ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರುಗಳ ನೇಮಕ

Update: 2017-06-14 09:37 GMT

ಮಡಿಕೇರಿ ಜೂ.14: ಕುಶಾಲನಗರ ಮಹಿಳಾ ಕಾಂಗ್ರೆಸ್‌ನ ನಗರಾಧ್ಯಕ್ಷರಾಗಿ ಪಾರ್ವತಿ, ಗುಡ್ಡೆಹೊಸೂರು ವಲಯಾಧ್ಯಕ್ಷರಾಗಿ ಡಿ.ಎಂ.ಲೀಲಾವತಿ ಹಾಗೂ ಮುಳ್ಳುಸೋಗೆ ವಲಯಾಧ್ಯಕ್ಷರಾಗಿ ಜ್ಯೋತಿ ನಾಗರಾಜ್ ಆಯ್ಕೆಯಾಗಿದ್ದಾರೆ.

ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಜಿ.ಆರ್.ಪುಷ್ಪಲತಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.

ಸೋಮವಾರಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಂಜಳಾ ಹರೀಶ್, ಗುಡ್ಡೆಹೊಸೂರು ಪಂಚಾಯಿತಿ ಅಧ್ಯಕ್ಷರಾದ ಭಾರತಿ, ಮುಳ್ಳುಸೋಗೆ ಪಂಚಾಯಿತಿ ಸದಸ್ಯರಾದ ರಾಧ, ಸುಬೇದ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ಲೋಕೇಶ್, ತಾ.ಪಂ ಸದಸ್ಯರಾದ ಸತೀಶ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್, ಕುಶಾಲನಗರ ಅಧ್ಯಕ್ಷರಾದ ವಿಕ್ಟರ್ ಸೋನ್ಸ್, ಪ.ಪಂ ಸದಸ್ಯರಾದ ಪ್ರಮೋದ್, ಪ್ರಮುಖರಾದ ಚಂದ್ರಶೇಖರ್, ಭೀಮಯ್ಯ, ಶಿವಶಂಕರ್, ಜಯಪ್ರಕಾಶ್, ಗೀತಾಧರ್ಮಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News