ಕೇರಳದಲ್ಲಿ ಆರುತಿಂಗಳೊಳಗೆ ಪ್ಲಾಸ್ಟಿಕ್ ಚೀಲ ಸಂಪೂರ್ಣ ನಿಷೇಧ

Update: 2017-06-23 06:42 GMT

ತಿರುವನಂತಪುರಂ,ಜೂ. 23: ರಾಜ್ಯದಲ್ಲಿ ಆರುತಿಂಗಳೊಳಗೆ ಪ್ಲಾಸ್ಟಿಕ್ ಚೀಲಳನ್ನು ನಿಷೇಧಿಸಲಾಗುವುದು ಎಂದು ಸಚಿವ ಕೆ.ಟಿ. ಜಲೀಲ್ ತಿಳಿಸಿದ್ದಾರೆ. ಈಗಾಗಲೇ ದಾಸ್ತಾನು ಇರುವ ಪ್ಲಾಸ್ಟಿಕ್ ಚೀಲಗಳನ್ನು ನಾಶಪಡಿಸಲು ಅಥವಾ ಅದನ್ನು ಬಳಸಿ ಮುಗಿಸಲು ಈ ಆರುತಿಂಗಳ ಅವಧಿಯನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಹೋಟೆಲ್, ಹಣ್ಣುಹಂಪಲು, ಮೀನು, ಮಾಂಸದಂಗಡಿಗಳು ಮಾಲಿನ್ಯ ನಿವಾರಿಸಲು ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂಗಡಿ ಇರುವಲ್ಲಿ ಅದಕ್ಕೆ ಅವಕಾಶ ಇಲ್ಲದಿದ್ದರೆ ಬೇರೊಂದು ಕಡೆಯಲ್ಲಿ ಮಾಲಿನ್ಯನಿವಾರಿಸುವ ವ್ಯವಸ್ಥೆ ಮಾಡಿ ಅದನ್ನು ಅಧಿಕಾರಿಗಳಿಗೆ ತೋರಿಸಬೇಕು. ಹೋಟೆಲು ಮುಂತಾದೆಡೆಗಳಲ್ಲಿನ ಮಾಲಿನ್ಯವನ್ನು ನೀರಿನಾಶ್ರಯದ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಬಾರದು.

ಶುಚೀಕರಣ ಚಟುವಟಿಕೆಗಳನ್ನು ಊರ್ಜಿತಗೊಳಿಸಲು ಎಲ್ಲ ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್ ಸಂಸ್ಕರಣೆಯುನಿಟ್‌ಗಳನ್ನು ಸ್ಥಾಪಿಸಲಿದೆ. ಕುಟುಂಬಶ್ರೀ ಸಹಿತ ಏಜೆನ್ಸಿಗಳ ಸಹಾಯದಿಂದ ಇದನ್ನು ಸ್ಥಾಪಿಸಲಾಗುವುದು. ಸಂಸ್ಕರಣೆ ಯುನಿಟ್‌ನ ಪ್ಲಾಸ್ಟಿಕ್‌ಗಳನ್ನು ಪಿಡಬ್ಲ್ಯುಡಿ ಇಲಾಖೆಗೆ ಕಿಲೋ ಒಂದಕ್ಕೆ ಇಪ್ಪತ್ತುರೂಪಾಯಿಯಂತೆ ಮಾರಲಾಗುವುದು. ಇದನ್ನು ಸ್ಥಳೀಯ ರಸ್ತೆ ನಿರ್ಮಾಣದಲ್ಲಿ ಬಳಸಿಕೊಳ್ಳಲಾಗುವುದು ಎಂದು ಸಚಿವ ಜಲೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News