ಗೃಹರಕ್ಷಕದಳ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

Update: 2017-07-02 12:18 GMT

ಮಂಗಳೂರು, ಜು.2: ಮುಂಬರುವ ಚುನಾವಣೆಯ ಕರ್ತವ್ಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನೇಮಿಸಬೇಕಾಗಿದ್ದು, ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕನಿಷ್ಠ ಎಸೆಸೆಲ್ಸಿ ಆಗಿರುವ 20ರಿಂದ 50 ವರ್ಷ ಹಾಗೂ ಉತ್ತಮ ದೇಹ ಕ್ಷಮತೆಯನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಪುರುಷರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಎತ್ತರ ಪುರುಷರು : ಕನಿಷ್ಠ 167ಸೆ.ಮಿ. / ಮಹಿಳೆ : ಕನಿಷ್ಠ 151 ಸೆ.ಮೀ ಇರಬೇಕು.

 ಆಸಕ್ತರು ಅರ್ಜಿಯ ಪ್ರತಿಯನ್ನು ಕಮಾಂಡೆಂಟ್‌ರ ಕಚೇರಿ, ಜಿಲ್ಲಾ ಗೃಹರಕ್ಷಕದಳ, ದ.ಕ. ಜಿಲ್ಲೆ, ಮೇರಿಹಿಲ್, ಮಂಗಳೂರು ಇಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಜು.10. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2220562 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News