ಕುವೈಟ್: 2018ರಲ್ಲಿ ಕಾರ್ಮಿಕ ಮಾರುಕಟ್ಟೆಗೆ 16,000 ಸ್ವದೇಶಿಗಳು !

Update: 2017-06-30 10:49 GMT

ಕುವೈಟ್‌ಸಿಟಿ, ಜೂ. 30: 2018ರಲ್ಲಿ ಕುವೈಟ್‌ನ ಉದ್ಯೋಗ ಮಾರುಕಟ್ಟೆಗೆ ಹೊಸದಾಗಿ 16,000 ಸ್ವದೇಶಿಗಳು ಬರಲಿದ್ದಾರೆ ಎಂದು ಸಿವಿಲ್ ಸರ್ವಿಸ್ ಕಮಿಶನ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಈ ವರ್ಷ 15,000 ಸ್ವದೇಶಿಗಳು ಕಾರ್ಮಿಕ ಮಾರುಕಟ್ಟೆಗೆ ಬಂದಿದ್ದಾರೆ ಎಂದು ಕಮಿಶನ್ ಮೂಲಗಳನ್ನು ಉದ್ಧರಿಸಿ ಅಲ್ ಅನ್‌ಬ ದೈನಿಕ ವರದಿಮಾಡಿದೆ.

2030ಕ್ಕಾಗುವಾಗ ದೇಶದ 29,000 ಸ್ವದೇಶಿಗಳು ಕೆಲಸಗಳಿಗೆ ಬರುವ ನಿರೀಕ್ಷೆಯನ್ನು ವರದಿ ವ್ಯಕ್ತಪಡಿಸಿದೆ. ಖಾಸಗಿ ಕ್ಷೇತ್ರಗಳಿಗೆ ಸಂಬಂಧಿಸಿದ ಲೆಕ್ಕ ಇದು. ಇದರಿಂದಾಗಿ ವಿದೇಶಿ ಕಾರ್ಮಿಕರು ಕೆಲಸದ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ದೇಶದ ಉದ್ಯೋಗ ಮಾರುಕಟ್ಟೆಯಲ್ಲಿಸ್ವದೇಶಿಗಳಿಗೆ ಹೋಲಿಸುವಾಗ ವಿದೇಶಿಗಳ ಸಂಖ್ಯೆ ಹೆಚ್ಚಿದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ದೇಶದ ಕಾರ್ಮಿಕರಲ್ಲಿ ಶೇ.18.1ರಷ್ಟು ಮಾತ್ರ ಸ್ವದೇಶಿಗಳು ಇದ್ದಾರೆ. ಸ್ವದೇಶಿಗಳಿಗೆ ಹೆಚ್ಚುಉದ್ಯೋಗ ನೀಡಿ ವಿದೇಶಿಗಳು ಬರುವುದನ್ನು ಕಡಿಮೆ ಮಾಡುವ ಉದ್ದೇಶವನ್ನು ಅಧಿಕಾರಿಗಳು ಹೊಂದಿದ್ದಾರೆ.

ಕಳೆದವರ್ಷಗಳಿಗೆ ಹೋಲಿಸಿದರೆ ನಿರುದ್ಯೋಗಿ ಸ್ವದೇಶಿಗಳ ಸಂಖ್ಯೆ ಶೇ.15.68ರಷ್ಟು ಕಡಿಮೆಯಾಗಿದೆ ಎಂದು ಸೆಂಟ್ರಲ್ ಸೆನ್ಸಸ್ ಡಿಪಾರ್ಟ್‌ಮೆಂಟ್‌ನ ಕಾರ್ಮಿಕ ವಿಭಾಗದ ವರದಿ ತಿಳಿಸಿದೆ.ಸಿವಿಲ್ ಸರ್ವಿಸ್ ಕಮೀಶನ್‌ನಲ್ಲಿ ನೋಂದಾವಣೆ ಮಾಡಿದ ಲೆಕ್ಕ ಪ್ರಕಾರ ಈ ವರ್ಷ 14,822 ಸ್ವದೇಶಿ ನಿರುದ್ಯೋಗಿಗಳಿದ್ದಾರೆ. 2016ರಲ್ಲಿ 17,578 ಸ್ವದೇಶಿ ನಿರುದ್ಯೋಗಿಗಳಿದ್ದರು. ಪುರುಷರಿಗೆ ಹೋಲಿಸಿದರೆ ಸ್ವದೇಶಿ ಮಹಿಳೆಯರಲ್ಲಿ ಹೆಚ್ಚು ನಿರುದ್ಯೋಗಿಗಳಿದ್ದಾರೆ. ನಿರುದ್ಯೋಗಿಗಳಲ್ಲಿ 3,377 ಮಂದಿ ಪುರುಷರು ಮತ್ತು 11,445 ಮಹಿಳಾ ಸ್ವದೇಶಿ ನಿರುದ್ಯೋಗಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News