ಜುನೈದ್ ಕುಟುಂಬವನ್ನು ಸಂದರ್ಶಿಸಿದ ಮುಸ್ಲಿಂ ಲೀಗ್

Update: 2017-07-01 10:18 GMT

ಹೊಸದಿಲ್ಲಿ,ಜು.1: ರೈಲಿನಲ್ಲಿ ಪ್ರಯಾಣಿಸುತ್ತಿದ್ದವೇಳೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜುನೈದ್‌ನ ಕುಟುಂಬವನ್ನು ಶುಕ್ರವಾರ ಕೇರಳ ಮುಸ್ಲಿಂ ಲೀಗ್ ನಾಯಕರು ಭೇಟಿಯಾಗಿದ್ದಾರೆ. ಕುಟುಂಬಕ್ಕೆ ಆರ್ಥಿಕಸಹಾಯ, ಕಾನೂನು ನೆರವನ್ನು ಲೀಗ್ ನೀಡಲಿದೆ ಎಂದು ಭೇಟಿಮಾಡಿದ ಬಳಿಕ ದಿಲ್ಲಿಯಲ್ಲಿ ಮುಸ್ಲಿಂಲೀಗ್ ರಾಷ್ಟ್ರೀಯ ವಕ್ತಾರ ಇ.ಟಿ. ಮುಹಮ್ಮದ್ ಬಶೀರ್, ಸಂಸದ ಮತ್ತು ಲೀಗ್ ಖಜಾಂಚಿ ಎ.ಪಿ. ಅಬ್ದುಲ್ ವಹಾಬ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಾಹನಮತ್ತು ಇತರ ಆರ್ಥಿಕ ನೆರವುಗಳನ್ನು ಜುಲೈ 18ರಂದು ಕುಟುಂಬಕ್ಕೆ ನೀಡಲಾಗುವುದು. ವಿವಿಧ ಜಾತ್ಯತೀತ, ಸಾಮಾಜಿಕ ಒಕ್ಕೂಟಗಳು ಸೇರಿ ರಾಷ್ಟ್ರೀಯ ಪ್ರತಿಭಟನೆ ಹಾಗೂ ಜು.18ಕ್ಕೆ ಪಾರ್ಲಿಮೆಂಟ್ ಮಾರ್ಚ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ದನದ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲಬಾರದುಎನ್ನುವ ಪ್ರಧಾನಿಯ ಮಾತು ಪ್ರಮಾಣಿಕವಲ್ಲ. ಅವರ ಪಕ್ಷದ ಕಾರ್ಯಕರ್ತರೇ ದಾಳಿನಡೆಸುತ್ತಿದ್ದಾರೆ ಎಂದು ಇ.ಟಿ. ಮುಹಮ್ಮದ್ ಬಶೀರ್ ಹೇಳಿದ್ದಾರೆ.

  ’ ಏಕ ತೆರಿಗೆ,ಏಕಭಾರತ’ ಎನ್ನುವುದು ಕೇಂದ್ರಸರಕಾರದ ಘೋಷಣೆಯಾಗಿದೆ. ಆದರೆ ದೇಶದ ಜನರಿಗೆ ಏಕೈಕ ಕಾನೂನು ಬೇಕಾಗಿದೆ. ಜುನೈದ್‌ರದ್ದು ಕೋಮುದ್ವೇಷದ ಕೊಲೆಯಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಸೀಟಿಗಾಗಿ ನಡೆದ ವಾಗ್ವಾದ ಎಂದು ಸೇರಿಸಲಾಗಿದೆ ಎಂದು ಸಂಸದ ಅಬ್ದುಲ್ ವಹಾಬ್ ಹೇಳಿದ್ದಾರೆ. ಯೂತ್ ಲೀಗ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಕೆ. ಝುಬೈರ್, ಉಪಾಧ್ಯಕ್ಷ ಅಡ್ವೊಕೇಟ್ ಫೈಝಲ್ ಬಾಬು, ಎಂಎಸ್‌ಎಫ್ ರಾಷ್ಟ್ರೀಯ ಅಧ್ಯಕ್ಷ ಟಿ.ಪಿ. ಅಶ್ರಫಲಿ, ದಿಲ್ಲಿ ಘಟಕ ಕಾರ್ಯದರ್ಶಿ ಮುಹಮ್ಮದ್ ಹಲೀಂ ಮುಂತಾದವರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News