ಲಂಡನ್ ಉಗ್ರರಿಗಾಗಿ ಪ್ರಾರ್ಥಿಸದ ಇಮಾಮರು

Update: 2017-06-06 16:12 GMT

ಲಂಡನ್, ಜೂ. 6: ಲಂಡನ್ ಸೇತುವೆ ದಾಳಿಕೋರರಿಗಾಗಿ ಸಾಂಪ್ರದಾಯಿಕ ಇಸ್ಲಾಮಿಕ್ ಅಂತ್ಯಸಂಸ್ಕಾರ ಪ್ರಾರ್ಥನೆಗಳನ್ನು ನಡೆಸಲು ಬ್ರಿಟನ್‌ನ 130ಕ್ಕೂ ಅಧಿಕ ಇಮಾಮರು ಮತ್ತು ಮುಸ್ಲಿಮ್ ಧಾರ್ಮಿಕ ನಾಯಕರು ನಿರಾಕರಿಸಿದ್ದಾರೆ.

ಅವರ ‘ಅಸಮರ್ಥನೀಯ ಕೃತ್ಯಗಳು’ ಸಂಪೂರ್ಣವಾಗಿ ಇಸ್ಲಾಮ್‌ನ ಬೋಧನೆಗಳಿಗೆ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ.

 ದೇಶಾದ್ಯಂತದ ಇಮಾಮರು ಮತ್ತು ಧಾರ್ಮಿಕ ನಾಯಕರು ಜಂಟಿ ಸಾರ್ವಜನಿಕ ಹೇಳಿಕೆಯೊಂದನ್ನು ನೀಡಿ, ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ ಹಾಗೂ ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರು ಅನುಭವಿಸಿದ ನೋವಿಗೆ ಕಂಬನಿ ಮಿಡಿದಿದ್ದಾರೆ.

ಅಭೂತಪೂರ್ವ ಕ್ರಮವೊಂದರಲ್ಲಿ, ಭಯೋತ್ಪಾದಕರಿಗಾಗಿ ಸಾಂಪ್ರದಾಯಿಕ ಇಸ್ಲಾಮಿಕ್ ಪ್ರಾರ್ಥನೆಗಳನ್ನು ಹೇಳಲು ನಿರಾಕರಿಸಿದರು ಹಾಗೂ ಹೀಗೆಯೇ ಮಾಡುವಂತೆ ಇತರರಿಗೂ ಕರೆ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News