ರಾಜ್ಯ ಪೊಲೀಸ್ ಇಲಾಖೆಯಲ್ಲಿ 2626 ಹುದ್ದೆಗಳು

Update: 2017-06-07 13:19 GMT

ಬೆಂಗಳೂರು, ಜೂ. 7: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2,626 ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜೂ.12 ಕೊನೆಯ ದಿನವಾಗಿದೆ.

ಪೊಲೀಸ್ ಕಾನ್‌ಸ್ಟೇಬಲ್(ನಾಗರಿಕ ಪುರುಷ)-1980, ಮಹಿಳೆ-496, ರೈಲ್ವೇಸ್ (ಪುರುಷ) 120, ಮಹಿಳೆ- 30 ಒಟ್ಟು 2,626 ಹುದ್ದೆಗಳು.

ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 19, ಗರಿಷ್ಠ 25 ವರ್ಷ ಆಗಿರಬೇಕು. ಪರಿಶಿಷ್ಟರಿಗೆ 2 ವರ್ಷ ವಯೋಮಿತಿ ಸಡಿಲಿಕೆಯಿದೆ. ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆಯಿದೆ. ಗ್ರಾಮೀಣ, ಕನ್ನಡ ಯೋಜನಾ ನಿರಾಶ್ರಿತ, ಮಾಜಿ ಸೈನಿಕರಿಗೆ ಮೀಸಲಾತಿಯಿದೆ. ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ದೇಹದಾರ್ಢ್ಯ ಪರೀಕ್ಷೆ
 ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 168 ಸೆಂ.ಮೀ. ಎದೆ ಸುತ್ತಳತೆ 86 ಸೆಂ.ಮೀ. ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 155 ಸೆಂ.ಮೀ,. ಎದೆ ಸುತ್ತಳತೆ-75 ಸೆಂ.ಮೀ.

ಸಾಮಾನ್ಯ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 157 ಸೆಂ.ಮೀ., ಕನಿಷ್ಠ ತೂಕ 45 ಕೆ.ಜಿ. ಅರಣ್ಯ ಪ್ರದೇಶದ ಬುಡಕಟ್ಟು ಮಹಿಳೆಯರಿಗೆ ಕನಿಷ್ಠ ಎತ್ತರ 150 ಸೆಂ.ಮೀ. ಇರಬೇಕು.

ಸಹಿಷ್ಣುತೆ ಪರೀಕ್ಷೆ

ಸಾಮಾನ್ಯ ಪುರುಷ ಅಭ್ಯರ್ಥಿಗಳು 1,600 ಮೀ. ಓಟವನ್ನು 6 ನಿಮಿಷ 30 ಸೆಕೆಂಡ್‌ಗಳಲ್ಲಿ ಪೂರೈಸಬೇಕು . ಎತ್ತರ ಜಿಗಿತ 1.20 ಮೀ. ಕಡಿಮೆ ಇಲ್ಲದಂತೆ, ಗುಂಡು ಎಸೆತ 5.60 ಮೀ. ಕಡಿಮೆ ಇಲ್ಲದಂತೆ 3-3 ಅವಕಾಶಗಳಲ್ಲಿ ಪೂರ್ಣ ಗೊಳಿಸಬೇಕು.

ಮಹಿಳಾ ಮತ್ತು ಸೈನಿಕ ಅಭ್ಯರ್ಥಿಗಳಿಗೆ 400 ಮೀ. ಓಟವನ್ನು 2 ನಿಮಿಷಗಳಲ್ಲಿ ಪೂರೈಸಬೇಕು. ಎತ್ತರ ಜಿಗಿತ 0.09 ಮೀ. ಕಡಿಮೆ ಇಲ್ಲದಂತೆ ಉದ್ದ ಜಿಗಿತ 2.50 ಮೀ. ಕಡಿಮೆ ಇಲ್ಲದಂತೆ 3 ಅವಕಾಶಗಳಲ್ಲಿ ಸಮಾಪ್ತಿಗೊಳಿಸಬೇಕು. ಅರ್ಜಿ ಶುಲ್ಕ ಸಾಮಾನ್ಯರಿಗೆ 250 ರೂ. ಪರಿಶಿಷ್ಟರಿಗೆ 100 ರೂ. ಆಯ್ಕೆಯಾದ ಅಭ್ಯರ್ಥಿಗಳಿಗೆ 11,600 ರೂ. ರಿಂದ 21,000 ರೂ ವೇತನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ನೇಮಕಾತಿ ಸಮಿತಿ, ಕಾರ್ಲಟನ್ ಭವನ. ಅರಮನೆ ಮೈದಾನ ಬೆಂಗಳೂರು, ದೂ22942261,22207044 ಅನ್ನು ಸಂಪರ್ಕಿಸಬಹುದು . ಅರ್ಜಿಗಳನ್ನು ಇಲಾಖೆಯ ವೆಬ್‌ಸೈಟ್ www. ksp.gov.in ಮೂಲಕವೇ ಸಲ್ಲಿಸಬೇಕು ಬೇರೆ ಅವಕಾಶವಿಲ್ಲ.
 

ಅರ್ಜಿ ಸಲ್ಲಿಕೆ ಹೇಗೆ ?
pcnhk17.ksp-online. in/index.aspx ಲಾಗ್ ಆನ್ ಆಗಬೇಕು. ಪರದೆಯಲ್ಲಿಯೇ ನ್ಯೂ ಅಪ್ಲಿಕೇಶನ್ ಎಂದು ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ ಮತ್ತೊಂದು ಪರದೆ ತೆರೆದುಕೊಳ್ಳುತ್ತದೆ. ಅದನ್ನು ಓದಿ ಅನಂತರ ಒಪ್ಪಿಗೆ ಸೂಚಿಸಿ, ಬಳಿಕ ಮತ್ತೊಂದು ಪರದೆಯಲ್ಲಿ ನೇರ ಅಭ್ಯರ್ಥಿಯೇ ಅಲ್ಲವೇ ಎಂಬುದನ್ನು ನಮೂದಿಸಿ, ಅನಂತರ ಹೆಸರು, ವಿಳಾಸ, ಎತ್ತರ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ , ವಿದ್ಯಾರ್ಹತೆ, ಮೀಸಲಾತಿಗಳನ್ನು ನಮೂದಿಸಿ, ಜತೆಗೆ ನಿಮ್ಮ ಪೋಟೋ, ಸಹಿ ಮಾಡಿದ ಚಿತ್ರ, ಗುರುತಿನ ಚೀಟಿ (ಬ್ಯಾಂಕ್ ಪಾಸ್ ಬುಕ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಇತ್ಯಾದಿ) ಯನ್ನು ಅಪ್ಲೋಡ್ ಮಾಡಿ ಒಪ್ಪಿಗೆ ಸೂಚಿಸಿ.

ಅರ್ಜಿ ಸಲ್ಲಿಕೆ ಯಶಸ್ವಿಯಾದರೆ ಅರ್ಜಿಯಲ್ಲಿ ಉಲ್ಲೇಖಿಸಿರುವ ಮೊಬೈಲ್ ನಂಬರ್, ಇ-ಮೇಲ್ ವಿಳಾಸಕ್ಕೆ ಸಂದೇಶ ಬರುತ್ತದೆ. ಅದರಲ್ಲಿ ಅಪ್ಲಿಕೇಶನ್ ನಂಬರ್ ಇತ್ಯಾದಿ ಮಾಹಿತಿ ಇರುತ್ತದೆ. ಅನಂತರ ಬ್ಯಾಂಕ್ ಚಲನ್ ರಸೀದಿ ಸೃಷ್ಟಿಯಾಗುತ್ತದೆ. ಅದನ್ನು ಪಡೆದು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಹಣ ಪಾವತಿಸಿ. ಅಲ್ಲಿ ಹಣ ಪಾವತಿ ಮಾಡಿರುವುದಕ್ಕೆ ಒಂದು ನಂಬರ್ ನೀಡುತ್ತಾರೆ. ಎರಡು ದಿನಗಳ ಬಳಿಕ pcnhk17.ksp-online. in/index.aspx  ಜಾಲತಾಣಕ್ಕೆ ಹೋಗಿ ಮೈ ಅಪ್ಲಿಕೇಶನ್ ಆಯ್ಕೆ ಮಾಡಿ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ನೀಡಿ ಲಾಗಿನ್ ಆಗಿ ಬ್ಯಾಂಕ್‌ನವರು ನೀಡಿರುವ ಖಾತ್ರಿ ನಂಬರ್ ಅನ್ನು ಲಗತ್ತಿಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News