ಮಂಗಳೂರು ವಿವಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Update: 2017-06-20 15:44 GMT

ಉಡುಪಿ, ಜೂ.20: ಮಂಗಳೂರು ವಿವಿಯ ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಾಲೇಜು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ ಇಲ್ಲಿ 2017-18ನೇ ಸಾಲಿನಲ್ಲಿ 24 ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಸ್ನಾತಕೋತ್ತರ ಪದವಿ ಹೊಂದಿದ್ದು (ಶೇ.55 ಅಂಕಗಳೊಂದಿಗೆ), ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ವಿವಿಯ ವೆಬ್‌ಸೈಟ್ -www.mangaloreuniversity.ac.in -ನಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು -devsectionmu@gmail.com -ಗೆ ಜೂ.24ರೊಳಗೆ ಸಲ್ಲಿಸಬೆೀಕು.

ಅಭ್ಯರ್ಥಿಗಳು ಅರ್ಜಿಯ ಒಂದು ಪ್ರತಿ ಮತ್ತು ದಾಖಲೆಗಳ ಜೆರಾಕ್ಸ್ ಪ್ರತಿ ಮತ್ತು ಮೂಲದಾಖಲೆಗಳೊಂದಿಗೆ ಜೂ.27 ಅಥವಾ 28ರಂದು ಕುಲಸಚಿವರ ಕಚೇರಿ, ಆಡಳಿತ ಸೌಧ, ಮಂಗಳೂರು ವಿವಿ, ಮಂಗಳಗಂಗೋತ್ರಿ-574199 ಇಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.

ಯುಜಿಸಿ, ಎನ್‌ಇಟಿ/ಎಸ್‌ಎಲ್‌ಇಟಿ ಉತ್ತೀರ್ಣರಾದವರಿಗೆ, ಪಿಎಚ್‌ಡಿ, ಎಂಫಿಲ್ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಎಂದು ವಿವಿ ಕುಲಸಚಿವರ ಪ್ರಕಟಣೆ ತಿಳಿಸಿದೆ.

ಜೂ.27ರ ಬೆಳಗ್ಗೆ ಗಣಿತಶಾಸ್ತ್ರ, ಭೌತಶಾಸ್ತ್ರ, ಗಮಕ ವಿಜ್ಞಾನ, ರಸಾಯನ ಶಾಸ್ತ್ರ, ಯೋಗ ವಿಜ್ಞಾನ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಅಪರಾಹ್ನದ ವೇಳೆ ಭೂಗೋಳ ಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಜರ್ನಲಿಸಮ್, ಸಮಾಜಕಾರ್ಯ, ದೈಹಿಕ ಶಿಕ್ಷಣ, ಭರತನಾಟ್ಯಂ, ಕೌನ್ಸಲರ್ ಹುದ್ದೆಗೆ ಜೂ.28ರಂದು ಬೆಳಗ್ಗೆ ಪ್ರವಾಸೋದ್ಯಮ ಆಡಳಿತ, ವಾಣಿಜ್ಯ ಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್, ಎಚ್‌ಆರ್‌ಡಿಗೆ ಅಪರಾಹ್ನದ ವೇಳೆ ಕನ್ನಡ, ಇಂಗ್ಲೀಷ್, ಹಿಂದಿ, ಫ್ರೆಂಚ್, ಜರ್ಮನ್, ಕೊಂಕಣಿ, ಅರ್ಥಶಾಸ್ತ್ರ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News