ಯುವಪೀಳಿಗೆಯ ಆಲೋಚನಾ ಕ್ರಮ ಬದಲಾಗಬೇಕು: ಜಿಲ್ಲಾಧಿಕಾರಿ ಜಿ.ಸತ್ಯವತಿ

Update: 2017-06-23 10:20 GMT

ಚಿಕ್ಕಮಗಳೂರು, ಜೂ.23: ಹಿರಿಯರ ಬಗ್ಗೆ ಯುವಪೀಳಿಗೆಯ ಆಲೋಚನಾಕ್ರಮ ಬದಲಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಅಭಿಪ್ರಾಯಿಸಿದರು.

ಅವರು ಚಿಕ್ಕಮಗಳೂರು ರೋಟರಿ ಕ್ಲಬ್ ಜೀವನ ಸಂಧ್ಯಾ ವೃದ್ಧಾಶ್ರಮದ ಆವರಣದಲ್ಲಿ ಆಯೋಜಿಸಿದ್ದ ಜಿ.ಸಿ.ಸಿಪಾನಿ ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಉನ್ನತೀಕರಣ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯರ ಬಗ್ಗೆ ಗೌರವ ಭಾವ ತಾಳಬೇಕು. ತಂದೆ-ತಾಯಂದಿರು ನಿಸ್ವಾರ್ಥದಿಂದ ತ್ಯಾಗ ಮನೋಭಾವದಿಂದ ಸಾಕಿ-ಸಲಹಿ ಶಿಕ್ಷಣ ನೀಡಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದರೂ,  ಕೊನೆಗಾಲದಲ್ಲಿ ಅವರನ್ನು ನಿರ್ಲಕ್ಷಿಸಲ್ಪಡುವ ಸಾಮಾನ್ಯ ಸಂಗತಿ ಸಮಾಜದಲ್ಲಿ ಕಾಣುತ್ತೇವೆ ಎಂದು ನುಡಿದರು.

ಮಕ್ಕಳಿದ್ದರೂ ತಂದೆತಾಯಂದಿರನ್ನು ಇಂತಹ ವೃದ್ಧಾಶ್ರಮದಲ್ಲಿ ಇರಿಸುವುದು ಬೇಸರದ ಸಂಗತಿ. ಇಲ್ಲಿ ವ್ಯವಸ್ಥೆಗಳು ಉತ್ತಮವಾಗಿರುವುದರಿಂದ ಹಿರಿಯನಾಗರಿಕರು ಸ್ವಲ್ಪ ಸಂತಸದಿಂದಿದ್ದಾರೆಂದ ಜಿಲ್ಲಾಧಿಕಾರಿಗಳು, ಯುವಪೀಳಿಗೆ ಹಿರಿಯರ ಬಗ್ಗೆ ಕಾಳಜಿವಹಿಸಿ ತಮ್ಮ ಆಲೋಚನಾ ಲಹರಿಯನ್ನುಬದಲಿಸಿಕೊಳ್ಳಬೇಕೆಂದ ಅವರು, ರೋಟರಿ ಕಣ್ಣಿನಆಸ್ಪತ್ರೆ ಈಭಾದ ಜನರಿಗೆ ಸಹಕಾರಿಯಾಗಿದ್ದು, ಉನ್ನತಿೀಕರಣಗೊಳಿಸಿರುವುದು ಸ್ಯುತ್ಯಾರ್ಹ. ಲಾಭದಾಯಕವಲ್ಲದ ಸೇವಾ ಚಟುವಟಿಕೆಗಳು ಜೀವನಸಂಧ್ಯಾದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಬಗ್ಗೆ ಪ್ರಯತ್ನಿಸುವ ಭರವಸೆ ನೀಡಿದರು.

ಜೀವನಸಂಧ್ಯಾ ಅಧ್ಯಕ್ಷ ಎ.ಎಂ.ನಂಜುಂಡಸ್ವಾಮಿ ಮಾತನಾಡಿ 1991ರಲ್ಲಿ ಪ್ರಾರಂಭವಾದ ವೃದ್ಧಾಶ್ರಮದಲ್ಲಿ ಪ್ರಸ್ತುತ 65 ಹಿರಿಯ ನಾಗರಿಕರಿದ್ದಾರೆ. ಈ ವರ್ಷ ಬೆಳ್ಳಿಹಬ್ಬ ಆಚರಿಸಿಕೊಂಡಿದೆ. ಕೊಳವೆಬಾವಿ, ಶೌಚಾಲಯ ಸುತ್ತಲಿನ ಕಾಂಪೌಂಡ್ ವ್ಯವಸ್ಥೆಗಳ ಜೊತೆಗೆ ಕೇಂದ್ರ ಅನುದಾನಕ್ಕೂ ಜಿಲ್ಲಾಧಿಕಾರಿಗಳು ನೆರವಾಗಬೇಕೆಂದರು. ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್.ಸುಧೀರ್ ಅಧ್ಯಕ್ಷತೆವಹಿಸಿದ್ದರು. ರೋಟರಿ 3182 ಜಿಲ್ಲಾಗೌರ್ನರ್ ಡಿ.ಎಸ್.ರವಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News