿತನ್ನನ್ನು ಕೆಲವರು ಅಪಹರಿಸಿದ್ದರು. 25 ಲಕ್ಷರೂಪಾಯಿ ಕೊಡದಿದ್ದರೆ ಕೊಲ್ಲುವ ಬೆದರಿಕೆಯೊಡ್ಡಿದ್ದಾರೆ ಎಂದು ಉದ್ಯಮಿಗೆ ತಿಳಿಸಿದ್ದಾನೆ. ಉದ್ಯಮಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಇಲ್ಬೊನನ್ನು ಹುಡುಕಿ ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News