​ಕಾಂಗ್ರೆಸ್ ನ ಮುಖವಾಣಿ ನ್ಯಾಶನಲ್‌ ಹೆರಾಲ್ಡ್ ಪುನರಾರಂಭ

Update: 2017-06-12 10:28 GMT

ಬೆಂಗಳೂರು, ಜೂ.12: ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆ  ಬೆಂಗಳೂರಿನಲ್ಲಿ ಇಂದು ಅಧಿಕೃತವಾಗಿ ಪುನರಾರಂಭಗೊಂಡಿದೆ.  

ಇಲ್ಲಿನ ಮಿಲ್ಲರ್ ರೋಡ್‌ನ‌ಲ್ಲಿರುವ ಅಂಬೇಡ್ಕರ ಭವನದಲ್ಲಿ, ಕಾಂಗ್ರೆಸ್‌ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ಸಮಕ್ಷಮದಲ್ಲಿ, ಉಪ ರಾಷ್ಟ್ರಪತಿ ಹಾಮಿದ್‌ ಅನ್ಸಾರಿ ಅವರು ದೇಶದ 70ನೇ ಸ್ವಾತಂತ್ರ್ಯ ವರ್ಷದ ಅಂಗವಾಗಿ  ನ್ಯಾಶನಲ್‌ ಹೆರಾಲ್ಡ್  ವಿಶೇಷ ಸಂಚಿಕೆಯನ್ನು  ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು" ಕೇಂದ್ರದ ಬಿಜೆಪಿ ಸರಕಾರ ಪ್ರತಿಯೊಬ್ಬರ ಬಾಯಿ ಮುಚ್ಚಿಸಿದೆ. ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರು ಭಯಭೀತರಾಗಿದ್ದಾರೆ, ಪತ್ರಕರ್ತರು ಮತ್ತು ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ದೇಶದ ಪ್ರಸ್ತುತ ವಾತಾವರಣದ ಬಗ್ಗೆ ವಸ್ತುಸ್ಥಿತಿಯನ್ನು ಬರೆಯಲು ಪ್ರಕರ್ತರಿಗೆ ಅವಕಾಶ ಇಲ್ಲದಾಗಿದೆ ” ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟರು.
"ನ್ಯಾಶನಲ್ ಹೆರಾಲ್ಡ್‌ ಪತ್ರಿಕೆಯು ಯಾರಿಗೂ ಹೆದರದು. ಸತ್ಯವನ್ನು ಜನರ ಮುಂದಿಡಲಿದೆ ” ಎಂದು ರಾಹುಲ್‌ ಗಾಂಧಿ ನಡುಡಿದರು.

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ಮಾತನಾಡಿ "ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಎಲ್ಲರ ದನಿಯಾಗಲಿದೆ. ಸ್ವಾತಂತ್ರ್ಯ, ಸಮಾನತೆ ಪತ್ರಿಕೆಯ ನೀತಿಯಾಗಿದ್ದು, ಇದು ಯಾವತ್ತೂ ಚಾಂಪಿಯನ್. "ಎಂದರು.

ರಾಜ್ಯಪಾಲ ವಜುಭಾಯಿ ವಾಲಾ  ಉಪಸ್ಥಿತಿದ್ದರು.
ನ್ಯಾಶನಲ್‌ಹೆರಾಲ್ಡ್‌ಪತ್ರಿಕೆಯ ಮುದ್ರಣ ಆವೃತ್ತಿಯನ್ನು 1938ರ ಸೆಪ್ಟಂಬರ್‌9ರಂದು ಲಕ್ನೋದಿಂದ ಆರಂಭಿಸಲಾಗಿತ್ತು. ಆಗ ಪಂಡಿತ್‌ಜವಾಹರ್‌ಲಾಲ್‌ನೆಹರೂ ಅವರೇ ಪತ್ರಿಕೆಯ ಸಂಪಾದಕರಾಗಿದ್ದರು. ಆದರೆ ಹಣಕಾಸು ತೊಂದರೆಗಳಿಂದಾಗಿ ಪತ್ರಿಕೆಯ ಮುದ್ರಣವನ್ನು 2008ರಲ್ಲಿ ನಿಲ್ಲಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News