ಚಲಿಸುತ್ತಿದ್ದ ರಿಕ್ಷಾದಲ್ಲಿ ಕಿರುಕುಳ ನೀಡಿ ಮಹಿಳೆಯನ್ನು ರಸ್ತೆಗೆಸೆದು ಹೋದ ದುಷ್ಕರ್ಮಿಗಳು

Update: 2017-06-09 05:45 GMT

ಹೊಸದಿಲ್ಲಿ, ಜೂ.9: ಚಲಿಸುತ್ತಿದ್ದ ಆಟೊ ರಿಕ್ಷಾದಲ್ಲಿ ಮಹಿಳೆಗೆ ಕಿರುಕುಳ ನೀಡಿದ ದುಷ್ಕರ್ಮಿಗಳು ಆಕೆಯನ್ನು ರಸ್ತೆಗೆಸೆದು ಹೋದ ಘಟನೆ ನೌಪಾಡಾ ಎಂಬಲ್ಲಿ ನಡೆದಿದೆ.

ಚಿತ್ತಲ್ ಸರ್ ಮನ್ಪಾಡಾದಲ್ಲಿ ನೆಲೆಸಿರುವ ಮಹಿಳೆ ಖಾಸಗಿ ಸಂಸ್ಥೆಯೊಂದರಲ್ಲಿ ಡಯಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನೌಪಾಡಾ ಪೊಲೀಸರು ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ.

ರಾತ್ರಿ ಸುಮಾರು 9:30ರ ಸುಮಾರಿಗೆ ಮಹಿಳೆ ಟೀನ್ ಹಾತ್ ನಾಕ ತಲುಪಿ ಅಲ್ಲಿಂದ ರಿಕ್ಷಾವೊಂದಕ್ಕೆ ಹತ್ತಿದ್ದರು. ರಿಕ್ಷಾ ಪೋಕ್ರನ್ ರಸ್ತೆ ತಲುಪುತ್ತಲೇ ಆಕೆಯ ಹಿಂಬದಿ ಕುಳಿತಿದ್ದ ವ್ಯಕ್ತಿ ಕಿರುಕುಳ ನೀಡಲು ಆರಂಭಿಸಿದ್ದ. ಈ ಸಂದರ್ಭ ಮಹಿಳೆ ಕಿರುಚಿದ್ದು, ರಿಕ್ಷಾ ಚಾಲಕ ಮನ್ಪಡಾ ರಸ್ತೆಗೆ ಬದಲಾಗಿ ಸರ್ವಿಸ್ ರಸ್ತೆಯಲ್ಲಿ ರಿಕ್ಷಾ ಚಲಾಯಿಸಿದ್ದಾನೆ. ಇದರಿಂದ ಹೆದರಿದ ಮಹಿಳೆ ರಿಕ್ಷಾದಿಂದ ಧುಮುಕಲು ಯತ್ನಿಸಿದ್ದು, ಆಕೆಯನ್ನು ತಡೆದ ದುಷ್ಕರ್ಮಿಗಳು ದೌರ್ಜನ್ಯ ಎಸಗಿ ರಿಕ್ಷಾದಿಂದ ದೂಡಿ ಹಾಕಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಅಲ್ಲಿದ್ದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮನೆಯವರಿಗೆ ಮಾಹಿತಿ ನೀಡಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News