ಪಬ್ಲಿಕ್ ಹೆಲ್ತ್ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ವೃತ್ತಿಜೀವನ: ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಎಚ್ ಪದವಿ

Update: 2017-07-01 12:39 GMT

ಮಂಗಳೂರು, ಜೂ.30: ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರೆಡಿಟೇಷನ್ ಕೌನ್ಸಿಲ್ (ಎನ್.ಎ.ಎ.ಸಿ) ನಿಂದ ಎೞ ಮಾನ್ಯತೆ ಪಡೆದ ನಿಟ್ಟೆ ವಿಶ್ವವಿದ್ಯಾಲಯವು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದಿಂದ ೞಎೞ ಗುಂಪಿಗೆ ಸೇರಿದ್ದು, ಇಲ್ಲಿ ಹೊಸ ಶೈಕ್ಷಣಿಕ ಕಾರ್ಯಕ್ರಮವಾದ ಎಂ.ಪಿ.ಎಚ್ ಪದವಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಕಾರ್ಯಕ್ರಮವು ಬೇಡಿಕೆಯಿರುವ ಒಂದು ವೃತ್ತಿಪರ ಪದವಿಯಾಗಿದ್ದು, ಆರೋಗ್ಯ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಆರೋಗ್ಯದಲ್ಲಿನ ಪರಿಕಲ್ಪನೆಗಳು, ತತ್ವಗಳು ಮತ್ತು ವಿಧಾನಗಳಲ್ಲಿ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತದೆ. ಈ ಪದವಿಯು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಆರೋಗ್ಯ ಮತ್ತು ಅದರ ಅನ್ವಯಿಕೆಗಳಲ್ಲಿ ಜ್ಙಾನ ಮತ್ತು ಕೌಶಲ್ಯತೆ ಬಲಪಡಿಸಿಕೊಳ್ಳಲು ಅಭ್ಯಾಸಾಧಾರಿತ ಕಾರ್ಯಕ್ರಮವನ್ನು ಒದಗಿಸುತ್ತದೆ.

ಆರೋಗ್ಯ ರಕ್ಷಣೆಗಾಗಿ ಹಣಕಾಸಿನ ಹಂಚಿಕೆಗಳನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಮನಗಂಡು ಮುಂಬರುವ ದಶಕಗಳಲ್ಲಿ ಈ ಕ್ಷೇತ್ರದ ಉದ್ಯೋಗ ಮಾರುಕಟ್ಟೆಯು ವಿಸ್ತರಿಸಲಿದ್ದು ಇದಕ್ಕಾಗಿ ಒಂದು ಸಮರ್ಥ ಸಾರ್ವಜನಿಕ ಆರೋಗ್ಯ ಕಾರ್ಯಪಡೆಯನ್ನು ಹೆಚ್ಚಿಸಲು ಈ ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಆರೋಗ್ಯ ರಕ್ಷಣೆಗಾಗಿ ಜಿ.ಡಿ.ಪಿ ಯಲ್ಲಿನ 1.35% ರಿಂದ 2.5% ಗೆ ದ್ವಿಗುಣಗೊಳಿಸಲು ಭಾರತ ಸರ್ಕಾರ ತನ್ನ ಇತ್ತೀಚಿನ ರಾಷ್ಟ್ರೀಯ ಆರೋಗ್ಯ ನೀತಿ 2017ರಲ್ಲಿ ಬದ್ಧವಾಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕಾರ್ಯಕ್ರಮಗಳಲ್ಲಿ ಸಾರ್ವಜನಿಕಆರೋಗ್ಯ ಪಡೆಯನ್ನು ಸ್ಥಾಪಿಸುವ ಯೋಜನೆ ರೂಪಿಸಿದೆ.

ವಿಶ್ವ ಸಂಸ್ಥೆ, ಯೂನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ, ಯು.ಎನ್.ಡಿ.ಪಿ, ವಿಶ್ವ ಅಹಾರ ಕಾರ್ಯಕ್ರಮ, ಯು.ಎಸ್.ಎ.ಐ.ಡಿ, ಯು.ಕೆ.ಎ.ಐ.ಡಿ, ಆಸ್ಟ್ರೇಲಿಯನ್‌ಏಡ್, ಡಾನಿಡ, ಸಿಡಾ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸಾರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜಲ ಮತ್ತು ನೈರ್ಮಲ್ಯ, ಗ್ರಾಮೀಣ ಅಭಿವೃದ್ಧಿ, ಪಬ್ಲಿಕ್ ಹೆಲ್ತ್ ಸಂಶೋಧನೆ, ಔಷದೀಯ ಸಂಸ್ಥೆಗಳು, ಆರೋಗ್ಯ ವಿಮೆ, ಕಾರ್ಪೊರೇಟ್ ಆರೋಗ್ಯ ಸಂಸ್ಥೆಗಳು, ಮುಂತಾದ ಸಂಸ್ಥೆಗಳ ಅತ್ಯುನ್ನತ ಸ್ಥಾನಗಳನ್ನು ದೇಶ ವಿದೇಶಗಳಲ್ಲಿ ಎಂ.ಪಿ.ಎಚ್ ಸ್ನಾತಕೋತ್ತರ ಪದವೀಧರರು ಪಡೆದಿದ್ದಾರೆ.

ಈ ಎರಡು ವರ್ಷ ಪೂರ್ಣ ಅವಧಿಯ ಎಂ.ಪಿ.ಎಚ್ ಸ್ನಾತಕೋತ್ತರ ಪದವಿಯು ನಿಟ್ಟೆಯ ಪಬ್ಲಿಕ್ ಹೆಲ್ತ್ ವಿಭಾಗದ ಅಡಿಯಲ್ಲಿ ಈವರೆಗೆ 25 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಲಾಗಿದ್ದು, ಇವರೆಲ್ಲಾ ಯೋಗ್ಯ ಮತ್ತು ಆಕರ್ಷಕ ವೇತನವುಳ್ಳ ಉದ್ಯೋಗ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ಯಾವುದೇ ಆರೋಗ್ಯ ವಿಜ್ಞಾನದ ಪದವೀಧರರು ಅಥವಾ ಅಗತ್ಯವಿರುವ ಸಾಮರ್ಥ್ಯವುಳ್ಳ ಕೆಲ ವಿಜ್ಞಾನೇತರ ಪದವೀಧರರು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಇದೇ ಕ್ಷೇತ್ರದಲ್ಲಿ ಅನುಭವ ಉಳ್ಳವರಿಗೆ ಪ್ರವೇಶ ಪಡೆಯಲು ಹೆಚ್ಚಿನ ಪ್ರಯೋಜನವಾಗುತ್ತದೆ. ನಿಟ್ಟೆಯ ಎಂ.ಪಿ.ಎಚ್. ಕಾರ್ಯಕ್ರಮಕ್ಕೆ ಮಿನ್ನೆಸೋಟಾ ವಿಶ್ವವಿದ್ಯಾಲಯ, ಅಮೇರಿಕಾ, ಮತ್ತು ಯೂರೋಪಿನ ಹೆಸರಾಂತ ಆರೋಗ್ಯ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿರುವ ಕಾರಣ ಕಾರ್ಯಕ್ರಮದ ವಿನ್ಯಾಸವನ್ನು ಇಂತಹಜಾಗತಿಕ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡುವಂತೆ ಅಭಿವೃದ್ಧಿಗೊಳಿಸಲಾಗಿದೆ. ಪ್ರತಿ ವರ್ಷ ಅರ್ಹತೆಯುಳ್ಳ ಎಂ.ಪಿ.ಎಚ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಮೇತಅಮೇರಿಕಾ ಮತ್ತುಯುರೊಪ್ ದೇಶಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ಪಡೆಯಲು ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ,

ಮುಖ್ಯಸ್ಥರು,

ಡಿಪಾರ್ಟ್‌ಮೆಂಟ್ ಆಫ್ ಪಬ್ಲಿಕ್ ಹೆಲ್ತ್

ದೂರವಾಣಿ: 09972893211

ಇಮೇಲ್:doph.kshema@nitte.edu.in

ಜಾಲತಾಣ ವಿಳಾಸ: www.nitte.edu.in ಮತ್ತು www.uhc2017.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News