ಭವಿಷ್ಯದ ಇಂಜಿನಿಯರ್‌ಗಳ ಆದ್ಯತೆಯ ಶಿಕ್ಷಣ ಸಂಸ್ಥೆ - ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (BIT)

Update: 2017-06-17 12:36 GMT

ಪ್ರತಿಷ್ಠಿತ ಬ್ಯಾರೀಸ್ ಗ್ರೂಪ್ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ 111 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ.

ಬ್ಯಾರೀಸ್ ಸಮೂಹದ ಹೆಮ್ಮೆಯ ಶಿಕ್ಷಣ ಸಂಸ್ಥೆಗಳಾದ ಮಂಗಳೂರಿನ ಇನೋಳಿಯಲ್ಲಿರುವ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ಹಾಗು ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS) ಗುಣಮಟ್ಟದ ತಾಂತ್ರಿಕ ಶಿಕ್ಷಣ ಹಾಗು ಸಂಶೋಧನೆಗೆ ದೇಶದಲ್ಲೇ ಹೆಸರುವಾಸಿಯಾಗಿವೆ.

ಬ್ಯಾರೀಸ್ ಅಕಾಡೆಮಿ ಆಫ್ಲರ್ನಿಂಗ್ ಅಧೀನದಲ್ಲಿ ಪ್ರಾರಂಭವಾದ ಬಿಐಟಿ, ಹಸಿರು ಆವರಿಸಿರುವ ರಮ್ಯ, ಆಹ್ಲಾದಕರ ಪರಿಸರ, ಅನುಭವೀ ಬೋಧಕರು, ಜಾಗತಿಕ ಗುಣಮಟ್ಟದ ತಾಂತ್ರಿಕ ಶಿಕ್ಷಣ, ಅತ್ಯುತ್ತಮ ಸೌಲಭ್ಯಗಳು, ಸಂಶೋಧನೆಗೆ ವಿಪುಲ  ಅವಕಾಶ, ಅತ್ಯುತ್ತಮ ಫಲಿತಾಂಶ ಹಾಗು ಪ್ಲೇಸ್‌ಮೆಂಟ್ ಸಾಧನೆಗಳು - ಇವೆಲ್ಲವೂ ಒಂದೇ ಕಡೆ ಸಿಗುವ ಅನನ್ಯ ಇಂಜಿನಿ ಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನುರಿತ ಬೋಧಕ ವೃಂದ : ರಾಜಿಯಿಲ್ಲದ ಇಂಜಿನಿಯರಿಂಗ್ ಶಿಕ್ಷಣ ನೀಡಲು ಅತ್ಯುತ್ತಮ ಶಿಕ್ಷಕ ಸಿಬ್ಬಂದಿ ಅತ್ಯಗತ್ಯ. ಅದಕ್ಕಾಗಿಯೇ ಬಿಐಟಿ ಪ್ರತಿಯೊಂದು ವಿಭಾಗಕ್ಕೂ ಅತ್ಯಂತ ನುರಿತ, ಅನುಭವೀ ಹಾಗು ಖಾಯಂ ಶಿಕ್ಷಕರನ್ನು ನೇಮಿಸಿದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಗೆ ಹೊಂದಿಕೊಂಡು ವಿದ್ಯಾರ್ಥಿಗಳನ್ನು ಭವಿಷ್ಯದ ಇಂಜಿನಿಯರ್‌ಗಳಾಗಿ ರೂಪಿಸುವಂತಹ ಶಿಕ್ಷಕರು ಬಿಐಟಿಯಲ್ಲಿದ್ದಾರೆ.

ವಿದ್ಯಾರ್ಥಿ ಕೇಂದ್ರಿತ ಕ್ಯಾಂಪಸ್ : ವಿದ್ಯಾರ್ಥಿಗಳಿಗೆ ಕೇವಲ ಇಂಜಿನಿಯರಿಂಗ್ ಪದವಿ ನೀಡದೆ ಸಂಶೋಧನೆಯ ಮನಸ್ಸು, ತಾಂತ್ರಿಕತೆ, ವಿನ್ಯಾಸ, ಪ್ರಾಯೋಗಿಕ ಜ್ಞಾನ, ಸೃಜನಶೀಲತೆ ಹಾಗು ಮಾನವೀಯ ವೌಲ್ಯಗಳು - ಇವೆಲ್ಲವುಗಳನ್ನು ಅವರಲ್ಲಿ ಬೆಳೆಸುವುದು ಬಿಐಟಿಯ ವಿಶೇಷತೆ. ಇದಕ್ಕಾಗಿ ಬಿಐಟಿಯಲ್ಲಿ ಐದು ವಿಶೇಷ ಕ್ಲಬ್‌ಗಳಿವೆ.

ಅತ್ಯುತ್ತಮ ಫಲಿತಾಂಶ - ನಿರಂತರ ಅತ್ಯುತ್ತಮ ಫಲಿತಾಂಶಗಳು ಬಿಐಟಿಯ ಸಮಗ್ರ ಹಾಗು ವೈಜ್ಞಾನಿಕ ಇಂಜಿನಿಯರಿಂಗ್ ಶಿಕ್ಷಣಕ್ಕೆ ವಿಶೇಷ ಮೆರುಗು ನೀಡಿವೆ. ಸಿವಿಲ್ ಹಾಗು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಬಿಐಟಿ ವಿದ್ಯಾರ್ಥಿಗಳು ವಿವಿಗೆ ರ್ಯಾಂಕ್‌ಗಳನ್ನು ಪಡೆದು ಮಿಂಚಿದ್ದಾರೆ. ಪ್ರತಿ ಸೆಮಿಸ್ಟರ್‌ನಲ್ಲೂ ವಿವಿಧ ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳು ವಿಟಿಯು ಟಾಪರ್ಳಾಗಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.

ಸಂಶೋಧನೆ ಹಾಗು ಅಭಿವೃದ್ಧಿ ವಿಭಾಗ - ವಿಟಿಯು ನಿಂದ ಮಾನ್ಯತೆ ಪಡೆದಿರುವ ಎರಡು ಸಂಶೋಧನಾ ಕೇಂದ್ರಗಳನ್ನು ಬಿಐಟಿ ಸ್ಥಾಪಿಸಿದೆ. ಮೆಕ್ಯಾನಿಕಲ್ ವಿಭಾಗ ದಲ್ಲಿರುವ ಸೂಪರ್‌ಸಾನಿಕ್ ಏರೋ ಡೈನಾಮಿಕ್ಸ್ ಸಂಶೋಧನಾ ಪ್ರಯೋಗಾಲಯ ಇವುಗಳಲ್ಲಿ ಒಂದು. ಇವುಗಳ ಸಹಾಯದಿಂದ ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಆಲೋಚಿಸುವ, ವಿಶ್ಲೇಷಣಾ ಕೌಶಲ್ಯ ಹಾಗು ಆವಿಷ್ಕಾರದ ಮನೋಭಾವ ಬೆಳೆಸುವ ಸಮಗ್ರ ಬೋಧನಾ ಮಾದರಿಯನ್ನು ಬಿಐಟಿ ರೂಪಿಸಿದೆ.

ವಿದ್ಯಾರ್ಥಿ ವೇತನ - ಪ್ರತಿಭಾವಂತ ಹಾಗು ಅರ್ಹ ವಿದ್ಯಾರ್ಥಿಗಳಿಗೆ 100% ವರೆಗೆ ಶುಲ್ಕ ರಿಯಾಯಿತಿಯನ್ನು ಬಿಐಟಿ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದವರು, ಕ್ರೀಡೆ, ಎನ್ನೆಸ್ಸೆಸ್, ಎನ್‌ಸಿಸಿ ಹಾಗು ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಾಡಿದವರಿಗೆ ಈ ಕೊಡುಗೆ ಇಲ್ಲಿ ಲಭ್ಯ.

ಅತ್ಯುತ್ತಮ ಸೌಲಭ್ಯಗಳು - ಸಮಯಕ್ಕೆ ತಕ್ಕಂತೆ ಬದಲಾಗುವ, ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಸರ್ವ ಸವಲತ್ತುಗಳು ಬಿಐಟಿಯಲ್ಲಿ ಲಭ್ಯ. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತ ಹಾಸ್ಟೆಲ್‌ಗಳು, ಶಿಕ್ಷಕರಿಗೆ , ವಿದೇಶಿ / ಎನ್ನಾರೈ ವಿದ್ಯಾರ್ಥಿ ಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ವೈ-ಫೈ, ಅಂತಾರಾಷ್ಟ್ರೀಯ ಗುಣಮಟ್ಟದ ಸಭಾಂಗಣ, ಪ್ರತಿ ವಿಭಾಗಕ್ಕೆ ಸುಸಜ್ಜಿತ ಸೆಮಿನಾರ್ ಹಾಲ್‌ಗಳು, ಗ್ರಂಥಾಲಯ, ಈ-ಜರ್ನಲ್ ಸೌಲಭ್ಯ, ಮಲ್ಟಿ ಜಿಮ್, ವಿವಿಧ ಕ್ರೀಡೆಗಳಿಗೆ ಕ್ರೀಡಾಂಗಣಗಳು, ಕೆಫೆಟೇರಿಯ, ಎಟಿಎಂ , ಸಾರಿಗೆ ವ್ಯವಸ್ಥೆ - ಇತ್ಯಾದಿ ಸಮಗ್ರ ಸವಲತ್ತುಗಳು ಇಲ್ಲಿ ಇವೆ.

 ಕಲಿಕೆ - ಬೋಧನೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಹಾಗು ವಿದ್ಯಾರ್ಥಿ ಕೇಂದ್ರಿತ ಸರ್ವ ಸೌಲಭ್ಯಗಳುಳ್ಳ ಸಮಗ್ರ ಕ್ಯಾಂಪಸ್‌ಗಳ ಮೂಲಕ ಅತ್ಯಲ್ಪ ಅವಧಿಯಲ್ಲೇ ದೇಶದ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ಬಿಐಟಿ ಮತ್ತು ಬೀಡ್ಸ್ ಭವಿಷ್ಯದ ಇಂಜಿನಿಯರ್ ಮತ್ತು ಆರ್ಕಿಟೆೆಕ್ಟ್‌ಗಳ ಆದ್ಯತೆಯ ಶಿಕ್ಷಣ ಸಂಸ್ಥೆಗಳಾಗಿ ಮೂಡಿಬಂದಿವೆೆ.

100 % ಪ್ಲೇಸ್ ಮೆಂಟ್ ಖಾತರಿ  - ಅತ್ಯುತ್ತಮ ಇಂಜಿನಿಯರಿಂಗ್ ಶಿಕ್ಷಣದ ಜೊತೆಗೆ ತನ್ನ ವಿದ್ಯಾರ್ಥಿ ಗಳಿಗೆ 100% ಪ್ಲೇಸ್‌ಮೆಂಟ್ ಖಾತರಿಯನ್ನು ಬಿಐಟಿ ನೀಡುತ್ತಿದೆ. ಬೆಂಗಳೂರು ಕೇಂದ್ರೀಕೃತ ವಾಗಿ ಕಳೆದ ಮೂರು ದಶಕಗಳಿಂದ ಉದ್ಯಮ ರಂಗದಲ್ಲಿ ಪ್ರತಿಷ್ಠಿತ ಹೆಸರಾಗಿರುವ ಬ್ಯಾರೀಸ್‌ಗೆ ಬಹುರಾಷ್ಟ್ರೀಯ ಕಂಪೆನಿಗಳು, ದೇಶ ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳು ಹಾಗು ಬೃಹತ್ ಕೈಗಾರಿಕಾ ಸಮೂಹಗಳ ಜೊತೆ ಸುದೀರ್ಘ, ವ್ಯಾಪಕ ಸಂಪರ್ಕವಿದೆ. ಇದು ಬಿಐಟಿ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.

 ಇದಕ್ಕೆ ಪೂರಕವಾಗಿ ಬಿಐಟಿಯಲ್ಲಿರುವ ತರಬೇತಿ ಹಾಗು ಪ್ಲೇಸ್‌ಮೆಂಟ್ ಸೆಲ್ ಇದೆ. ಇಲ್ಲಿರುವ ಅನುಭವೀ ಅಧಿಕಾರಿ ವಿವಿಧ ಕೈಗಾರಿಕೆಗಳು ಹಾಗು ಉದ್ಯಮ ಸಂಸ್ಥೆಗಳನ್ನು ಕಾಲೇಜಿಗೆ ಕ್ಯಾಂಪಸ್ ಸಂದರ್ಶನ ನಡೆಸಲು ಆಹ್ವಾನಿಸುತ್ತಾರೆ. ಭಾರತೀಯ ಸೇನೆ ಹಾಗು ನೌಕಾದಳದಲ್ಲಿ ನೇಮಕಾತಿಗಾಗಿ ಫೀಲ್ಡ್ ಆಯ್ಕೆ ಪರೀಕ್ಷೆ ಎದುರಿಸಲೂ ಇಲ್ಲಿ ತರಬೇತಿ ನೀಡಲಾಗುತ್ತದೆ. ಬಿಐಟಿ ವಿದ್ಯಾರ್ಥಿಗಳು ಐಬಿಎಂ, ಅಮೆಝಾನ್, ಇನ್ಫೋಸಿಸ್, ಜಸ್ಟ್ ಪೇ, ಟೊಯೋಟಾ, ಕಿರ್ಲೋಸ್ಕರ್ ಮತ್ತಿತರ ಪ್ರತಿಷ್ಠಿತ ಕಂಪೆನಿಗಳಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗ ಪಡೆದಿದ್ದಾರೆ.

 

ಪ್ರತಿ ಕ್ಷೇತ್ರದಲ್ಲಿ ನಾಯಕರು, ಸಂಶೋಧಕರು ಹಾಗು ಸೃಜನಶೀಲ ಮನಸ್ಸುಗಳ ಪ್ರತಿಭೆಗಳನ್ನು ತರಬೇತುಗೊಳಿಸಿ ಶಾಂತಿಯುತ, ಪರಿಸರಸ್ನೇಹಿ ಹಾಗು ಸಮೃದ್ಧ ಜಗತ್ತಿನ ನಿರ್ಮಾಣ ನಮ್ಮ ಗುರಿ. ಸಂತುಲಿತ, ಸಮಗ್ರ ಹಾಗು ಜಾಗತಿಕ ಗುಣಮಟ್ಟದ ಮಾನವೀಯ ಶಿಕ್ಷಣದ ಮೂಲಕ ಇದನ್ನು ನಾವು ಸಾಧಿಸಲಿದ್ದೇವೆ. ಬಿಐಟಿ ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.

 ಎಲ್ಲ ಭಾವೀ ಇಂಜಿನಿಯರ್‌ಗಳನ್ನು ಮತ್ತು ಆರ್ಕಿಟೆಕ್ಟ್‌ಗಳನ್ನು ಬಿಐಟಿ ಹಾಗು ಬೀಡ್ಸ್ ಆದರದಿಂದ ಸ್ವಾಗತಿಸುತ್ತಿವೆ.

- ಸಯ್ಯದ್ ಮುಹಮ್ಮದ್ ಬ್ಯಾರಿ

  ಅಧ್ಯಕ್ಷರು, ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್

ಲಭ್ಯ ಕೋರ್ಸುಗಳು :

ಬಿಐಟಿಯಲ್ಲಿ Civil, Mechanical, Computer Science,Electronics & Communication Engineering ಗಳಲ್ಲಿ ಪದವಿ ಕೋರ್ಸುಗಳು.

Mechanical ಹಾಗು Computer Science Eng. ಗಳಲ್ಲಿ ಸ್ನಾತಕೋತ್ತರ ಕೋರ್ಸುಗಳಿವೆ.

Mechanical ಹಾಗು  Civil Engineering ಗಳಲ್ಲಿ ಡಿಪ್ಲೋಮ ಕೋರ್ಸುಗಳಿವೆ

Mechanical ಹಾಗು  Physics ನಲ್ಲಿ  Ph.d   ಮಾಡಲು ಅವಕಾಶವಿದೆ.

ಅತ್ಯಲ್ಪ ಅವಧಿಯಲ್ಲಿ ಆರ್ಕಿಟೆಕ್ಚರ್ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ವಿಶಿಷ್ಟ ಛಾಪು ಮೂಡಿಸಿರುವ BEADS ನಲ್ಲಿ ಐದು ವರ್ಷಗಳ B.Arch ಕೋರ್ಸು ಲಭ್ಯವಿದೆ.

ದಾಖಲಾತಿ ಮಾಹಿತಿ, ವಿವರಗಳಿಗೆ ಸಂಪರ್ಕಿಸಿ :

Bearys Institute of Technology

Bearys Knowledge Campus

Lands End, Boliyar, Mangalore - 574153, Karnataka, India

T: 7259 77 33 00, 7259 66 88 44

E: admissions@bitmangalore.edu.in

www.bitmangalore.edu.in | www.beads.edu.in

ಪ್ರಾಯೋಜಿತ ಲೇಖನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News