ಮಸ್ಕತ್ ‘ಸೇವಾ’ದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2017-07-01 17:31 GMT

ಮಸ್ಕತ್, ಜು.1: ಒಮನ್‌ನ ಮಸ್ಕತ್‌ನಲ್ಲಿರುವ ಅನಿವಾಸಿ ಭಾರತೀಯರ ಸಾಮಾಜಿಕ ಹಾಗೂ ಶೈಕ್ಷಣಿಕ ಸಂಘಟನೆ ಎಸ್‌ಇಡಬ್ಲುಎ/ಎಸ್‌ಕೆಎಂಡಬ್ಲುಎ ದ.ಕ. ಮತ್ತು ಉಡುಪಿ ಜಿಲ್ಲೆಯ ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ.

2017-18ನೆ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ 2016-17ನೆ ಸಾಲಿನ 12ನೆ ತರಗತಿ/ ಪಿಯುಸಿ ಪರೀಕ್ಷೆಯಲ್ಲಿ ಶೇ. 70 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹಾಗೂ ಮೂರು ವರ್ಷಗಳ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರಲಿಚ್ಚಿಸುವ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ವಿದ್ಯಾರ್ಥಿಯು ಸ್ವ ವಿವರದೊಂದಿಗೆ ಹೆತ್ತವರ/ ಪೋಷಕರ ವಿವರ, ಕುಟುಂಬದ ವಾರ್ಷಿಕ ಆದಾಯ ಮತ್ತದರ ಮೂಲ ಹಾಗೂ ದೂರವಾಣಿ ಸಂಖ್ಯೆ, ಈಮೇಲ್‌ನೊಂದಿಗೆ ಮನೆ ವಿಳಾಸ ನೀಡತಕ್ಕದ್ದು. ಸ್ಥಳೀಯ ಇಬ್ಬರ ದೂರವಾಣಿ ಸಂಖ್ಯೆ ಸಹಿತ ಸಂಪೂರ್ಣ ವಿಳಾಸದೊಂದಿಗೆ ಅವರ ಶಿಫಾರಸು ಇರಬೇಕು. ವಿದ್ಯಾರ್ಥಿ/ ವಿದ್ಯಾರ್ಥಿನಿಯ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸ್ಥಳೀಯ ಮಸೀದಿ/ ಜಮಾಅತ್‌ನಿಂದ ದೃಢೀಕರಣ ಪತ್ರ ಲಗತ್ತಿಸಬೇಕು. ಸಂಬಂಧ ಪಟ್ಟ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ಪ್ರಮಾಣೀಕೃತ 2016-17ನೆ ಸಾಲಿನ 12ನೆ ತರಗತಿ/ ಪಿಯುಸಿ ಅಂಕಪಟ್ಟಿ ಜೊತೆ ಎಸೆಸೆಲ್ಸಿ ಮತ್ತು 11ನೆ ತರಗತಿಯ ಅಂತಿಮ ಅಂಕಪಟ್ಟಿಯ ಪ್ರತಿಯನ್ನು ಲಗತ್ತಿಸಬೇಕು ಹಾಗೂ ಸೇರಲಿಚ್ಛಿಸುವ ಕೋರ್ಸ್‌ನ ವಿವರ, ಅದರ ಶುಲ್ಕ ಮತ್ತು ಸಂಸ್ಥೆಯ ಹೆಸರನ್ನು ಬರೆದು skmwa@yahoo.co.in ಗೆ ಜುಲೈ 8ರೊಳಗೆ ಸಲ್ಲಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News