ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾರಾಯಣ ರೆಡ್ಡಿ ನಿಧನ

Update: 2017-06-12 12:37 GMT

ಹೈದರಾಬಾದ್, ಜೂ. 12: ತೆಲುಗು ಕವಿ ಗೀತೆ ರಚನೆಕಾರ ಡಾ.ಸಿ. ನಾರಾಯಣ ರೆಡ್ಡಿ ನಿಧನರಾಗಿದ್ದಾರೆ. ತೆಲುಗು ಸಾಹಿತ್ಯ ಕ್ಷೇತ್ರದಲ್ಲಿ ಇವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರಿಗೆ 1988ರಲ್ಲಿ ಸಾಹಿತ್ಯಕ್ಷೇತ್ರದ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತ್ತು. ಕವಿ ಮಾತ್ರವಲ್ಲದೆ ಇವರು ಶಿಕ್ಷಣ ತಜ್ಞ ಕೂಡಾ ಆಗಿದ್ದರು. 1977ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

 ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯಲ್ಲಿ ನಾರಾಯಣ ರೆಡ್ಡಿ ಜನಿಸಿದ್ದರು. ಅವರ ಮೊದಲ ಕವನ ಸಂಕಲನ  ನುವ್ವನಿಪಾವು 1953ರಲ್ಲಿ ಹೊರಬಂತು. 1980ರಲ್ಲಿ ಅವರ ಪ್ರಮುಖ ಕವನ ಸಂಕಲನ ಸಮಾಹಾರವಾದ ವಿಶ್ವಂಭರ ಪ್ರಕಟವಾಯಿತು. ಈ ಕೃತಿಗೆ ಜ್ಞಾನಪೀಠ ಪುರಸ್ಕಾರ ಲಭಿಸಿತ್ತು.

1962ರಲ್ಲಿ ರೆಡ್ಡಿ ಸಿನೆಮಾರಂಗ ಪ್ರವೇಶಿಸಿದ್ದರು. ಇವರು ಸುಮಾರು ಮೂರು ಸಾವಿರದಷ್ಟು ಗೀತೆಗಳನ್ನು ರಚಿಸಿದ್ದು, ಚಿತ್ರಕತೆಗಳನ್ನು ಕೂಡಾ ರಚಿಸಿದ್ದಾರೆ. 1997ರಲ್ಲಿ ರಾಜ್ಯಸಭೆಗೆ ನೇಮಕವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News