ಸಾಂಕ್ರಾಮಿಕ ಕಾಯಿಲೆಗಳ ತಡೆಗೆ ಕ್ರಮ

Update: 2017-05-27 17:16 GMT

ಕಾರವಾರ, ಮೇ 27: ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಡೆಂಗ್, ಚಿಕುನ್ ಗುನ್ಯಾ, ಎಚ್1ಎನ್1 ಇಲಿಜ್ವರ, ಮಲೇರಿಯಾ, ಮಂಗನ ಕಾಯಿಲೆಯಂಥ ಮಾರಕ ಕಾಯಿಲೆಗಳನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸಾರ್ವಜನಿಕರಲ್ಲಿ ಹಾಗೂ ಶಾಲಾ ಮಕ್ಕಳಿಗೆ ಜಾಗೃತಿ ನೀಡುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.


ಪ್ರಸಕ್ತ ಸಾಲಿನಲ್ಲಿ ಹೊನ್ನಾವರ ತಾಲೂಕಿನಲ್ಲಿ ಐದು ಮಂಗನಕಾಯಿಲೆ ಪತ್ತೆಯಾಗಿವೆ. ಕಳೆದ 2012ರಲ್ಲಿ ಜಿಲ್ಲೆಯಲ್ಲಿ ಒಟ್ಟು 68 ಡೆಂಗ್ ಪ್ರಕರಣಗಳು ದಾಖಲಾಗಿದ್ದವು. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಅದರಂತೆ ಕಾರವಾರ 5, ಅಂಕೋಲಾ1, ಕುಮಟಾ 3, ಹೊನ್ನಾವರ 1, ಭಟ್ಕಳ 38, ಶಿರಸಿ 5, ಸಿದ್ದಾಪುರ 8, ಯಲ್ಲಾಪುರ 3, ಮುಂಡಗೋಡ 2(ಒಂದು ಸಾವು), ಹಳಿಯಾಳ 2, 2013ರಲ್ಲಿ ಒಟ್ಟು 183 ಪ್ರಕರಣಗಳು ದಾಖಲಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. 2014ರಲ್ಲಿ 47, 2015ರಲ್ಲಿ 97, 2016ರಲ್ಲಿ 93 ಪ್ರಕರಣಗಳು ಪತ್ತೆಯಾಗಿವೆೆ.

ಚಿಕುನ್ ಗುನ್ಯಾ: 2013ರಲ್ಲಿ ಒಟ್ಟು 7 ಪ್ರಕರಣ ಪತ್ತೆಯಾಗಿದ್ದು ಸಿದ್ದಾಪುರ 1, ಮುಂಡಗೋಡ 5, ಹಳಿಯಾಳ 1, 2015ರಲ್ಲಿ ಕಾರವಾರದಲ್ಲಿ ಒಂದೇ ಪ್ರಕರಣ ಪತ್ತೆಯಾಗಿತ್ತು. ಮಲೇರಿಯಾ ಜ್ವರ ಈವರೆಗೆ ಹೆಚ್ಚು ಕಾಡಿದ ಕಾಯಿಲೆಯಾಗಿದೆ. ಹೊರ ಜಿಲ್ಲೆಯಲ್ಲಿ ಉಳಿದುಕೊಂಡು ಬರುವವರು ಈ ಕಾಯಿಲೆಯನ್ನು ಜಿಲ್ಲೆಗೆ ತರುತ್ತಿದ್ದಾರೆ ಎನ್ನುವು ಆರೋಗ್ಯ ಇಲಾಖೆ ಅಂಕಿ ಅಂಶ ಹೇಳುತ್ತದೆ. ಉಡುಪಿ, ಮಂಗಳೂರು ಭಾಗದದಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದವರಿಗೆ ಹೆಚ್ಚಿವರಿಗೆ ಮಲೇರಿಯಾ ಜ್ವರ ಕಾಡಿದೆ. 2030ರಲ್ಲಿ ದೇಶದಿಂದ ಮಲೇರಿಯಾ ನಿರ್ಮೂಲನೆ ಮಾಡುವ ಗುರಿ ಸರಕಾರದ್ದಾಗಿದ್ದು, ಜಿಲ್ಲೆಯಲ್ಲಿ 2022ರಲ್ಲಿ ಮಲೇರಿಯಾವನ್ನು ಸಂರ್ಪೂಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.

ಹೊನ್ನಾವರದಲ್ಲಿ ಮಂಗನ ಕಾಯಿಲೆ
ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಹೆಚ್ಚಾಗಿ ಮಂಗನ ಕಾಯಿಲೆ ಪತ್ತೆಯಾಗಿದೆ. 2013ರಲ್ಲಿ ಹೊನ್ನಾವರ 4, ಒಂದು ಸಾವು, ಸಿದ್ದಾಪುರದಲ್ಲಿ 4 ಪ್ರಕರಣ ಪತ್ತೆಯಾಗಿತ್ತು. 2014ರಲ್ಲಿ ಹೊನ್ನಾವ ರದಲ್ಲಿ 2 ಪ್ರಕರಣ ಹಾಗೂ ಭಟ್ಕಳದಲ್ಲಿ ಒಂದು, 2016ರಲ್ಲಿ ಭಟ್ಕಳ ಒಂದು, ಸಿದ್ದಾಪುರ 1, 2017ರ ಪ್ರಾರಂಭದ ಹಂತದಲ್ಲೇ 5 ಪ್ರಕರಣಗಳು ಪತ್ತೆಯಾಗಿವೆೆ. ಮಂಗನ ಕಾಯಿಲೆ ಪತ್ತೆಯಾಗಿರುವ ಪ್ರದೇಶ 5 ಕಿ.ಮೀ. ವ್ಯಾಪ್ತಿಯಲ್ಲಿ ಕಾಯಿಲೆ ಬಾರದಂತೆ ಚುಚ್ಚುಮದ್ದು ನೀಡಲಾಗುತ್ತಿದೆ.

ಈಗಾಗಲೇ ಹೊನ್ನಾವರದಲ್ಲಿ ಐದು ಪ್ರಕರಣಗಳು ಪತ್ತೆಯಾಗಿದ್ದು ಚುಚ್ಚು ಮದ್ದು ನೀಡಲಾಗಿದೆ. ಸಾಂಕ್ರಾಮಿಕ ರೋಗಗಳು ಮಳೆಗಾ ಲದಲ್ಲಿ ಹೆಚ್ಚಾಗಿ ಹರಡುವುದರಿಂದ ಜೂನ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ಜೂನ್ ತಿಂಗಳಲ್ಲಿ ಮಲೇರಿಯಾ ಮತ್ತು ಜುಲೈನಲ್ಲಿ ಡೆಂಗ್ ಮಾಸಾಚಾರಣೆ ಮಾಡಿ ಜನಜಾಗೃತಿ ಮೂಡಿ ಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ವ ಸಿದ್ಧ್ದತೆಗಳನ್ನು ಮಾಡಿಕೊಂಡಿದೆ.

ಜಿ. ಎನ್. ಅಶೋಕ ಕುಮಾರ,
ಜಿಲ್ಲಾ ಆರೋಗ್ಯ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News