ಕಡಿಯಾಳಿ ಟ್ರಾಫಿಕ್ ಸಾಹೇಬ್ ಟಿ.ಎಸ್. ಅಬೂಬಕರ್

Update: 2017-06-23 05:22 GMT

ಉಡುಪಿ, ಜೂ.23:  ಟ್ರಾಫಿಕ್ ಸಾಹೇಬ್ರು ಎಂದೆ ಪ್ರಸಿದ್ಧರಾಗಿದ್ದ ಕಡಿಯಾಳಿಯ ಟಿ.ಎಸ್. ಅಬೂಬಕರ್ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕಡಿಯಾಳಿ ಹಲವಾರು ವರುಷಗಳಿಂದ ಸೀಟ್ ಕುಶನ್ ಕೆಲಸ ಮಾಡಿಕೊಂಡಿದ್ದ ಸಾಹೇಬರಿಗೆ ಮಕ್ಕಳಲ್ಲಿ ಅತೀಯಾದ ಪ್ರೀತಿ. ಕಡಿಯಾಳಿ ಕಲ್ಸಂಕ ಕಿರಿದಾದ ರಸ್ತೆ ಇದ್ದ ಸಂಧರ್ಭದಲ್ಲಿ, ಅಲ್ಲಿನ ಕಡಿಯಾಳಿ ಶಾಲೆಯ ಮಕ್ಕಳು ರಸ್ತೆ ದಾಟಲು ಕಷ್ಟ ಪಡುತ್ತಿದ್ದ ಸಂಧರ್ಭ ಅಬೂಬಕರ್ ಸಹೇಬರು ತನ್ನ ಕೆಲಸವನ್ನು ಬಿಟ್ಟು ಬೆಳಗ್ಗೆ ಹಾಗೂ ಸಂಜೆ ಹೊತ್ತಲ್ಲಿ ಮಕ್ಕಳನ್ನ ರಸ್ತೆ ದಾಟಿಸುವ ಕೆಲಸ ಮಾಡುತ್ತಿದ್ದರು.

ಹಲವು ವರುಷಗಳಿಂದ ಇದೇ ಸೇವೆ ಮಾಡಿಕೊಂಡು ಬಂದಿದ್ದ ಸಾಹೇಬರಿಗೆ ಮಕ್ಕಳು ಟ್ರಾಫಿಕ್ ಸಾಹೇಬ್ರು ಅಂತಾನೆ ಕರೆಯುತ್ತಿದ್ದರು. ಇವರ ಈ ಸೇವೆಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನವನ್ನು ಮಾಡಿ ಗೌರವವನ್ನು ಸಲ್ಲಿಸಿದರು. ಅಷ್ಟೇ ಅಲ್ಲದೆ ಕಡಿಯಾಳಿ ಜಂಕ್ಷನ್ ನಲ್ಲಿ ಟ್ರಾಫಿಕ್ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇವರಿಗೆ ವಿಶೇಷ ಅಧಿಕಾರವನ್ನು ನೀಡಿತ್ತು.

ಕಳೆದ ಕೆಲವು ಸಮಯಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿ ಇದ್ದಕ್ಕಿದ್ದಂರೆ ಆರೋಗ್ಯ ಹದಗೆಟ್ಟು ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ