ಮಕ್ಕಳ ಬಗ್ಗೆ ಗಮನವಿರಲಿ

Update: 2017-06-09 18:49 GMT

ಮಾನ್ಯರೆ, ಕೆಲವು ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವ ಮೊದಲೇ ಅಧ್ಯಾಪಕರು ಮನೆಗೆ ತೆರಳುವುದು ಕಂಡುಬರುತ್ತಿದೆ.

ತಾವು ಬೇಗ ಮನೆಗೆ ಸೇರಬೇಕೆಂಬ ಆತುರದಲ್ಲಿ ಎಲ್ಲಾ ಮಕ್ಕಳು ಅವಸರವಾಗಿ ಒಮ್ಮೆಲೇ ತರಗತಿಯಿಂದ ಹೊರ ಬರುವ ಪರಿಣಾಮ ಕೆಲವು ದುರ್ಬಲ ವಿದ್ಯಾರ್ಥಿಗಳು ಕಾಲ್ತುಳಿತಕ್ಕೆ ಒಳಗಾಗುತ್ತಾರೆ ಅಥವಾ ತರಗತಿಯಲ್ಲಿನ ಬೆಂಚು-ಡೆಸ್ಕುಗಳು ವಿದ್ಯಾರ್ಥಿಗಳ ಮೇಲೆ ಬಿದ್ದು ಪೆಟ್ಟಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಶಿಕ್ಷಕರು ಕೂಡಲೇ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳನ್ನು ಶಿಸ್ತಿನಿಂದ ಸಾಲಾಗಿ ತರಗತಿ ಬಿಡುವಂತೆ ರೂಢಿ ಮಾಡಿಸಿಕೊಡಬೇಕು. ಜೊತೆಗೆ ಶಾಲಾ ವಾಹನದಿಂದ ಬರುವ ಮಕ್ಕಳು ಸರತಿ ಸಾಲಿನಲ್ಲಿ ವಾಹನ ಏರುವುದನ್ನು ಗಮನಿಸಿ, ಅವರು ಶಾಲೆ ಬಿಟ್ಟ ನಂತರವೇ ಅಧ್ಯಾಪಕರು ಶಾಲೆ ಬಿಡುವ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ.

ಇಂತಹ ಸಮಸ್ಯೆಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಬೇಕಾಗಿದೆ.

Writer - -ಅಝಾದ್ ಕಂಡಿಗ, ಕಡೇಶಿವಾಲ್ಯ

contributor

Editor - -ಅಝಾದ್ ಕಂಡಿಗ, ಕಡೇಶಿವಾಲ್ಯ

contributor

Similar News