ಪ್ರತಿಷ್ಠಿತ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೂಲಕ ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಿಸುವ ಸುವರ್ಣಾವಕಾಶ

Update: 2017-07-03 06:57 GMT

ಕಾರ್ಕಳದ ನಿಟ್ಟೆಯಲ್ಲಿ 1986ರಲ್ಲಿ ಆರಂಭಿಸಲಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಶಿಕ್ಷಣ ಸಂಸ್ಥೆ (ಎನ್‌ಎಂಎಎಂಐಟಿ) ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿದೆ. ಹೊಸದಿಲ್ಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾನ್ಯತೆ ಪಡೆದಿರುವ ಎನ್‌ಎಂಎಎಂಐಟಿ ಗುಣಮಟ್ಟದ ಶಿಕ್ಷಣಕ್ಕಾಗಿ ಎನ್‌ವಿಟಿಕ್ಯೂಸಿನಿಂದ ಐಎಸ್‌ಒ 9001-2015 ಪ್ರಮಾಣಪತ್ರವನ್ನೂ ಪಡೆದಿದೆ. ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಮಾನ್ಯತೆ ನೀಡಿದೆ. ವಿಶ್ವಬ್ಯಾಂಕ್ ಯೋಜನೆಯಾದ ಟಿಇಕ್ಯೂಐಪಿ 1 ಮತ್ತು 2 ಯೋಜನೆಯಡಿ ಎನ್‌ಎಂಎಎಂಐಟಿ ಲೀಡ್ ಸಂಸ್ಥೆ ಸ್ಥಾನಮಾನ ಪಡೆದಿದೆ. ಇದು ಎನ್ ಬಿಎ ತರಬೇತಿಯ ನೋಡಲ್ ಕೇಂದ್ರವಾಗಿದೆ.

ಶೈಕ್ಷಣಿಕ ಸ್ವಾಯತ್ತತೆಯ ಸ್ಥಿತಿಸ್ಥಾಪಕತ್ವವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದ್ದು, ಪ್ರತೀ ವರ್ಷದ ಫೆಬ್ರವರಿಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಂಪೆನಿಗಳಿಗೆ ವೇತನಸಹಿತ ಇಂಟರ್ನ್‌ಶಿಪ್‌ಗಾಗಿ ಕಳುಹಿಸಲಾಗುತ್ತದೆ. ಆದ್ದರಿಂದ ಪದವಿ ಪೂರ್ತಿಗೊಳಿಸಿದ ತಕ್ಷಣವೇ ವಿದ್ಯಾರ್ಥಿಗಳು ಉದ್ಯೋಗ ಸೇರಲು ಸಾಧ್ಯವಾಗುತ್ತದೆ.

ವಾರ್ಷಿಕವಾಗಿ ಪದವಿ ತರಗತಿಗಳಿಗೆ 1,080 ಹಾಗೂ ಸ್ನಾತಕೋತ್ತರ ತರಬೇತಿಗೆ 518 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತದೆ. 4875 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುತ್ತಿದ್ದು, 293 ಬೋಧಕ ಸಿಬ್ಬಂದಿ ಹಾಗೂ 503 ಪೂರಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು 11 ಸಾವಿರಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳನ್ನು ಹೊಂದಿದೆ.

ಎನ್‌ಎಂಎಎಂಐಟಿಯಲ್ಲಿ ಅತ್ಯುನ್ನತ ಗುಣಮಟ್ಟದ ಶೈಕ್ಷಣಿಕ ವಾತಾವರಣವಿದ್ದು, ಶೈಕ್ಷಣಿಕವಾಗಿ ಅರ್ಹ, ಸ್ಪರ್ಧಾತ್ಮಕ ಹಾಗೂ ಬದ್ಧತೆ ಹೊಂದಿರುವ ಬೋಧಕವರ್ಗವಿದೆ. ಬೋಧನೆ-ಕಲಿಕೆಯಲ್ಲಿ ಹಲವು ಹೊಸ ರೂಢಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಬೆಳೆಯಲು ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳ ಯೋಚನೆಯನ್ನು ಉದ್ದೀಪಿಸುವಂತಹ ಹಲವು ಕ್ಲಬ್‌ಗಳು ರಚನೆಯಾಗಿದ್ದು, ಇವುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಜತೆಗೆ ಇಂಥ ಕ್ಲಬ್ ರೂಪಿಸಲು ಹಾಗೂ ನಿರ್ವಹಿಸಲು ನೆರವಾಗುತ್ತವೆ.

►ಲಭ್ಯವಿರುವ ಕೋರ್ಸ್‌ಗಳು

 ಬಿಇ ಪದವಿ: ಬಯೋಟೆಕ್ನಾಲಜಿ, ಸಿವಿಲ್, ಕಂಪ್ಯೂಟರ್ ಸಾಯನ್ಸ್, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್, ಇನ್ಫಾರ್ಮೇಷನ್ ಸಾಯನ್ಸ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್.

►ಸ್ನಾತಕೋತ್ತರ ಕೋರ್ಸ್‌ಗಳು

ಕನ್ಸ್ಟ್ರಕ್ಷನ್ ಟೆಕ್ನಾಲಜಿ , ಸ್ಟ್ರಕ್ಚರಲ್  ಇಂಜಿನಿಯರಿಂಗ್, ಎನರ್ಜಿ ಸಿಸ್ಟಮ್ ಇಂಜಿನಿಯರಿಂಗ್, ಮೆಷಿನ್ ಡಿಸೈನ್, ಡಿಜಿಟಲ್ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ವಿಎಲ್‌ಎಸ್‌ಐ ಡಿಸೈನ್ ಆ್ಯಂಡ್ ಎಂಬೆಡೆಡ್ ಸಿಸ್ಟಮ್ಸ್, ಕಂಪ್ಯೂಟರ್ ಸಾಯನ್ಸ್ ಆ್ಯಂಡ್ ಎಂಜಿನಿಯರಿಂಗ್, ಕಂಪ್ಯೂಟರ್ ನೆಟ್‌ವರ್ಕಿಂಗ್, ಸಾಫ್ಟ್‌ವೇರ್ ಇಂಜಿನಿಯರಿಂಗ್, ಇಂಡಸ್ಟ್ರಿಯಲ್ ಬಯೋ ಟೆಕ್ನಾಲಜಿ, ಪವರ್ ಎಲೆಕ್ಟ್ರಾನಿಕ್ಸ್.

ಎಂಸಿಎ, ಎಂಬಿಎ, ಪಿಎಚ್‌ಡಿ

►ಪ್ರತಿಭಾನ್ವಿತರಿಗೆ ಶುಲ್ಕ ರಿಯಾಯಿತಿ

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಸರಾಸರಿ 85 ಶೇ. ಅಂಕಗಳನ್ನು ಗಳಿಸಿ ಬಿಇ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇಕಡ 25 ರಿಯಾಯಿತಿ ಇರುತ್ತದೆ. ಅಧ್ಯಯನದ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ಉತ್ತಮ ಶಿಸ್ತು ಮತ್ತು ಶೈಕ್ಷಣಿಕ ಸಾಧನೆ (ಸೆಮಿಸ್ಟರ್/ವಾರ್ಷಿಕ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ಉತ್ತೀರ್ಣರಾದರೆ) ತೋರಿದರೆ ಈ ಸೌಲಭ್ಯ ಮುಂದುವರಿಯಲಿದೆ. ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಇಂಜಿನಿಯರಿಂಗ್ ಶಾಖೆಯ ಅರ್ಹ ವಿದ್ಯಾರ್ಥಿಗಳಿಗೆ ಕಾಮೆಡ್ ಕೆ ಶುಲ್ಕಕ್ಕಿಂತ 40 ಸಾವಿರ ರೂ. ಕಡಿಮೆ ಶುಲ್ಕ ವಿಧಿಸಲಾಗುತ್ತದೆ.

ಶುಲ್ಕ ವಿನಾಯಿತಿಯ ವಿವರ:

►ಕಂಪ್ಯೂಟರ್ ಸಾಯನ್ಸ್ / ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್/ಮೆಕ್ಯಾನಿಕಲ್/ ಇನ್ಫಾರ್ಮೇಷನ್ ಸಾಯನ್ಸ್

ಸಾಮಾನ್ಯ ಶುಲ್ಕ : ವಾರ್ಷಿಕ 2.83 ಲಕ್ಷ ರೂ. ಪಿಸಿಎಂನಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ: ವಾರ್ಷಿಕ 2.13 ಲಕ್ಷ ರೂ.

►ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್/ ಸಿವಿಲ್

ಸಾಮಾನ್ಯ ಶುಲ್ಕ: ವಾರ್ಷಿಕ 1.93 ಲಕ್ಷ ರೂ.

ಪಿಸಿಎಂನಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ: ವಾರ್ಷಿಕ 1.53 ಲಕ್ಷ ರೂ.

►ಬಯೋ ಟೆಕ್ನಾಲಜಿ

ಸಾಮಾನ್ಯ ಶುಲ್ಕ: ವಾರ್ಷಿಕ 1.03 ಲಕ್ಷ ರೂ.

ಪಿಸಿಎಂನಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ: ವಾರ್ಷಿಕ 0.78 ಲಕ್ಷ ರೂ.

 ►ಪ್ಲೇಸ್‌ಮೆಂಟ್  

ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಎನ್‌ಎಂಎಎಂಐಟಿ ಸಕ್ರಿಯವಾಗಿದೆ. ಸಂಸ್ಥೆಯಲ್ಲಿ ಸುಸಂಘಟಿತ ಪ್ಲೇಸ್‌ಮೆಂಟ್   ವಿಭಾಗವಿದ್ದು, ಇದು ಆಕರ್ಷಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಈ ವಿಭಾಗವು ವಿದ್ಯಾರ್ಥಿಗಳು ತಾಂತ್ರಿಕವಾಗಿ ಸ್ಪರ್ಧಾತ್ಮಕ, ಸಾಮಾಜಿಕ ಹಾಗೂ ಪರಿಸರಾತ್ಮಕವಾಗಿ ಪ್ರಜ್ಞಾವಂತ, ನೈತಿಕವಾಗಿ ಉನ್ನತ ದರ್ಜೆಯ ಹಾಗೂ ಉದ್ಯೋಗಕ್ಕೆ ಅರ್ಹರಾಗುವಂತೆ ಖ್ಯಾತರನ್ನಾಗಿ ಹಾಗೂ ಜಾಗತಿಕ ನಾಗರಿಕರಾಗಿ ಅವರನ್ನು ರೂಪುಗೊಳಿಸುತ್ತದೆ. ಅರ್ಹತೆ ಪಡೆದ ಹಾಗೂ ಅನುಭವಿ ಮಾನಸಿಕ ಆರೋಗ್ಯ ವೃತ್ತಿಪರರು ಈ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರ ಜತೆಗೆ ಪೂರ್ಣಾವಧಿ ಪ್ಲೇಸ್‌ಮೆಂಟ್ ಎಕ್ಸಿಕ್ಯೂಟಿವ್, ವಿಭಾಗವಾರು ಬೋಧನಾ ಸಂಯೋಜಕರು, ವಿದ್ಯಾರ್ಥಿ ಕಾರ್ಯಕರ್ತರು ಹಾಗೂ ನುರಿತ ಮತ್ತು ಬದ್ಧತೆ ಹೊಂದಿದ ಸಿಬ್ಬಂದಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಸದಾ ಶ್ರಮಿಸುತ್ತಾರೆ.

►ಆಟೋಟಗಳು

ಸಂಸ್ಥೆಯು ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣವನ್ನು ಕ್ಯಾಂಪಸ್‌ನಲ್ಲಿ ಸ್ಥಾಪಿಸಿದೆ. ಇಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳಿದ್ದು, 14 ಸಾವಿರ ಚದರ ಅಡಿಯ ಒಳಾಂಗಣ ಕ್ರೀಡಾಂಗಣವೂ ಇದೆ. ಇದರಲ್ಲಿ 3 ಬ್ಯಾಡ್ಮಿಂಟನ್ ಕೋರ್ಟ್‌ಗಳು, ಒಂದು ಬಾಸ್ಕೆಟ್‌ಬಾಲ್ ಕೋರ್ಟ್, ಟೇಬಲ್ ಟೆನಿಸ್ ಹಾಗೂ ಇತರ ಒಳಾಂಗಣ ಆಟಗಳಾದ ಕೇರಂ, ಚೆಸ್, ಅತ್ಯಾಧುನಿಕ ಜಿಮ್, ವೆಯ್ಟ್ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್‌ಗೆ ವೈಯಕ್ತಿಕ ದೈಹಿಕ ವ್ಯಾಯಾಮ ಕೇಂದ್ರಗಳು ಹಾಗೂ ಅಥ್ಲೀಟ್‌ಗಳಿಗೆ ಪ್ರತ್ಯೇಕ ಫಿಟ್ನೆಸ್ ಕೇಂದ್ರಗಳಿವೆ.

ಲಭ್ಯವಿರುವ ಹೊರಾಂಗಣ ಸೌಲಭ್ಯಗಳು ಇಂತಿವೆ :

► 400 ಮೀಟರ್‌ಗಳ ನಿಗದಿತ ಅಥ್ಲೆಟಿಕ್ ಟರ್ಪ್ ಟ್ರಾಕ್ ಮತ್ತು ಎಲ್ಲ ಬಗೆಯ ಎಸೆತಕ್ಕೆ ಸೌಲಭ್ಯ, ಪೆವಿಲಿಯನ್ ಮತ್ತು ಫಿಟ್‌ನೆಸ್ ಕೇಂದ್ರ.

► ಒಂದು ಕ್ರಿಕೆಟ್ ಫೀಲ್ಡ್ ಹಾಗೂ ಅಭ್ಯಾಸಕ್ಕಾಗಿ 3 ಸಿಮೆಂಟ್ ಮತ್ತು ಆವೆಮಣ್ಣಿನ ಕ್ರಿಕೆಟ್ ಪಿಚ್.

► ಒಂದು ಹಾಕಿ ಮೈದಾನ

► ಮೂರು ವಾಲಿಬಾಲ್ ಹಾಗೂ ಥ್ರೋಬಾಲ್ ಕೋರ್ಟ್‌ಗಳು

► ಒಂದು ಹ್ಯಾಂಡ್‌ಬಾಲ್ ಕೋರ್ಟ್

► ಎರಡು ಬಾಸ್ಕೆಟ್‌ಬಾಲ್ ಕೋರ್ಟ್‌ಗಳು

► ಫುಟ್ಬಾಲ್ ಮೈದಾನ

► ಕಬಡ್ಡಿ ಕೋರ್ಟ್, ಖೊ ಖೋ ಕೋರ್ಟ್, ನೆಟ್‌ಬಾಲ್ ಕೋರ್ಟ್.

►ಗ್ರಂಥಾಲಯ

 ಸಂಸ್ಥೆಯ ಕೇಂದ್ರ ಗ್ರಂಥಾಲಯದಲ್ಲಿ 77 ಸಾವಿರ ಪುಸ್ತಕಗಳಿದ್ದು, ವಿದೇಶಿ ಹಾಗೂ ಭಾರತೀಯ ನಿಯತಕಾಲಿಕಗಳು ಸೇರಿ 287 ಸಾಮಾನ್ಯ ಹಾಗೂ ತಾಂತ್ರಿಕ ನಿಯತಕಾಲಿಕಗಳನ್ನು ಖರೀದಿಸಲಾಗುತ್ತಿದೆ. ಸಿಡಿ- ರ‍್ಯಾಮ್ ಸ್ಟೇಷನ್ ಮೂಲಕ ಡಿಜಿಟಲ್ ಸೇವೆಗಳನ್ನೂ ಒದಗಿಸಲಾಗುತ್ತಿದೆ. ಗ್ರಂಥಾಲಯವು ಡಿಜಿಟಲ್ ಗ್ರಂಥಾಲಯ ಸೇವೆಗಳನ್ನೂ ಒದಗಿಸುತ್ತಿದ್ದು, ದೊಡ್ಡ ಸಂಖ್ಯೆಯ ಇ- ಜರ್ನಲ್‌ಗಳನ್ನು ಐಎನ್‌ಡಿಇಎಸ್‌ಟಿ ಹಾಗೂ ಡಿಇಎಲ್‌ಎನ್‌ಇಇಟಿ ಮೂಲಕ ಖರೀದಿಸಲಾಗುತ್ತದೆ. ವಿಟಿಯು ಸಮೂಹದ ಹಲವು ಆನ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆ.

►ಸೌಲಭ್ಯ್ಯಗಳು

 ವೈಪೈ ಕ್ಯಾಂಪಸ್: ಎಲ್ಲ ವಿಭಾಗಗಳು ಮತ್ತು ವಿದ್ಯಾರ್ಥಿ ನಿಲಯವು 300 ಎಂಬಿಪಿಎಸ್ ಲೀಸ್ಡ್ ಲೈನ್ ಇಂಟರ್‌ನೆಟ್ ಸಂಪರ್ಕ ಮೂಲಕ ಜೋಡಿಸಲ್ಪಟ್ಟಿವೆ.

 ಹಾಸ್ಟೆಲ್‌ಗಳು: ಐದು ವಿದ್ಯಾರ್ಥಿ ನಿಲಯಗಳು ಹಾಗೂ ಎರಡು ವಿದ್ಯಾರ್ಥಿನಿ ನಿಲಯಗಳಿದ್ದು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಇದೆ. ಎಲ್ಲ ಹಾಸ್ಟೆಲ್‌ಗಳಲ್ಲೂ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಮೆಸ್‌ಗಳಿವೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಸಂಸ್ಥೆಯು 21 ಸುಸಜ್ಜಿತ ಕೊಠಡಿಗಳಿರುವ ಅತಿಥಿಗೃಹವನ್ನೂ ಹೊಂದಿದೆ.

 ಆರೋಗ್ಯ ಸೇವೆ: ಎಲ್ಲ ವಿದ್ಯಾರ್ಥಿಗಳಿಗೆ ಮೆಡಿಕೇರ್ ಯೋಜನೆಯ ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಅನ್ವಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೌಲಭ್ಯ ದೊರೆಯಲಿದೆ. ಕ್ಯಾಂಪಸ್ ಕ್ಲಿನಿಕ್‌ನಲ್ಲಿ ಪೂರ್ಣಾವಧಿ ವೈದ್ಯರು ಮತ್ತು ಆ್ಯಂಬುಲೆನ್ಸ್ ಸೇವೆ ದಿನದ 24 ಗಂಟೆಯೂ ಲಭ್ಯ.

 ಸಲಹಾ ಸೇವೆ ಮತ್ತು ವಿದ್ಯಾರ್ಥಿ ಕಲ್ಯಾಣ: ಹೊಸದಾಗಿ ಸೇರುವ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ, ನಾಯಕತ್ವ ತರಬೇತಿ, ಸಾರ್ವಜನಿಕ ಭಾಷಣ, ಪರಿಣಾಮಕಾರಿ ಸಂವಹನ, ಸಂದರ್ಶನ ಎದುರಿಸುವುದು ಮತ್ತಿತರ ತರಬೇತಿಯನ್ನು ನಿಯತವಾಗಿ ನೀಡಲಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅಂತಹವರಿಗೆ ಬೋಧಕರು ಹೆಚ್ಚುವರಿ ಮಾಹಿತಿ ನೀಡುತ್ತಾರೆ.

 ಸಾರಿಗೆ: ಕಾಲೇಜಿನಲ್ಲಿ 32 ಬಸ್ಸುಗಳಿದ್ದು, ಕಾರ್ಕಳ, ಮಂಗಳೂರು, ಉಡುಪಿ, ಕುಂದಾಪುರ, ಬಂಟ್ವಾಳ ಹಾಗೂ ಬೆಳ್ತಂಗಡಿಯಿಂದ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಸಾರಿಗೆ ಸೇವೆ ಒದಗಿಸಲಾಗುತ್ತಿದೆ.

 ಫುಡ್ ಕೋರ್ಟ್: ಕ್ಯಾಂಪಸ್‌ನಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರಕ್ಕೆ ವ್ಯವಸ್ಥೆ ಇದೆ.

 ಸಭಾಗೃಹ: 5000 ಮಂದಿಗೆ ಆಸನ ವ್ಯವಸ್ಥೆ ಇರುವ ತೆರೆದ ಸಭಾಗೃಹವಿದೆ. ಅಂತೆಯೇ ನಾಲ್ಕು ಸಂಪೂರ್ಣ ಹವಾನಿಯಂತ್ರಿತ ಸಭಾಗೃಹಗಳು/ ಸೆಮಿನಾರ್ ಹಾಲ್‌ಗಳಿವೆ.

►ಸಂಶೋಧನೆ ಮತ್ತು ಅಭಿವೃದ್ಧಿ

ಸಂಸ್ಥೆಯಲ್ಲಿ ಸಂಶೋಧನಾ ಸಲಹಾ ಸಮಿತಿ ಇದ್ದು, ಇದರ ಕಲಾಪಗಳನ್ನು ನಿರ್ದೇಶಕರು ಹಾಗೂ ಒಬ್ಬರು ಡೀನ್ ನಿರ್ವಹಿಸುತ್ತಾರೆ. ಕಳೆದ ಐದು ವರ್ಷಗಳಲ್ಲಿ, 4 ಕೋಟಿ ರೂಪಾಯಿ ವೌಲ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜೈವಿಕ ಡೀಸೆಲ್ ಸಂಶೋಧನೆ, ಮೈಕ್ರೊ ಮೆಷಿನಿಂಗ್ ಹಾಗೂ ಎನರ್ಜಿ, ವಾಟರ್ ಆ್ಯಂಡ್ ಎನ್ವಿರಾನ್‌ಮೆಂಟ್ ಸೆಕ್ಸಸ್‌ನಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ವಿವಿಧ ವಿಭಾಗಗಳಲ್ಲಿ 65 ಮಂದಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಸಂಸ್ಥೆಯ ಕ್ಯಾಂಪಸ್‌ನಲ್ಲಿ ಹೆಸ್ಸ್‌ಮೋಟೊ ಕಂಟ್ರೊಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಸ್ಥಾಪನೆಯಾಗಿದೆ. ಈ ಕೇಂದ್ರಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

►ಇಡಿಸಿ:

 ಭಾರತ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಎನ್‌ಎಂಎಎಂಐಟಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಕೋಶವನ್ನು 2004ರಲ್ಲಿ ಆರಂಭಿಸಿದೆ. ಈ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಹೊಸ ವ್ಯಾಪಾರ/ ಸಣ್ಣ ಕೈಗಾರಿಕೆ, ಸೂಕ್ಷ್ಮ ಉದ್ಯಮ ಅಭಿವೃದ್ಧಿ ಉತ್ತೇಜನಕ್ಕೆ ತರಬೇತಿ ನೀಡಿಕೆ, ಇಡಿಸಿ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಕೋಶವು ಸಕಲ ಪ್ರಯತ್ನಗಳನ್ನು ನಡೆಸುತ್ತಿದೆ. ನಿಟ್ಟೆಯ ಹಾಗೂ ಸುತ್ತಮುತ್ತಲಿನ ಸಂಸ್ಥೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಉದ್ಯಮಶೀಲ ಸಂಸ್ಕೃತಿಯನ್ನು ಸೃಷ್ಟಿಸಲು ಕೂಡಾ ಪ್ರಯತ್ನ ನಡೆಸುತ್ತಿದೆ. ವಿದ್ಯಾರ್ಥಿಗಳು ತಮ್ಮದೇ ಉದ್ಯಮವನ್ನು ಆರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ ಹಾಗೂ ಇದಕ್ಕೆ ಅಗತ್ಯವಾದ ಎಲ್ಲ ನೆರವು ಹಾಗೂ ಮಾರ್ಗದರ್ಶನವನ್ನು ಇಡಿಸಿ ಮೂಲಕ ನೀಡಲಾಗುತ್ತಿದೆ. ಸಮುದಾಯದ ಪ್ರಯೋಜನಕ್ಕಾಗಿ ತಂತ್ರಜ್ಞಾನ ವರ್ಗಾವಣೆಯನ್ನು ಸಂಸ್ಥೆ ಪ್ರೋತ್ಸಾಹಿಸುತ್ತಾ ಬಂದಿದೆ. ಇನ್ ಕ್ಯುಬೇಶನ್ ಸೆಂಟರ್ ಆರಂಭಿಸುವ ಮೂಲಕ, ಸಂಸ್ಥೆಯು ಉದ್ಯಮ ಆರಂಭಿಸಲು ಅಗತ್ಯ ಮಾಹಿತಿ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ.

ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದ ಸಹಯೋಗದಲ್ಲಿ ಎನ್‌ಎಂಎಎಂಐಟಿ ವೃತ್ತಿ ತರಬೇತಿ ಕೇಂದ್ರವನ್ನೂ ಆರಂಭಿಸಿದೆ. ಇದು ಅನಕ್ಷರಸ್ಥ ಯುವಜನರಿಗೆ ಅಗತ್ಯ ತರಬೇತಿಯನ್ನು ನೀಡುವ ಮೂಲಕ ಅವರಿಗೆ ಉದ್ಯೋಗಾವಕಾಶಕ್ಕೆ ಅನುವು ಮಾಡಿಕೊಡುತ್ತದೆ.

ಕರ್ನಾಟಕ ಬಯೋ ಟೆಕ್ನಾಲಜಿ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಸರ್ವೀಸಸ್ (ಕೆಬಿಐಟಿಎಸ್) ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಡಿ ಇದನ್ನು ರೂಪಿಸಲಾಗಿದೆ. ಈ ಸಂಸ್ಥೆಯು ಎನ್‌ಎಂಎಎಂಐಟಿಯನ್ನು ಕರ್ನಾಟಕ ನ್ಯೂ ಏಜ್ ಇನ್ ಕ್ಯುಬೇಶನ್ ನೆಟ್‌ವರ್ಕ್‌ಗೆ ಆಯ್ಕೆ ಮಾಡಿದೆ. ರಾಜ್ಯದಲ್ಲಿ ಒಂಬತ್ತು ಕಾಲೇಜುಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.

►ಒಪ್ಪಂದಗಳು

ಎನ್‌ಎಂಎಎಂಐಟಿ ಸಂಸ್ಥೆಯು ಸಂಶೋಧನೆ ಮತ್ತು ಯೋಜನೆಗಳಿಗಾಗಿ ಅಮೆರಿಕದ ಹ್ಯಾರಿಸ್‌ಬರ್ಗ್‌ನಲ್ಲಿರುವ ಪೆನ್ ಸ್ಟೇಟ್ ಯೂನಿವರ್ಸಿಟಿ ಹಾಗೂ ಜಪಾನ್‌ನ ರಿತ್ಸುಮೀಕನ್ ಯೂನಿವರ್ಸಿಟಿ ಜತೆ ಬೋಧಕರು ಮತ್ತು ವಿದ್ಯಾರ್ಥಿಗಳ ವಿನಿಮಯಕ್ಕೆ ಒಪ್ಪಂದ ಮಾಡಿಕೊಂಡಿದೆ.

(ತೆರೆದ ಸಭಾಗೃಹ)

(ಹವಾನಿಯಂತ್ರಿತ ಸಭಾಗೃಹ)

(ಕ್ರೀಡಾ ಸಂಕೀರ್ಣ)

(ಜಿಮ್ನೇಶಿಯಂ)

(ಒಳಾಂಗಣ ಕ್ರೀಡಾಂಗಣ)

(ಆಲ್ ಟೆರೈನ್ ವಾಹನ)

(ಪ್ರಾಜೆಕ್ಟ್ ಪ್ರದರ್ಶನ)

(ಅತಿಥಿಗೃಹ)

                                             

‘‘ಈ ಕ್ರೀಡಾ ಸಂಕೀರ್ಣದಲ್ಲಿರುವ ಸೌಲಭ್ಯಗಳು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮನಾಗಿವೆ. ಈ ವಿಶ್ವದರ್ಜೆಯ ಕ್ರೀಡಾ ಸೌಲಭ್ಯಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಮರ್ಥವಾದ ಉನ್ನತ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವಲ್ಲಿ ನೆರವಾಗಲಿವೆ. ಪ್ರತಿಭೆಗಳಿಗೆ ಸೂಕ್ತವಾದ ಮೂಲಸೌಕರ್ಯ ಒದಗಿಸಿದಾಗ ಮಾತ್ರ ಅದ್ಭುತಗಳನ್ನು ಸಾಧಿಸಲು ಸಾಧ್ಯ. ಆಟಗಳನ್ನು ಆಡಲು ವಯಸ್ಸಿನ ನಿರ್ಬಂಧ ಇಲ್ಲ’’

-ಜಾವಗಲ್ ಶ್ರೀನಾಥ್

ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ- 574110

( ಬೆಳಗಾವಿ ವಿಟಿಯು ಅಡಿಯ ಸ್ವಾಯತ್ತ ಸಂಸ್ಥೆ )

ಕಾರ್ಕಳ, ಉಡುಪಿ ಜಿಲ್ಲೆ, ಕರ್ನಾಟಕ

Website: www.nitte.edu.in 

ಪ್ರಾಯೋಜಿತ ಲೇಖನ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News