ಅಂಧ ಮಕ್ಕಳ ಶಾಲೆಗೆ ಡಿ.ಬಿ.ಚಂದ್ರೇಗೌಡರ ಕೊಡುಗೆ

Update: 2017-06-23 10:24 GMT

ಚಿಕ್ಕಮಗಳೂರು, ಜೂ.23: ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಡಿ.ಬಿ. ಚಂದ್ರೇಗೌಡನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ಪತ್ನಿಯೊಂದಿಗೆ ಆಗಮಿಸಿ ಬೆಂಗಳೂರಿನ ಜೆ.ಹೆಚ್.ಪಟೇಲ್ ಪ್ರತಿಷ್ಠಾನದಿಂದ ಪ್ರಶಸ್ತಿ ರೂಪದಲ್ಲಿ ಬಂದ 50,000 ಹಾಗೂ ಸ್ವತಃ 1 ಲಕ್ಷ ಒಟ್ಟು ಸೇರಿ 1.5 ಲಕ್ಷ ಆರ್ಥಿಕ ಸಹಾಯ ನೀಡಿದರು.  ಈ ಸಂದರ್ಭದಲ್ಲಿ ಡಿ.ಬಿ.ಚಂದ್ರೇಗೌಡ ಮಾತನಾಡಿ, ರಾಜಕಾರಣಿಗಳಿಗೆ ಕಣ್ಣು ಕಾಣಿಸುವುದು ಅಧಿಕಾರಕ್ಕೆ ಮುಂಚೆ ಹಾಗೂ ಅಧಿಕಾರ ಹೋದ ನಂತರದಲ್ಲಿ. ಅಧಿಕಾರದಲ್ಲಿದ್ದಾಗ ಕಣ್ಣು ಕಾಣಿಸುವುದಿಲ್ಲ. ಇದು ರಾಜಕಾರಣಿಗಳ ದುರಾದೃಷ್ಟ ಎಂದರು.

ಅಧಿಕಾರವಿದ್ದಾಗ ಎಲ್ಲರ ಏಳಿಗೆಗಾಗಿ ಎಚ್ಚರದಿಂದ ಕೆಲಸ ಮಾಡಿದಾಗ ಸಮಾಜದಲ್ಲಿ ಸಮಾನತೆ ಸಾಧ್ಯ. ಅಂಧತ್ವ ಶಾಪವಲ್ಲ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ಆತ್ಮವಿಶ್ವಾಸದಿಂದ ಪ್ರಗತಿಯತ್ತ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.  ಆಡಳಿತ ಮಂಡಳಿ ಪರವಾಗಿ ಎಂ.ಎಸ್. ನಂಜುಂಡಸ್ವಾಮಿ ದಂಪತಿಗಳ ಕಾರ್ಯವನ್ನು ಶ್ಲಾಘಿಸಿದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News