​ಅಮಾಯಕ ಮುಸ್ಲಿಂ ಯುವಕರ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯಿಸಿ ಮನವಿ

Update: 2017-06-19 11:33 GMT

ಚಿಕ್ಕಮಗಳೂರು, ಜೂ.19:  ಆಲ್ದೂರಿನಲ್ಲಿ ರವಿವಾರ ಸಂಜೆ 6:30ರ ಸಮಯದಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ನಂತರ ಅಮಾಯಕ ಮುಸ್ಲಿಂ ಯುವಕರ ಮೇಲೆ ಹಲ್ಲೆ ಕೃತ್ಯ ಎಸಗಲಾಗಿದೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪಿಎಫ್‌ಐ ಕಾರ್ಯಕರ್ತರು ಸೋಮವಾರ ಎಸ್ಪಿ ಕೆ.ಅಣ್ಣಾಮಲೈಯವರಿಗೆ ಮನವಿ ಸಲ್ಲಿಸಿದ್ದಾರೆ.

ಹಲ್ಲೆ ಕೃತ್ಯವು ಬಾಳೆಹೊನ್ನೂರಿನಿಂದ ಸಂತೆ ಮುಗಿಸಿಕೊಂಡು ಕಾರಿನಲ್ಲಿ ಚಿಕ್ಕಮಗಳೂರಿನತ್ತ ಬರುತ್ತಿದ್ದವರ ಮೇಲೆ ನಡೆದಿದೆ. ಕಾರಿನಲ್ಲಿ ಮುಸ್ಲಿಂ ಯುವಕರು ಇರುವುದನ್ನು ಕಂಡಿರುವ ಕೆಲವು ಕಿಡಿಗೇಡಿ ಯುವಕರು ಅರೆನೂರು ಎಂಬಲ್ಲಿಂದ ಆಲ್ದೂರು ತನಕ ಕಾರನ್ನು ಹಿಂಬಾಲಿಸಿಕೊಂಡು ಬಂದು ಆಲ್ಸೂರಿನ ಹೆಚ್.ಪಿ.ಪೆಟ್ರೋಲ್ ಬಂಕ್‌ಹತ್ತಿರ ಕಾರನ್ನು ಅಡ್ಡಗಟ್ಟಿ ದೊಣ್ಣೆ ಮತ್ತು ರಾಡುಗಳಿಂದ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಅವರನ್ನು ಹಲ್ಲೆಕೋರರಿಂದ ಅಮಾಯಕ ಯುವಕರನ್ನು ರಕ್ಷಿಸಿ ಆಲ್ಸೂರಿನ ಆಸ್ಪತ್ರೆಗೆ ಸೇರಿಸಿದ ಮೇಲೂ ಅಲ್ಲಿಗೆ ತೆರಳಿದ ಹಲ್ಲೆಕೋರರ ತಂಡ ಮತ್ತೊಮ್ಮೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಕೃತ್ಯನ್ನು ಸ್ಥಳದಲ್ಲಿ ಕಂಡ ಪ್ರತ್ಯಕ್ಷದರ್ಶಿಗಳು ಆರೋಪಿಗಳನ್ನು ಸುಪ್ರೀತ್, ಮಂಜು, ಶಿವಕುಮಾರ್ ಹಾಗೂ ವಿಷ್ಣು ಎಂದು ಗುರುತಿಸಿದ್ದಾರೆ. ಆರೋಪಿಗಳು ರಾತ್ರಿ 12 ಗಂಟೆ ಸಮಯದಲ್ಲಿ ಆಲ್ದೂರಿನ ಮದರಸ ಮತ್ತು ಮಸ್ಲೀಮರ ಮನೆ ಮೇಲೆ ಕ್ಲು ತೂರಿ ಭೀತಿ ಮೂಡಿಸಿದ್ದಾಗಿ ಆರೋಪಿಸಿದ್ದಾರೆ.

ಇಂತಹ ಕೃತ್ಯಗಳು ಆಲ್ದೂರು ಪರಿಸರದಲ್ಲಿ ಅನೇಕ ಸಲ ನಡೆದಿದೆ. ಈ ದುಷ್ಕರ್ಮಿಗಳು ಸ್ಥಲೀಯರನ್ನು ಭೀತಿಪಡಿಸಲುಆಶಾಂತಿ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಗಂಭಿರವಾಗಿ ಗಮನ ಹರಿಸಿ ಕಿಡಿಗೇಡಿ ಕೃತ್ಯಗಳಲ್ಲಿ ಭಾಗಿಗಳಾಗಿರುವ ಆರೋಪಿಗಳನ್ನು ಕಾನೂನು ಕ್ರಮ ಜರುಗಿಸುವ ಮೂಲಕ ಗಡಿಪಾರುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಪಿಎಫ್‌ಐ ಜಿಲ್ಲಾಧ್ಯಕ್ಷ ಮೊಹಮ್ಮದ್ ಅಮೀನ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಝೀರ್, ಜಮೀರ್ ಅಹಮ್ಮದ್, ಚಾಂದ್ ಪಾಷಾ, ಸಿಖಂದರ್ ಪಾಷಾ, ಗೌಸ್ ಮುನೀರ್, ಮುಸ್ತಫಾ ಮತ್ತಿತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News