ಗುಜರಾತ್: ನೌಕರಿ ಬಿಡಲೊಪ್ಪದ ದಲಿತ ಮಹಿಳೆಗೆ ನಿರ್ದಯವಾಗಿ ಥಳಿಸಿದ ದುಷ್ಕರ್ಮಿಗಳು

Update: 2017-06-17 06:05 GMT

ಗುಜರಾತ್, ಜೂ.17: ಸರಕಾರಿ ಶಾಲೆಯಲ್ಲಿ ಅಡುಗೆ ನೌಕರಿಯನ್ನು ಬಿಡಲೊಪ್ಪದ ದಲಿತ ಮಹಿಳೆ ಹಾಗೂ ಆಕೆಯ ಕಿರಿಯ ಪುತ್ರನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲೇ ಮಹಿಳೆಗೆ ಥಳಿಸಲಾಗಿದ್ದು, ಘಟನೆಯ ವಿಡಿಯೋ ವೈರಲ್ ಆದ ನಂತರ ಶಾಲೆಯ ಪ್ರಾಂಶುಪಾಲರು ಹಾಗೂ ಗ್ರಾಮದ ಉಪ ಸರಪಂಚ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಲಿತ ಮಹಿಳೆ ಪ್ರಭಾ ವಾಲರ ಮೇಲೆರಗಿದ ದುಷ್ಕರ್ಮಿಗಳ ಗುಂಪು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ, ಆಕೆಯ ಮಗನನ್ನು ಎಸೆಯುವ ದೃಶ್ಯಗಳೂ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ದಲಿತ ನಾಯಕ ಜಿಗ್ನೇಶ್ ಮೆವಾನಿ, ಉನಾ ಘಟನೆ ನಡೆದು ಒಂದು ವರ್ಷ ಮುಗಿದಿಲ್ಲ. ಅದಾಗಲೇ ಗುಜರಾತ್ ನಲ್ಲಿ ಈ ಘಟನೆ ನಡೆದಿದೆ” ಎಂದಿದ್ದಾರೆ.

ಪ್ರಭಾ ದಲಿತ ಮಹಿಳೆ ಎನ್ನುವ ಕಾರಣಕ್ಕಾಗಿ ಅಡುಗೆ ನೌಕರಿಯನ್ನು ಬಿಡಬೇಕು ಎಂದು ಒತ್ತಾಯಿಸಲಾಗುತ್ತಿತ್ತು. ಊಟ ವಿತರಣೆಯಲ್ಲಿ ದಲಿತರು ಪಾಲ್ಗೊಳ್ಳುವುದು ಸರಿಯಲ್ಲ ಎಂದು ಶಾಲೆಯ ಪ್ರಾಂಶುಪಾಲರು ಹೇಳಿದ್ದರು. ಆದರೆ ಪ್ರಭಾ ಕೆಲಸ ಬಿಡಲು ಒಪ್ಪಿರಲಿಲ್ಲ. ಇದೇ ಕಾರಣಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರಭಾ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News