ವಕ್ಫ್ ಆಸ್ತಿ ಸಂರಕ್ಷಣೆಗೆ ಕಾರ್ಯಪಡೆ ರಚನೆ: ಸಚಿವ ತನ್ವಿರ್ ಸೇಠ್

Update: 2017-05-16 04:11 GMT

ಚಿತ್ರದುರ್ಗ, ಮೇ 16: ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಕಬಳಿಕೆ ಹಾಗೂ ಒತ್ತುವರಿ ತಡೆಗೆ ಟಾಸ್ಕ್‌ಪೋರ್ಸ್ (ಕಾರ್ಯಪಡೆ) ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪೌಢ್ರ ಶಿಕ್ಷಣ, ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವ ತನ್ವಿರ್ ಸೇಠ್ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾ ವಕ್ಫ್ ಮಂಡಳಿಯಿಂದ ಜಿ.ಪಂ. ಸಭಾಂಗಣದಲ್ಲಿ ನಡೆದ ಮುತುವಲ್ಲಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ 1995ರಲ್ಲಿ ವಕ್ಫ್ ಕಾಯ್ದೆ ರೂಪಿಸಿತು. ಇದೀಗ ರಾಜ್ಯ ಸರಕಾರ ವಕ್ಫ್ ಕಾಯಿದೆ ನಿಯಮ ಸಿದ್ದಪಡಿಸಿ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗೆ ಅವಕಾಶ ಕಲ್ಪಿಸಿದೆ ಎಂದರು.


ಸರಕಾರಿ ಯೋಜನೆಗಳ ಬಗ್ಗೆ ಮುತುವಲ್ಲಿಗಳಿಗೆ ತಿಳುವಳಿಕೆ ನೀಡುವುದಲ್ಲದೆ ವಕ್ಫ್ ಆಸ್ತಿಗಳನ್ನು ಕಬಳಿಸುವ ಇಲ್ಲವೆ, ಒತ್ತುವರಿ ಮಾಡುವವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುವುದೆಂದು ಎಚ್ಚರಿಸಿದ ಅವರು, ಮಸೀದಿ, ಖಬರಸ್ಥಾನ್, ಈದ್ಗಾಗಳಲ್ಲಿ ಯಾವ ರೀತಿಯ ನಿಯಮ ಪಾಲಿಸಬೇಕೆಂಬ ಹೊಣೆ ಮುತುವಲ್ಲಿಗಳ ಮೇಲಿದೆ ಎಂದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಬಿ.ಕೆ.ರೆಹಮತ್ ಉಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷ್, ಮುಖಂಡರಾದ ಸರ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News