ಪಂಚ ನದಿಗಳ ತವರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಷಾದಕರ: ರೋಷನ್‍ ಬೇಗ್

Update: 2017-07-07 11:40 GMT

ಚಿಕ್ಕಮಗಳೂರು, ಜು.7: ಪಂಚ ನದಿಗಳ ತವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ವಿಷಾದಕರ ಸಂಗತಿ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಹಾಗೂ ವಕ್ಫ್ ಸಚಿವ ರೋಷನ್‍ಬೇಗ್ ತಿಳಿಸಿದರು.

  ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಅಳವಡಿಸಿರುವ ಇಸ್ರೇಲ್ ತಂತ್ರಜ್ಞಾನ ಬಳಸಿ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಯೋಜನೆ ಅನುಷ್ಟಾನಕ್ಕೆ ಸರಕಾರ ಮುಂದಾಗಿದೆ ಎಂದು ಹೇಳಿದರು.

  ಮಂಗಳೂರಿನಲ್ಲಿ ಸಮುದ್ರವಿದ್ದು ಆ ಭಾಗದ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಅದೇ ಉಪ್ಪು ನೀರನ್ನು ಇಸ್ರೇಲ್ ತಂತ್ರಜ್ಞಾನ ಬಳಸಿ ಸಂಸ್ಕರಿಸಿದರೆ ಕುಡಿಯಲು ಯೋಗ್ಯವಾದ ಉತ್ತಮ ಗುಣಮಟ್ಟದ ನೀರು ದೊರೆಯುತ್ತದೆ. ಈ ನಿಟ್ಟಿನಲ್ಲಿ 1600ಕೋಟಿ ರೂ. ವೆಚ್ಚದಲ್ಲಿ ಮಂಗ ಳೂರಿನ ಸಮುದ್ರದ ಬಳಿ ನೀರು ಸಂಸ್ಕರಣಾ ಘಟಕಸ್ಥಾಪಿಸಲು ಉದ್ದೇ ಶಿಸಿರುವುದಾಗಿ ತಿಳಿಸಿದರು.

  13600 ಕೋಟಿ ವೆಚ್ಚದ ಎತ್ತಿನ ಹೊಳೆ ಯೋಜನೆ ಅನುಷ್ಠಾನಗೊಂ ಡಿದೆ ಬಯಲ ಜಿಲ್ಲೆಗಳಿಗೆ ವರ್ಷದ ನಾಲ್ಕು ತಿಂಗಳ ಕಾಲ ಮಾತ್ರ ನೀರು ಪೂರೈಕೆ ಸಾಧ್ಯ. ಆದರೆ ಸಮುದ್ರ ನೀರನ್ನು ಸಂಸ್ಕರಿಸಿ ವರ್ಷಪೂರ್ತಿ ಕೊಡಬಹುದು. ಈ ಯೋಜನೆಯನ್ನು ಮುಖ್ಯಮಂತ್ರಿಗಳು ಬಜೆಟ್‍ನಲ್ಲೂ ಘೋಷಿಸಿದ್ದಾರೆ. ಬಹುಭಾಗ ಸಮುದ್ರ ಹೊಂದಿರುವ ಇಸ್ರೇಲ್‍ನಲ್ಲಿ ಸಿಹಿ ನೀರು ಪಡೆಯಲು ಅವರು ಕಂಡು ಕೊಂಡ ತಂತ್ರಜ್ಞಾನ ಯಶಸ್ವಿಯಾಗಿ ಅದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

  ಕರಗಡ ಯೋಜನೆ ಮೇ ಅಂತ್ಯ ದೊಳಗೆ ಪೂರ್ಣವಾಗದಿದ್ದರೆ ಗುತ್ತಿಗೆ ದಾರನ ವಿರುದ್ಧ ಕ್ರಮಿನಲ್ ಮೊಕ ದ್ದಮೆ ದಾಖಲಿಸುವಂತೆ ಹಿಂದಿನ ಉಸ್ತುವಾರಿ ಸಚಿವರು ಸೂಚಿಸಿದ್ದರು. ಆದರೆ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ ಎಂಬುದನ್ನು ಸಚಿವರ ಗಮನಕ್ಕೆ ತಂದಾಗ ಕ್ರಮ ಕೈಗೊಳ್ಳು ವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

  ಚಿಕ್ಕಮಗಳೂರು ನಗರದಲ್ಲಿ 2011ರಲ್ಲಿ ಆರಂಭಗೊಂಡಿದ್ದ ಒಳಚರಂಡಿ ಕಾಮಗಾರಿ 2013ಕ್ಕೆ ಮುಗಿಯಬೇಕಿತ್ತು. ಆದರೆ ಇನ್ನು ಅದು ಪೂರ್ಣ ವಾಗಿಲ್ಲ. ಒಂದು ನಗರಕ್ಕೆ ಒಳ ಚರಂಡಿ ವ್ಯವಸ್ಥೆ ಅತ್ಯಂತ ಅಗತ್ಯ. ಇಲ್ಲದಿದ್ದರೆ ಡೆಂಗ್ಯೂನಂತಹ ಸಾಂಕ್ರಾ ಮಿಕ ರೋಗಕ್ಕೆ ಜನತೆ ತುತ್ತಾಗಬೇಕಾಗುತ್ತದೆ ಎಂದ ಅವರು ಈ ಹಿನ್ನೆಲೆಯಲ್ಲಿ ಇಲ್ಲಿನ ಒಳಚರಂಡಿ ಕಾಮ ಗಾರಿ ಕುರಿತಂತೆ ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಹಣ ಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

  ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಪಂ ಸಿಇಓ ಡಾ. ಆರ್.ರಾಗಪ್ರಿಯ, ಎಸ್ಪಿ ಕೆ.ಅಣ್ಣಾಮಲೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News