ರೈತರ ಮನವೊಲಿಕೆಗಾಗಿ ಉಪವಾಸ ಕೂತ ಶಿವರಾಜ್ ಸಿಂಗ್ ಚೌಹಾಣ್: ಇದು ನಾಟಕ ಎಂದ ಕಾಂಗ್ರೆಸ್

Update: 2017-06-10 12:52 GMT

 ಭೋಪಾಲ, ಜೂ. 10: ಮಧ್ಯಪ್ರದೇಶದಲ್ಲಿ ಹಿಂಸಾತ್ಮಕ ರೂಪಕ್ಕೆ ಹೊರಳಿರುವ ರೈತ ಚಳವಳಿಯಿಂದ ಕುಸಿದುಹೋಗಿರುವ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಶಾಂತಿ ಕಾಪಾಡಲುಆಗ್ರಹಿಸಿ ಶನಿವಾರ ದಸರಾ ಮೈದಾನದಲ್ಲಿ ಅನಿಶ್ಚಿತಕಾಲ ಉಪವಾಸ ಕೂತಿದ್ದಾರೆ. ತಾನು ಶಾಂತಿ ಮರಳಲಿಕ್ಕಾಗಿ ಉಪವಾಸ ಕೂತುಕೊಳ್ಳುತ್ತಿದ್ದೇನೆ ಎಂದು ಶಿವರಾಜ್ ಚೌಹಾಣ್ ಹೇಳಿದ್ದಾರೆ. ನನ್ನ ಉಪವಾಸ ರೈತರೊಂದಿಗೆ ಯುದ್ಧವಲ್ಲ, ನಾನು ಕೂಡಾ ಅವರ ಜೊತೆಗಿರುವುದರ ಪ್ರತೀಕವಾಗಿದೆ. ರೈತರು ಪ್ರಚೋದನೆಗೊಳಗಬಾರದು ಎಂದು ವಿನಂತಿಸಿದ್ದಾರೆ.

 ಇದರ ಮೊದಲು ಶುಕ್ರವಾರ ಮುಖ್ಯಮಂತ್ರಿಯ ಸರಕಾರಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಅವರು" ನಾನು ಕಲ್ಲುಗುಂಡಿಗೆಯವನಲ್ಲ. ನಾನು ನಾಳೆಯಿಂದ ವಲ್ಲಭಭಾಯಿ ಭವನ( ಮಂತ್ರಾಲಯ)ದಲ್ಲಿ ಕೂರಲಾರೆ. ಶಾಂತಿಗೆ ಮೊರೆಯಿಟ್ಟು ದಸಾರಾ ಮೈದಾನದಲ್ಲಿ ಕುಳಿತುಕೊಳ್ಳುತ್ತೇನೆ. ಶಾಂತಿ ಮರುಕಳಿಸುವವರೆಗೂ ಕುಳಿತುಕೊಳ್ಳುತ್ತೇನೆ ಎಂದು ತಿಳಿಸಿದ್ದರು.

ಮಕ್ಕಳ ಕೈಯಲ್ಲಿ ಕಲ್ಲು:

" ನಾನು ಭೋಪಾಲದ ದಶರಾಮೈದಾನದಲ್ಲಿ ರೈತರೊಂದಿಗೆ ಚರ್ಚೆಗೆ ಲಭ್ಯವಿದ್ದೇನೆ. ಅಲ್ಲಿಂದಲೇ ಸರಕಾರವನ್ನು ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಚೌಹಾಣ್ ತಮ್ಮ ಚಳವಳಿಯನ್ನು ನಿಲ್ಲಿಸುವಂತೆ ರೈತರನ್ನು ವಿನಂತಿಸಿದರು. " ನೀವೆಲ್ಲಿಗೂ ಹೋಗುವುದು ಬೇಡ. ಬನ್ನಿ ಚರ್ಚಿಸೋಣ, ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಇದು ಪ್ರಜಾಪ್ರಭುತ್ವದ ರೀತಿಯೂ ಆಗಿದೆ " ಎಂದು ಕರೆ ನೀಡಿದರು. ಕೆಲವರು 18-22ವರ್ಷಗಳ ಮಕ್ಕಳ ಕೈಗೆ ಕಲ್ಲು ಕೊಡುವ ಕೆಲಸವನ್ನು ಮಾಡಿದ್ದಾರೆ. ಕೆಲವು ಕಡೆ ಮುತ್ತಿಗೆ ಹಾಕಿದಂತೆ ಕಂಡು ಬರುತ್ತದೆ. ಅಲ್ಲಿ ಮಕ್ಕಳು ಕಂಡು ಬರುತ್ತಿದ್ದಾರೆ ಎಂದು ಅವರು ಹೇಳಿದರು.

ಶಿವರಾಜ್‌ರದ್ದು ಕೇಜ್ರಿವಾಲ್‌ರಂತಹ ನಾಟಕ:

ಶಿವರಾಜ್ ಚೌಹಾಣ್ ರದು ದಸರಾ ಮೈದಾನದಿಂದ ಸರಕಾರ ನಡೆಸುವ ಘೋಷಣೆಯನ್ನು ವಿಪಕ್ಷಗಳು ಕಟುವಾಗಿ ಟೀಕಿಸಿವೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಅಜಯ್ ಸಿಂಗ್ , ರೈತರ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಬದಲು ಮುಖ್ಯಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿ ನಾಟಕ ಮಾಡುತ್ತಿದ್ದಾರೆ. ಇದು ಮೂಲ ವಿಷಯಗಳಿಂದ ಬೇರೆಡೆಗೆ ಗಮನ ತಿರುಗಿಸುವ ತಂತ್ರ ಇದು ಎಂದು ಟೀಕಿಸಿದ್ದಾರೆ. ಕಮ್ಯುನಿಸ್ಟ್ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಬಾದಲ್ ಸರೋಜ್‌ರು, "ರೈತರ ಹತ್ಯೆಯ ನಂತರವೂ ಅವರ ಬಗ್ಗೆ ಅಪಶಬ್ದಮಾತಾಡುತವ ಸರಕಾರದ ಮುಖ್ಯಮಂತ್ರಿ ಶಾಂತಿಗೆ ಕರೆ ನೀಡಿ ಉಪವಾಸ ಕೂತಿದ್ದು ಶುದ್ಧ ರಾಜಕೀಯ ಪಾಷಂಡಿತನವಾಗಿದೆ" ಎಂದು ಹೇಳಿದ್ದಾರೆ. ಪೀಡಿತ, ಆಂದೋಲನ ನಿರತ ಮತ್ತು ಶೋಕ ಸಂತಪ್ತ ಕುಟುಂಬಗಳ ನೋವಿಗೆ ಉಪ್ಪು ಸುರಿಯುವ ಕೆಲಸ ಇದು ಎಂದು ಅವರು ಮುಖ್ಯಮಂತ್ರಿಯನ್ನು ಟೀಕಿಸಿದ್ದಾರೆ.

‘ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ’ ಅಥವಾ ‘ಕಲ್ಲುಗಳನ್ನು ತೂರಿ ’ ಎಂಬ ಶಬ್ದಗಳನ್ನು ಕೇಳಿ ತನಗೆ ನೋವುಂಟಾಗಿತ್ತು ಎಂದು ಕಾಂಗ್ರೆಸ್ ಹೆಸರು ಪ್ರಸ್ತಾಪಿಸದೆ ಹೇಳಿದ ಚೌಹಾಣ್, ಮಂದಸೋರ್ ಘಟನೆ ಅತ್ಯಂತ ದುರದೃಷ್ಟಕರ. ತಾನು ಇದರಿಂದ ತೀವ್ರವಾಗಿ ನೊಂದಿದ್ದೇನೆ. ಹಿಂಸಾಚಾರದ ಹಿಂದೆ ಯಾರಿದ್ದರು ಮತ್ತು ಅವರ ಉದ್ದೇಶವೇನಾಗಿತ್ತು ಎಂಬ ಬಗ್ಗೆ ವಿಚಾರಣೆ ನಡೆಸುತ್ತೇನೆ. ಮುಷ್ಕರದ ಸಂದರ್ಭ ಹಿಂಸೆಯನ್ನು ಹರಡಿದವರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News